ನೋಡ್ರೀ DC, ಸಿಎಂ ಆಫೀಸಲ್ಲಿ ಸೈನ್ ಆದ್ರೆ ಬೆಳಿಗ್ಗೆಗೇ ಕಾಪಿ ತರಿಸ್ಕೊಳ್ತೀನಿ: ಇದು ರೇವಣ್ಣ ಕೆಪಾಸಿಟಿ!

|

Updated on: Dec 23, 2019 | 2:03 PM

ಹಾಸನ: ಮಾಜಿ ಸಚಿವ, ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಹೆಚ್ ಡಿ ರೇವಣ್ಣ ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ‌ಸರ್ಕಾರಿ ಕೆಲಸಗಳಲ್ಲಿ ವಿಳಂಬ ಆಗುತ್ತಿದೆ ಎಂದು ಆರೋಪಿಸಿ, ಹೊಳೆನರಸೀಪುರ ಪುರಸಭೆ ಸದಸ್ಯರ ಜೊತೆ ಡಿಸಿ ಕಚೇರಿ ಎದುರು ಅವರು ಧರಣಿಗೆ ನಿರ್ಧರಿಸಿದ್ದಾರೆ. ಸದಸ್ಯರಿಗೂ ಮೊದಲೇ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಾರಿನಲ್ಲಿ ಕುಳಿತಿದ್ದರು. ಮಾಜಿ ಸಚಿವ ರೇವಣ್ಣ ಕಾರಿನಲ್ಲಿರೊ ಬಗ್ಗೆ ಮಾಹಿತಿ ಪಡೆದು, ಹೊರಗೆ ಬಂದ ಡಿಸಿ ಒಳಗೆ ಬನ್ನಿ […]

ನೋಡ್ರೀ DC, ಸಿಎಂ ಆಫೀಸಲ್ಲಿ ಸೈನ್ ಆದ್ರೆ ಬೆಳಿಗ್ಗೆಗೇ ಕಾಪಿ ತರಿಸ್ಕೊಳ್ತೀನಿ: ಇದು ರೇವಣ್ಣ ಕೆಪಾಸಿಟಿ!
Follow us on

ಹಾಸನ: ಮಾಜಿ ಸಚಿವ, ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಹೆಚ್ ಡಿ ರೇವಣ್ಣ ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ‌ಸರ್ಕಾರಿ ಕೆಲಸಗಳಲ್ಲಿ ವಿಳಂಬ ಆಗುತ್ತಿದೆ ಎಂದು ಆರೋಪಿಸಿ, ಹೊಳೆನರಸೀಪುರ ಪುರಸಭೆ ಸದಸ್ಯರ ಜೊತೆ ಡಿಸಿ ಕಚೇರಿ ಎದುರು ಅವರು ಧರಣಿಗೆ ನಿರ್ಧರಿಸಿದ್ದಾರೆ.

ಸದಸ್ಯರಿಗೂ ಮೊದಲೇ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಾರಿನಲ್ಲಿ ಕುಳಿತಿದ್ದರು. ಮಾಜಿ ಸಚಿವ ರೇವಣ್ಣ ಕಾರಿನಲ್ಲಿರೊ ಬಗ್ಗೆ ಮಾಹಿತಿ ಪಡೆದು, ಹೊರಗೆ ಬಂದ ಡಿಸಿ ಒಳಗೆ ಬನ್ನಿ ಸರ್ ಎಂದ್ರೂ ರೇವಣ್ಣ ಬಾರದೆ ಹೊರಗೇ ಧರಣಿ ಕೂರ್ತೀನಿ ಎಂದಿದ್ದಾರೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಡಿಸಿಗೆ ವಿವರಿಸುತ್ತಾ ರೇವಣ್ಣ ಹೊರಗೇ ನಿಂತಿದ್ದಾರೆ.

ನೋಡ್ರೀ ಗಿರೀಶ್ (DC), ಸಿಎಂ ಆಫೀಸಲ್ಲಿ ಸೈನ್ ಆದ್ರೆ ಬೆಳಿಗ್ಗೆ ನಂಗೊಂದ್ ಕಾಪಿ ತರಿಸಿಕೊಳ್ತೀನಿ. ಅಷ್ಟು ಶಕ್ತಿ ಇಟ್ಟುಕೊಂಡಿರೊ ನಾಯಕ ನಾನು. ಇಂತಹವೆಲ್ಲಾ ನೋಡಿಬಿಟ್ಟಿರೋನು ನಾನು. ಸಿದ್ದರಾಮಯ್ಯರೂ ವಿಪಕ್ಷ ನಾಯಕ, ನಾನೂ ವಿಪಕ್ಷ ನಾಯಕನಾಗಿದ್ದವನೇ ಎಂದು DC ಆಫೀಸ್ ಎದುರು ಪ್ರತಿಭಟನೆ ನಡೆಸಿದ ವೇಳೆ ಡಿಸಿಗೆ ರೇವಣ್ಣ ಆವಾಜ್​ ಹಾಕಿದ್ದಾರೆ. ನಾನು ಕಾನೂನು ಬಿಟ್ಟು ಬೇರೆ ಏನೂ ಮಾಡಲ್ಲ ಎಂದೂ ಡಿಸಿ ಬಗ್ಗೆ ರೇವಣ್ಣ ಗರಂ ಆದರು.

Published On - 11:10 am, Mon, 23 December 19