ಮೈಸೂರು: ಅತಿದೊಡ್ಡ ಪ್ರಜಾಪ್ರಭುತ್ವ ಇರುವ ಭಾರತ ಇಂಟರ್ನೆಟ್ ಬಂದ್ ಮಾಡುವಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಟ್ವಿಟರ್ನಲ್ಲಿ ಟೀಕೆ ಮಾಡಿದ್ದಾರೆ.
ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಕುರುಡುನಂಬಿಕೆ ಇದಲ್ಲವೇ? ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುವುದು ತಪ್ಪು ಹೆಚ್.ಸಿ.ಮಹದೇವಪ್ಪ ಅಂಕಿಅಂಶದೊಂದಿಗೆ ಟೀಕೆ ಮಾಡಿದ್ದಾರೆ. ಜೊತೆಗೆ ನರೇಂದ್ರ ಮೋದಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂದು ಹೇಳಿದ್ದಾರೆ.
ಇಂಟರ್ನೆಟ್ ಸ್ಥಗಿತಕ್ಕೆ ಕಾರಣ
ಜನವರಿ 26 ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದಿಂದ ಕೆಲವು ಗಂಟೆಗಳ ಕಾಲ ದೆಹಲಿಯ ಕೆಲವು ಕಡೆ ಇಂಟರ್ನೆಟ್ ಬಂದ್ ಮಾಡಲಾಗಿತ್ತು. ಗಡಿ ಭಾಗದಲ್ಲಿ ಮುಂದುವರೆದ ರೈತರ ಪ್ರತಿಭಟನೆ ವೇಳೆ ಗೃಹ ವ್ಯವಹಾರಗಳ ಸಚಿವಾಲಯವು ಇಂಟರ್ನೆಟ್ನ ಸ್ಥಗಿತಗೊಳಿಸಿತ್ತು. ರಾಷ್ಟ್ರ ರಾಜಧಾನಿಯ ಕೆಲ ಪ್ರದೇಶಗಳಲ್ಲಿ ಇಂಟರ್ನೆಟ್ ನಿರ್ಬಂಧ ಮುಂದುವರಿದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
World's Largest #democracy ranks 1st in Internet Shutdowns. It has become tool to curb speech of Public in India. Isn't it's bigotry in the name of democracy? @narendramodi government is afraid of the truth.
He is the weakest PM, India has ever seen. pic.twitter.com/nNJv8UP2n8
— Dr H.C.Mahadevappa (@CMahadevappa) February 7, 2021
ಎಸ್ಟಿ ಪ್ರವರ್ಗದ ಬೇಡಿಕೆಯೊಂದಿಗೆ ರವಿವಾರ ಕುರಬ ಸಮಾಜದ ಬೃಹತ್ ರ‍್ಯಾಲಿ.. ಸಿದ್ದು, ಇನ್ನೂ ಕೆಲವರ ಗೈರು ಸಾಧ್ಯತೆ