‘R.R. ನಗರದಲ್ಲಿ ಖರ್ಚು ವೆಚ್ಚದ ಕೊರತೆಯಾಗಿದೆ.. ಇಲ್ಲದಿದ್ರೆ ಅಲ್ಲೂ ಗೆಲ್ಲುವ ಅವಕಾಶವಿತ್ತು’

ರಾಮನಗರ: ಶಿರಾ ಕ್ಷೇತ್ರದಲ್ಲಿ ನಾವು ಗೆಲ್ತೇವೆ. ಬಿಜೆಪಿಯವರು ಹಣದ ಹೊಳೆ ಹರಿಸಿದ್ದೇವೆ. ಹಾಗಾಗಿ, ಗೆಲ್ತೇವೆ ಎಂದು ಅಂದುಕೊಂಡಿದ್ದಾರೆ ಎಂದು ಜಿಲ್ಲೆಯ ಕೂನಗಲ್ ಗ್ರಾಮದಲ್ಲಿ ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿದ್ದಾರೆ. ಶಿರಾದಲ್ಲಿ ಕೆ.ಆರ್. ಪೇಟೆ ಯಂತೆ ಎಡವಿಲ್ಲ ಶಿರಾ ಹಾಗೂ ಆರ್.ಆರ್. ನಗರ ಉಪಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಕೆ.ಆರ್. ಪೇಟೆ ಚುನಾವಣೆಯಲ್ಲಿ ನಾವು ಸ್ವಲ್ಪ ಎಡವಿದ್ವಿ. ಆದರೆ, ಅಲ್ಲಿ ಆದಂಥ ತಪ್ಪುಗಳು ಶಿರಾದಲ್ಲಿ ಆಗಿಲ್ಲ ಎಂದು ಹೇಳಿದರು. ಎರಡು ಕ್ಷೇತ್ರದಲ್ಲೂ ಪಕ್ಷದ ಗೌರವ ಉಳಿಯಲಿದೆ […]

‘R.R. ನಗರದಲ್ಲಿ ಖರ್ಚು ವೆಚ್ಚದ ಕೊರತೆಯಾಗಿದೆ.. ಇಲ್ಲದಿದ್ರೆ ಅಲ್ಲೂ ಗೆಲ್ಲುವ ಅವಕಾಶವಿತ್ತು’
ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ
Updated By: ಸಾಧು ಶ್ರೀನಾಥ್​

Updated on: Nov 05, 2020 | 3:26 PM

ರಾಮನಗರ: ಶಿರಾ ಕ್ಷೇತ್ರದಲ್ಲಿ ನಾವು ಗೆಲ್ತೇವೆ. ಬಿಜೆಪಿಯವರು ಹಣದ ಹೊಳೆ ಹರಿಸಿದ್ದೇವೆ. ಹಾಗಾಗಿ, ಗೆಲ್ತೇವೆ ಎಂದು ಅಂದುಕೊಂಡಿದ್ದಾರೆ ಎಂದು ಜಿಲ್ಲೆಯ ಕೂನಗಲ್ ಗ್ರಾಮದಲ್ಲಿ ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿದ್ದಾರೆ.

ಶಿರಾದಲ್ಲಿ ಕೆ.ಆರ್. ಪೇಟೆ ಯಂತೆ ಎಡವಿಲ್ಲ
ಶಿರಾ ಹಾಗೂ ಆರ್.ಆರ್. ನಗರ ಉಪಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಕೆ.ಆರ್. ಪೇಟೆ ಚುನಾವಣೆಯಲ್ಲಿ ನಾವು ಸ್ವಲ್ಪ ಎಡವಿದ್ವಿ. ಆದರೆ, ಅಲ್ಲಿ ಆದಂಥ ತಪ್ಪುಗಳು ಶಿರಾದಲ್ಲಿ ಆಗಿಲ್ಲ ಎಂದು ಹೇಳಿದರು.

ಎರಡು ಕ್ಷೇತ್ರದಲ್ಲೂ ಪಕ್ಷದ ಗೌರವ ಉಳಿಯಲಿದೆ
ಆದರೆ, ಆರ್.ಆರ್.ನಗರ ಕ್ಷೇತ್ರದಲ್ಲಿ ಚುನಾವಣೆಯ ಈಗಿನ ಪದ್ಧತಿಯ ಖರ್ಚು ವೆಚ್ಚದಲ್ಲಿ ಕೊರತೆಯಾಗಿದೆ. ಇಲ್ಲದಿದ್ರೆ ಆರ್.ಆರ್. ನಗರ ಕ್ಷೇತ್ರದಲ್ಲೂ ನಾವು ಗೆಲ್ಲುವ ಅವಕಾಶವಿತ್ತು. ಆದರೆ, ಎರಡು ಕ್ಷೇತ್ರದಲ್ಲೂ ಪಕ್ಷದ ಗೌರವ ಉಳಿಯಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.