ರಾಮನಗರ: ಎದೆ ಸೀಳಿದರೆ ಎರಡಕ್ಷರ ಬಾರದವರು, ಪಂಕ್ಚರ್ ಹಾಕೋರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದಾರೆಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್ನ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನೀವು ಬಡವರಿಗೆ ವಿದ್ಯಾಭ್ಯಾಸ ಕೊಡಿ, ಉದ್ಯೋಗ ಕೊಡಿ ಸ್ವಾಮಿ. ಅವರು ಯಾಕೆ ಪಂಕ್ಚರ್ ಹಾಕ್ತಾರೆ, ಕಸ ಗುಡಿಸ್ತಾರೆ ಎಂದು ತೇಜಸ್ವಿ ವಿರುದ್ಧ ಡಿಕೆಶಿ ಚಾಟಿ ಬೀಸಿದ್ದಾರೆ.
ಅವರು ಕಸ ಗುಡಿಸದಿದ್ದರೆ ನೀವು ಇರಲು ಸಾಧ್ಯನಾ? ಅವರೇ ಇಂದು ಸ್ವಚ್ಛ ಭಾರತ ಮಾಡ್ತಿರೋದು ಎಂದು ಕನಕಪುರದ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಡಿಕೆಶಿ ತಿರುಗೇಟು ನೀಡಿದ್ದಾರೆ.