ಸಿದ್ದರಾಮಯ್ಯ ಹೇಳಿದ ಕ್ರಾಸ್ ಬ್ರೀಡ್​ ವಿಚಾರ: ಎಚ್.ಡಿ‌. ಕುಮಾರಸ್ವಾಮಿ ಏನಂದ್ರು?

ಲವ್‌ ಜಿಹಾದ್‌ಗಿಂತ ಮುಖ್ಯವಾದ ಹಲವು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಎಂದು ಬಿಜೆಪಿ ಚಿಂತನೆಗೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಹೇಳಿದ ಕ್ರಾಸ್ ಬ್ರೀಡ್​ ವಿಚಾರ: ಎಚ್.ಡಿ‌. ಕುಮಾರಸ್ವಾಮಿ ಏನಂದ್ರು?

Updated on: Dec 02, 2020 | 2:06 PM

ಮೈಸೂರು: ಕ್ರಾಸ್ ಬ್ರೀಡ್ ವಿಚಾರ ನನಗೆ ಬೇಡ. ಅದು ದೊಡ್ಡವರಿಗೆ ಸಂಬಂಧಪಟ್ಟಿದ್ದು ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ, ಲವ್ ಜಿಹಾದ್ ಕಾಯ್ದೆ ತರುವುದು ಮೂರ್ಖತನದ ಚಿಂತನೆ. ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಎಚ್​ಡಿಕೆ ಈಗ ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾಯ್ದೆ ರೂಪಿಸಲು ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಇಲ್ಲಿ ಲವ್‌ ಜಿಹಾದ್‌ಗಿಂತ ಮುಖ್ಯವಾದ ಹಲವು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಎಂದು ಬಿಜೆಪಿ ಚಿಂತನೆಗೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ತೀವ್ರವಾಗಿದೆ. ಧರಣಿನಿರತ ಇಬ್ಬರು ಮೃತಪಟ್ಟ ವರದಿಯನ್ನು ನೋಡಿದ್ದೇನೆ. ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ರೈತರ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ. ವಾರಾಣಸಿಯಲ್ಲಿ ದೀಪ ಹಚ್ಚಬೇಡಿ, ರೈತರ ಮನೆ ಬೆಳಕಾಗಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ಮಾಡಿದ್ದಾರೆ.

ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ -ಲವ್​ ಜಿಹಾದ್​ಗೆ ಸಿದ್ದರಾಮಯ್ಯ ಕೌಂಟರ್​

ದೆಹಲಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ: ಕುಮಾರಸ್ವಾಮಿ ಸರಣಿ ಟ್ವೀಟ್

 

Published On - 2:03 pm, Wed, 2 December 20