ರಾಜರಾಜೇಶ್ವರಿ ಆಸ್ಪತ್ರೆ ವೈದ್ಯರ ಯಡವಟ್ಟು ಆರೋಪ: ಹೆರಿಗೆ ವೇಳೆ ಬಾಣಂತಿ, ಮಗು ಸಾವು

ಬೆಂಗಳೂರು: ಆಪರೇಷನ್ ವೇಳೆ ವೈದ್ಯರ ಯಡವಟ್ಟಿನಿಂದ ಬಾಣಂತಿ ಮತ್ತು ನವಜಾತ ಶಿಶು ಮೃತಪಟ್ಟಿದೆ ಎಂದು ರಾಜರಾಜೇಶ್ವರಿ ಅಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಮೃತರ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರ್​ಆರ್​ ಅಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಬಾಣಂತಿ ಸುಮಿತ್ರಾ ಕಳೆದ ಗುರುವಾರ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ರು. ಶುಕ್ರವಾರ ರಾತ್ರಿ ಸುಮಿತ್ರಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನ ನಂತ್ರ ವೈದ್ಯರು ಸರಿಯಾದ ಚಿಕಿತ್ಸೆ ಕೊಟ್ಟಿಲ್ಲ. ಬಿಪಿ ಹೆಚ್ಚು ಕಡಿಮೆಯಾಗುತ್ತಿದ್ರು […]

ರಾಜರಾಜೇಶ್ವರಿ ಆಸ್ಪತ್ರೆ ವೈದ್ಯರ ಯಡವಟ್ಟು ಆರೋಪ: ಹೆರಿಗೆ ವೇಳೆ ಬಾಣಂತಿ, ಮಗು ಸಾವು
Follow us
ಸಾಧು ಶ್ರೀನಾಥ್​
|

Updated on:Dec 23, 2019 | 2:04 PM

ಬೆಂಗಳೂರು: ಆಪರೇಷನ್ ವೇಳೆ ವೈದ್ಯರ ಯಡವಟ್ಟಿನಿಂದ ಬಾಣಂತಿ ಮತ್ತು ನವಜಾತ ಶಿಶು ಮೃತಪಟ್ಟಿದೆ ಎಂದು ರಾಜರಾಜೇಶ್ವರಿ ಅಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಮೃತರ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರ್​ಆರ್​ ಅಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಬಾಣಂತಿ ಸುಮಿತ್ರಾ ಕಳೆದ ಗುರುವಾರ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ರು. ಶುಕ್ರವಾರ ರಾತ್ರಿ ಸುಮಿತ್ರಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನ ನಂತ್ರ ವೈದ್ಯರು ಸರಿಯಾದ ಚಿಕಿತ್ಸೆ ಕೊಟ್ಟಿಲ್ಲ. ಬಿಪಿ ಹೆಚ್ಚು ಕಡಿಮೆಯಾಗುತ್ತಿದ್ರು ಆಪರೇಷನ್ ಮಾಡಿದ್ದಾರೆ. ಆಪರೇಷನ್ ವೇಳೆ ಲಿವರ್​ಗೆ ಡ್ಯಾಮೇಜ್​ ಆಗಿದೆ. ಪರಿಣಾಮ ಸತತ ರಕ್ತಸ್ರಾವದಿಂದ ಸುಮಿತ್ರಾ ಬಳಲಿದ್ದಾರೆ.

ರಕ್ತಸ್ರಾವ ನಿಲ್ಲಿಸುವಲ್ಲಿ ವೈದ್ಯರು ವಿಫಲ: ರಕ್ತಸ್ರಾವ ನಿಲ್ಲಿಸುವಲ್ಲಿ ವಿಫಲವಾಗಿದ್ದ ರಾಜರಾಜೇಶ್ವರಿ ಅಸ್ಪತ್ರೆ ವೈದ್ಯರು, ಮಗುವನ್ನು ಆಪರೇಷನ್ ಮೂಲಕ ಹೊರತೆಗೆದಿದ್ದಾರೆ. ಬೇರೆಡೆ ಕರೆದೊಯ್ಯವುದಾಗಿ ಕುಟುಂಬದವರು ಹೇಳಿದರೂ ವೈದ್ಯರು ಕಳುಹಿಸಿಲ್ಲ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊನೆ ಕ್ಷಣದಲ್ಲಿ ಆಸ್ಪತ್ರೆಯಿಂದ ವೈದ್ಯರು ಕಳುಹಿಸಿದ್ದರು. ನಂತರ ಬಿಜಿಎಸ್​ ಆಸ್ಪತ್ರೆಗೆ ಬಾಣಂತಿಯನ್ನು ಕುಟುಂಬದವರು ದಾಖಲು ಮಾಡಿದ್ದಾರೆ. ಆದ್ರೆ ಬಿಜಿಎಸ್ ಅಸ್ಪತ್ರೆಯಲ್ಲಿ ಸುಮಿತ್ರಾ ಮೃತಪಟ್ಟಿದ್ದಾರೆ. ರಾಜರಾಜೇಶ್ವರಿ ನಗರ ಅಸ್ಪತ್ರೆಯಲ್ಲಿದ್ದ ಮಗು ಸಹ ತಡರಾತ್ರಿ ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬಾಣಂತಿ ಮತ್ತು ಮಗುವಿನ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದೆ. ರಾಜರಾಜೇಶ್ವರಿ ಅಸ್ಪತ್ರೆ ವಿದ್ಯಾರ್ಥಿಗಳು ಆಪರೇಷನ್ ಮಾಡಿದ್ದರಿಂದ ತಾಯಿ-ಮಗು ಮೃತಪಟ್ಟಿದೆ ಎಂದು ಆರೋಪಿಸಿ ಅಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

Published On - 11:50 am, Mon, 23 December 19