ರಾಜಕೀಯಕ್ಕೆ ಬರ್ತಾರಾ ಹರ್ಷಿಕಾ ಪೂಣಚ್ಚ! ಪ್ರಚಾರದ ವೇಳೆ ನಟಿ ಹೇಳಿದ್ದೇನು?
ಚಿಕ್ಕಬಳ್ಳಾಪುರ: ನಟಿ ಹರ್ಷಿಕಾ ಪೂಣಚ್ಚ ನಗರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಟಿ ಹರ್ಷಿಕಾ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಪರ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಹೋದ ಮನೆಗಳಲ್ಲೆಲ್ಲಾ ಪಾನಕ ಮಜ್ಜಿಗೆ ನೀರು ಟೀ ಕಾಫಿ ಕೊಟ್ಟು ಸತ್ಕರಿಸುತ್ತಿದ್ದಾರೆ. ಜನರ ಜೊತೆ ಒಡನಾಟಕ್ಕೆ ತುಂಬ ಖುಷಿಯಾಗುತ್ತೆ ಎಂದು ಹೇಳಿದ ನಟಿ ಹರ್ಷಿಕಾ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯೂಜಿಯಾಗಿದ್ದೇನೆ. ದೈವೇಚ್ಛೆಯಿದ್ದು, ದೇವರು ತಥಾಸ್ತು ಅಂದ್ರೆ ಏನ್ ಬೇಕಾದ್ರೂ ಆಗಬಹುದು ಎಂದು ಭವಿಷ್ಯದಲ್ಲಿ […]
ಚಿಕ್ಕಬಳ್ಳಾಪುರ: ನಟಿ ಹರ್ಷಿಕಾ ಪೂಣಚ್ಚ ನಗರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಟಿ ಹರ್ಷಿಕಾ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಪರ ಪ್ರಚಾರ ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಹೋದ ಮನೆಗಳಲ್ಲೆಲ್ಲಾ ಪಾನಕ ಮಜ್ಜಿಗೆ ನೀರು ಟೀ ಕಾಫಿ ಕೊಟ್ಟು ಸತ್ಕರಿಸುತ್ತಿದ್ದಾರೆ. ಜನರ ಜೊತೆ ಒಡನಾಟಕ್ಕೆ ತುಂಬ ಖುಷಿಯಾಗುತ್ತೆ ಎಂದು ಹೇಳಿದ ನಟಿ ಹರ್ಷಿಕಾ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯೂಜಿಯಾಗಿದ್ದೇನೆ. ದೈವೇಚ್ಛೆಯಿದ್ದು, ದೇವರು ತಥಾಸ್ತು ಅಂದ್ರೆ ಏನ್ ಬೇಕಾದ್ರೂ ಆಗಬಹುದು ಎಂದು ಭವಿಷ್ಯದಲ್ಲಿ ರಾಜಕಾರಣ ಸೇರುವ ಬಗ್ಗೆ ಸುಳಿವು ನೀಡಿದರು.
ಜನಸೇವೆಗೆ ರಾಜಕೀಯ ರಂಗ ಬೆಸ್ಟ್. ಚಿಕ್ಕಬಳ್ಳಾಪುರದ ಜನ ನನಗೆ ತುಂಬಾ ಮಹತ್ವ ಕೊಡುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ನಗರದ ಒಂದನೆ ವಾರ್ಡ್ನಲ್ಲಿ ಪ್ರಚಾರದ ವೇಳೆ ಅವರು ತಿಳಿಸಿದರು.
ತಾರಾ ದಂಡು: ಬಿಗ್ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ ಮತ್ತು ನಟ ದಿಗಂತ್ ಸಹ ಬಿಜೆಪಿ ಅಭ್ಯರ್ಥಿಯ ಪರ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.
Published On - 2:46 pm, Thu, 21 November 19