ಸಿಎಎ ವಿರೋಧಿಸಿ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಱಲಿ

ಬೆಂಗಳೂರು: ಸಿಎಎ ವಿರೋಧಿಸಿ ಭಾನುವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ನಾಳೆಗೆ ಮುಂದೂಡಲಾಗಿದೆ. ಪೊಲೀಸರು ಅನುಮತಿ ನೀಡದ ಹಿನ್ನಲೆ ಸೋಮವಾರ ನಗರದಲ್ಲಿ ಪ್ರಗತಿಪರ ಸಂಘಟನೆಗಳು, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನಾ ಱಲಿ ನಡೆಯಲಿದೆ. ಜೆ.ಸಿ.ನಗರದಿಂದ ಕಂಟೋನ್ಮೆಂಟ್‌ ಬಳಿಯ ಖುದೂಸ್​ಸಾಬ್​ ಈದ್ಗಾ ಮೈದಾನದ ವರೆಗೆ ಱಲಿ ನಡೆಸಿ ನಂತರ ಈದ್ಗಾ ಮೈದಾನದಲ್ಲಿ ಧರಣಿ ನಡೆಸಲಿದ್ದಾರೆ. ಕ್ವೀನ್ಸ್ ರಸ್ತೆಯ ದಾರೂಸ್ ಸಲೇಂ ಕಟ್ಟಡದಲ್ಲಿ ಬಿತ್ತಿ ಪತ್ರ, ಕರಪತ್ರ ತಯಾರಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಪ್ರಗತಿಪರರು, ವಿವಿಧ ಮುಸ್ಲಿಂ ಸಂಘಟನೆಗಳಿಂದ ಸಭೆಗಳು ನಡೆಯಲಿವೆ. ನಾಳೆ ನಡೆಯಲಿರುವ ಪ್ರತಿಭಟನೆಗೆ […]

ಸಿಎಎ ವಿರೋಧಿಸಿ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಱಲಿ
Follow us
ಸಾಧು ಶ್ರೀನಾಥ್​
|

Updated on:Dec 23, 2019 | 7:47 AM

ಬೆಂಗಳೂರು: ಸಿಎಎ ವಿರೋಧಿಸಿ ಭಾನುವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ನಾಳೆಗೆ ಮುಂದೂಡಲಾಗಿದೆ. ಪೊಲೀಸರು ಅನುಮತಿ ನೀಡದ ಹಿನ್ನಲೆ ಸೋಮವಾರ ನಗರದಲ್ಲಿ ಪ್ರಗತಿಪರ ಸಂಘಟನೆಗಳು, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನಾ ಱಲಿ ನಡೆಯಲಿದೆ.

ಜೆ.ಸಿ.ನಗರದಿಂದ ಕಂಟೋನ್ಮೆಂಟ್‌ ಬಳಿಯ ಖುದೂಸ್​ಸಾಬ್​ ಈದ್ಗಾ ಮೈದಾನದ ವರೆಗೆ ಱಲಿ ನಡೆಸಿ ನಂತರ ಈದ್ಗಾ ಮೈದಾನದಲ್ಲಿ ಧರಣಿ ನಡೆಸಲಿದ್ದಾರೆ. ಕ್ವೀನ್ಸ್ ರಸ್ತೆಯ ದಾರೂಸ್ ಸಲೇಂ ಕಟ್ಟಡದಲ್ಲಿ ಬಿತ್ತಿ ಪತ್ರ, ಕರಪತ್ರ ತಯಾರಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಪ್ರಗತಿಪರರು, ವಿವಿಧ ಮುಸ್ಲಿಂ ಸಂಘಟನೆಗಳಿಂದ ಸಭೆಗಳು ನಡೆಯಲಿವೆ.

ನಾಳೆ ನಡೆಯಲಿರುವ ಪ್ರತಿಭಟನೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪಕ್ಷಿಮ ಬಂಗಾಳ, ಆಂಧ್ರ ಪ್ರದೇಶದಿಂದ ಬಂದಿರುವ ಹೋರಾಟಗಾರರಿಂದ ಬೆಂಗಾಲಿ ಹಾಗೂ ತೆಲುಗು ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಪ್ರತಿಭಟನಾಕಾರರು ಹಾಡುಗಳನ್ನು ರಚಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬರುವ ಸಾಧ್ಯತೆ ಇದೆ.

Published On - 6:13 pm, Sun, 22 December 19