ಕಳ್ಳತನ ಆರೋಪದಲ್ಲಿ ಮಹಿಳೆ ಮೇಲೆ ಮಹಿಳಾ ಎಎಸ್​ಐ ದೌರ್ಜನ್ಯ

ದಾವಣಗೆರೆ: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದಡಿ ವಿಚಾರಣೆಗೆ ಕರೆದು ಮಹಿಳೆಗೆ ಥಳಿಸಿರುವ ಘಟನೆ ನಡೆದಿದೆ. 35 ವರ್ಷ ವಯಸ್ಸಿನ ರೇಷ್ಮಾ ಎಂಬ ಮಹಿಳೆಗೆ ದಾವಣಗೆರೆ ಆಜಾದ್ ನಗರ ಠಾಣೆ ಎಎಸ್​ಐ ಶಮೀಮ್ ಬಾನು ವಿಚಾರಣೆಗೆ ಎಂದು ಕರೆ ತಂದು ಠಾಣೆಯಲ್ಲಿ ಕೂಡಿ ಹಾಕಿ ಬಾಸುಂಡೆ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ರೇಷ್ಮಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ವಿರುದ್ಧ ರೇಷ್ಮಾ ಸಂಬಂಧಿಕರು ತೀವ್ರ ಆಕ್ರೋಶ ಹೊರಹಾಕಿದ್ದು, ಎಸ್ಪಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು […]

ಕಳ್ಳತನ ಆರೋಪದಲ್ಲಿ ಮಹಿಳೆ ಮೇಲೆ ಮಹಿಳಾ ಎಎಸ್​ಐ ದೌರ್ಜನ್ಯ
Follow us
ಸಾಧು ಶ್ರೀನಾಥ್​
|

Updated on: Dec 22, 2019 | 4:56 PM

ದಾವಣಗೆರೆ: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದಡಿ ವಿಚಾರಣೆಗೆ ಕರೆದು ಮಹಿಳೆಗೆ ಥಳಿಸಿರುವ ಘಟನೆ ನಡೆದಿದೆ. 35 ವರ್ಷ ವಯಸ್ಸಿನ ರೇಷ್ಮಾ ಎಂಬ ಮಹಿಳೆಗೆ ದಾವಣಗೆರೆ ಆಜಾದ್ ನಗರ ಠಾಣೆ ಎಎಸ್​ಐ ಶಮೀಮ್ ಬಾನು ವಿಚಾರಣೆಗೆ ಎಂದು ಕರೆ ತಂದು ಠಾಣೆಯಲ್ಲಿ ಕೂಡಿ ಹಾಕಿ ಬಾಸುಂಡೆ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸದ್ಯ ರೇಷ್ಮಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ವಿರುದ್ಧ ರೇಷ್ಮಾ ಸಂಬಂಧಿಕರು ತೀವ್ರ ಆಕ್ರೋಶ ಹೊರಹಾಕಿದ್ದು, ಎಸ್ಪಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ನಿರ್ಧಾರಿಸಿದ್ದಾರೆ.