CAA ವಾಪಸ್ ಪಡೆಯೋ ತನಕ ಹೋರಾಟ: ಸದ್ಯಕ್ಕೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

CAA ವಾಪಸ್ ಪಡೆಯೋ ತನಕ ಹೋರಾಟ: ಸದ್ಯಕ್ಕೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಹಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಕಂಟೋನ್ಮೆಂಟ್ ಬಳಿಯ ಖುದೂಸ್​ ​ಸಾಹೇಬ್ ಈದ್ಗಾ ಮೈದಾನದಲ್ಲಿ ಸಭೆ ಆಯೋಜಿಸಲಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಸಮಾವೇಶದಲ್ಲಿ ಪ್ರಗತಿಪರ ಸಂಘಟನೆಗಳು ಸಹ ಭಾಗಿಯಾಗಿವೆ. ಇದು ಬಿಜೆಪಿಯವರ ಅಪ್ಪನ ದೇಶವಲ್ಲ: ಇದು ಬಿಜೆಪಿಯವರ ಅಪ್ಪನ ದೇಶವಲ್ಲ. ಖ್ವಾಜಾ, ಗಾಂಧಿಯ ರಾಷ್ಟ್ರವಿದು. ಧರ್ಮದ ವಿರುದ್ಧ ಕಾನೂನು ಮಾಡಲು ಮುಸ್ಲಿಮರು ಬಿಡುವುದಿಲ್ಲ. 10% ಮುಸ್ಲಿಮರು ಹೊರಬಂದಿದ್ದಕ್ಕೆ ಹೊತ್ತಿ ಉರಿಯುತ್ತಿದೆ. ಇನ್ನು ಎಲ್ಲರೂ ಹೊರ ಬಂದ್ರೆ ಏನಾಗುತ್ತೋ […]

sadhu srinath

|

Dec 23, 2019 | 1:37 PM

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಹಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಕಂಟೋನ್ಮೆಂಟ್ ಬಳಿಯ ಖುದೂಸ್​ ​ಸಾಹೇಬ್ ಈದ್ಗಾ ಮೈದಾನದಲ್ಲಿ ಸಭೆ ಆಯೋಜಿಸಲಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಸಮಾವೇಶದಲ್ಲಿ ಪ್ರಗತಿಪರ ಸಂಘಟನೆಗಳು ಸಹ ಭಾಗಿಯಾಗಿವೆ.

ಇದು ಬಿಜೆಪಿಯವರ ಅಪ್ಪನ ದೇಶವಲ್ಲ: ಇದು ಬಿಜೆಪಿಯವರ ಅಪ್ಪನ ದೇಶವಲ್ಲ. ಖ್ವಾಜಾ, ಗಾಂಧಿಯ ರಾಷ್ಟ್ರವಿದು. ಧರ್ಮದ ವಿರುದ್ಧ ಕಾನೂನು ಮಾಡಲು ಮುಸ್ಲಿಮರು ಬಿಡುವುದಿಲ್ಲ. 10% ಮುಸ್ಲಿಮರು ಹೊರಬಂದಿದ್ದಕ್ಕೆ ಹೊತ್ತಿ ಉರಿಯುತ್ತಿದೆ. ಇನ್ನು ಎಲ್ಲರೂ ಹೊರ ಬಂದ್ರೆ ಏನಾಗುತ್ತೋ ಗೊತ್ತಿಲ್ಲ ಎಂದು ಮೌಲಾನ ಜುಲ್ಫಿಕರ್ ನೂರಿ ಹೇಳಿದ್ದಾರೆ. 500 ವರ್ಷದ ಕಾಗದಗಳು ಬಾಬ್ರಿ ಮಸೀದಿಯನ್ನ ಉಳಿಸಿಲ್ಲ. ಇನ್ನು ನಮ್ಮ ದಾಖಲೆಗಳನ್ನ ಕೊಡೋದು ಹೇಗೆ ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

CAA ವಾಪಸ್ ಪಡೆಯೋ ತನಕ ಹೋರಾಟ ನಿಲ್ಲಲ್ಲ: ಪೌರತ್ವ ತಿದ್ದುಪಡಿ ಕಾಯ್ದೆ ಹರಿದು ಹಂಚುವ ಕಾನೂನು. ಈ ದೇಶದಲ್ಲಿ ಸರ್ವಧರ್ಮದ ಜನರಿದ್ದಾರೆ. ಇದರ ಅಗತ್ಯ ನಮಗಿಲ್ಲ, ಇದನ್ನು ವಾಪಸ್​ ತೆಗೆದುಕೊಳ್ಳಿ. ಸಿಎಎ, ಎನ್ಆರ್​ಸಿ ವಾಪಸ್ ಪಡೆಯೋ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಮೌಲಾನ ಮಕ್ಸೂದ್ ಇಮ್ರಾನ್ ಹೇಳಿದ್ದಾರೆ.

ಪೊಲೀಸ್ ಬಂದೋಬಸ್ತ್: ಬೆಂಗಳೂರಿನಲ್ಲಿ ಸಿಎಎ ಪರ, ವಿರೋಧವಾಗಿ ಪ್ರತಿಭಟನೆ ನಡೀತಿರುವ ಹಿನ್ನೆಲೆ ಟೌನ್ ಹಾಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ. ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆಗೆ ಅನುಮತಿ ಇಲ್ಲ. ಆದ್ರೂ ಸಹ ಮುಂಜಾಗ್ರತಾ ಕ್ರಮವಾಗಿ 1 ಸಿಎಆರ್ ತುಕಡಿ, 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಹಲವೆಡೆ ಟ್ರಾಫಿಕ್ ಜಾಮ್:  ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸಿದ್ದು, ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಂಟೋನ್ಮೆಂಟ್ ಸುತ್ತಮುತ್ತ ರಸ್ತೆಗಳಾದ ಜಯಮಹಲ್ ರೋಡ್, ಬೆನ್ಸನ್ ಟೌನ್ ರೋಡ್, ನಂದಿದುರ್ಗ ರೋಡ್, ವಸಂತ ನಗರ ಸಂಪರ್ಕಿಸುವ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಟ್ರಾಫಿಕ್ ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada