AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆದರಿದ ಬೊಂಬೆಯಾದ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್​ಗೆ ಹೆದರಿ ಪ್ರಚಾರದಿಂದ ಹಿಂದೆ

ಬೆಳಗಾವಿ: ಮುಂದಿನ ತಿಂಗಳು ಡಿಸೆಂಬರ್ 5 ರಂದು ಗೋಕಾಕ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಅಣ್ಣ ತಮ್ಮಂದಿರ ಮಧ್ಯೆ ನೇರಾನೇರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಿಂದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಮತ್ತು ಕಾಂಗ್ರೆಸ್​ನಿಂದ ಲಖನ್​ ಜಾರಕಿಹೊಳಿ‌ ಕಣದಲ್ಲಿದ್ದಾರೆ. ಈ ಮಧ್ಯೆ, ಕ್ಷೇತ್ರದ ಪ್ರಭಾವಿ ರಾಜಕಾರಣಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜಾರಕಿಹೊಳಿ‌ ಕುಟುಂಬಕ್ಕೆ ಬೆದರಿ ಗೋಕಾಕ್ ಪ್ರಚಾರ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಲಿಂಗಾಯತ ಮತಗಳ ಜವಾಬ್ದಾರಿ ನೀಡಿದ್ದ ಹೈಕಮಾಂಡ್! ಕೈ ಅಭ್ಯರ್ಥಿ ಲಖನ್​ ಜಾರಕಿಹೊಳಿ‌ಗೆ ಕೊನೆ […]

ಬೆದರಿದ ಬೊಂಬೆಯಾದ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್​ಗೆ ಹೆದರಿ ಪ್ರಚಾರದಿಂದ ಹಿಂದೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 21, 2019 | 12:15 PM

Share

ಬೆಳಗಾವಿ: ಮುಂದಿನ ತಿಂಗಳು ಡಿಸೆಂಬರ್ 5 ರಂದು ಗೋಕಾಕ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಅಣ್ಣ ತಮ್ಮಂದಿರ ಮಧ್ಯೆ ನೇರಾನೇರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಿಂದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಮತ್ತು ಕಾಂಗ್ರೆಸ್​ನಿಂದ ಲಖನ್​ ಜಾರಕಿಹೊಳಿ‌ ಕಣದಲ್ಲಿದ್ದಾರೆ. ಈ ಮಧ್ಯೆ, ಕ್ಷೇತ್ರದ ಪ್ರಭಾವಿ ರಾಜಕಾರಣಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜಾರಕಿಹೊಳಿ‌ ಕುಟುಂಬಕ್ಕೆ ಬೆದರಿ ಗೋಕಾಕ್ ಪ್ರಚಾರ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಲಿಂಗಾಯತ ಮತಗಳ ಜವಾಬ್ದಾರಿ ನೀಡಿದ್ದ ಹೈಕಮಾಂಡ್! ಕೈ ಅಭ್ಯರ್ಥಿ ಲಖನ್​ ಜಾರಕಿಹೊಳಿ‌ಗೆ ಕೊನೆ ಘಳಿಗೆಯಲ್ಲಿ ಕೈಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್ ಕ್ಷೇತ್ರದ ಉಸ್ತುವಾರಿಗೆ ಗುಡ್ ಬೈ ಹೇಳಿ ಅಥಣಿಗೆ ಶಿಫ್ಟ್​ ಆಗಿದ್ದಾರೆ. ಆಕ್ಚುಯಲಿ, ಕಾಂಗ್ರೆಸ್​ ಹೈಕಮಾಂಡ್ ಶಾಸಕಿ ಹೆಬ್ಬಾಳ್ಕರ್​​ಗೆ ಕ್ಷೇತ್ರದ ಲಿಂಗಾಯತ ಮತಗಳ ಒಗ್ಗೂಡಿಸುವ ಜವಾಬ್ದಾರಿಯನ್ನ ನೀಡಿತ್ತು. ಆದ್ರೆ ನಿನ್ನೆಯಿಂದ ದಿಢೀರ್ ಉಸ್ತುವಾರಿ ಕ್ಷೇತ್ರ ಬದಲು ಮಾಡಿಕೊಂಡ ಶಾಸಕಿ, ನಾಮಪತ್ರ ಸಲ್ಲಿಕೆಗೂ ಗೈರಾಗಿದ್ದರು.

ರಮೇಶ್ ಗೆದ್ದು ಬಂದ್ರೆ ರಾಜಕೀಯವಾಗಿ ತೊಂದರೆಯ ಸಾಧ್ಯತೆ: ರಮೇಶ್ ಜಾರಕಿಹೊಳಿ‌ ಗೆದ್ದು ಅಧಿಕಾರಕ್ಕೆ ಬಂದರೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ತೊಂದರೆಯಾಗುವ ಸಾಧ್ಯತೆ ಎದುರಾಗುತ್ತದೆ ಎಂಬುದು ಲಕ್ಷ್ಮೀ ಹೆಬ್ಬಾಳ್ಕರ್ ಮುಂದಾಲೋಚನೆ. ಈ ಹಿನ್ನೆಲೆ ಭಯಗೊಂಡು ಗೋಕಾಕ್ ಕ್ಷೇತ್ರಕ್ಕೆ ಒಂದು ಬಾರಿಯೂ ಕಾಲಿಡದೆ, ಯುದ್ಧಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿದ್ರಾ ಹೆಬ್ಬಾಳ್ಕರ್ ಎಂದು ಕ್ಷೇತ್ರದ ಜನ ಮಾತನಾಡಿಕೊಳ್ಳತೊಡಗಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಾರದಂತೆ ಕೆಲವು ಬಿಜೆಪಿ ನಾಯಕರು ಹೆಬ್ಬಾಳ್ಕರ್ ಮನವೊಲಿಸಿದ್ದಾರೆ. ಹಾಗಾಗಿ, ರಾಜಕೀಯ ಭವಿಷ್ಯ ದೃಷ್ಟಿಯಿಂದ ಸೈಲೆಂಟ್ ಆಗಿ ಹೆಬ್ಬಾಳ್ಕರ್ ಪ್ರಚಾರದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮಾಜಿ ಸಚಿವ ಸತೀಶ್‌ ಜಾರಕಿಹೊಳಿ‌ ಗೋಕಾಕ್ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಡಿಕೆ ಶಿವಕುಮಾರ್ ಕೂಡ ಪ್ರಚಾರಕ್ಕೆ ಆಗಮಿಸಲಿದ್ದಾರೆ ಅಂದಿದ್ದರು.

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ