ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ‘ಶ್ವೇತ ಸುಂದರಿ’ ಕಲರವ
ಕೊಡಗು: ದಕ್ಷಿಣದ ಕಾಶ್ಮೀರ ಕೊಡಗು ಅಂದ್ರೆ, ನಿಸರ್ಗ ಸಿರಿಯ ಆಗರ.. ಯಾರ ಮುಡಿಗೂ ಏರದ.. ದೇವರ ಅಡಿಗೂ ಸೇರದ… ತನ್ನಷ್ಟಕ್ಕೆ ತಾನು ಅರಳಿ ಮರೆಯಾಗೋ ಶ್ವೇತ ವರ್ಣದ ಪುಷ್ಪಗಳ ರಾಶಿ, ತಾನಿರುವಷ್ಟು ದಿನ ತಾನಾರಿಗೆ ಕಡಿಮೆ ಎನ್ನುವಂತೆ ಅರಳಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.. ಹಸಿರು ಹೊದ್ದ ಭೂರಮೆಯ ಅಂದ… ಐಸಿರಿಯ ಇಮ್ಮಡಿಗೊಳಿಸೋ ಕುಸುಮರಾಶಿ… ಎಲ್ಲೆಲ್ಲೂ ಹರಡಿಕೊಂಡು ಕಂಗೊಳಿಸೋ ಚಳಿಗಾಲದ ಪುಷ್ಪರಾಣಿ… ಹಾಲ್ಚೆಲ್ಲಿದಂತೆ ಹರಡಿರೋ ದಕ್ಷಿಣದ ಕಾಶ್ಮೀರಕ್ಕೆ ಮೆರುಗು ತಂದ ಕಾಡು ಮಲ್ಲಿಗೆ…. ಹೌದು, ಭೂ ಲೋಕದ ಸ್ವರ್ಗ ಹೇಳಿ […]
ಕೊಡಗು: ದಕ್ಷಿಣದ ಕಾಶ್ಮೀರ ಕೊಡಗು ಅಂದ್ರೆ, ನಿಸರ್ಗ ಸಿರಿಯ ಆಗರ.. ಯಾರ ಮುಡಿಗೂ ಏರದ.. ದೇವರ ಅಡಿಗೂ ಸೇರದ… ತನ್ನಷ್ಟಕ್ಕೆ ತಾನು ಅರಳಿ ಮರೆಯಾಗೋ ಶ್ವೇತ ವರ್ಣದ ಪುಷ್ಪಗಳ ರಾಶಿ, ತಾನಿರುವಷ್ಟು ದಿನ ತಾನಾರಿಗೆ ಕಡಿಮೆ ಎನ್ನುವಂತೆ ಅರಳಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ..
ಹಸಿರು ಹೊದ್ದ ಭೂರಮೆಯ ಅಂದ… ಐಸಿರಿಯ ಇಮ್ಮಡಿಗೊಳಿಸೋ ಕುಸುಮರಾಶಿ… ಎಲ್ಲೆಲ್ಲೂ ಹರಡಿಕೊಂಡು ಕಂಗೊಳಿಸೋ ಚಳಿಗಾಲದ ಪುಷ್ಪರಾಣಿ… ಹಾಲ್ಚೆಲ್ಲಿದಂತೆ ಹರಡಿರೋ ದಕ್ಷಿಣದ ಕಾಶ್ಮೀರಕ್ಕೆ ಮೆರುಗು ತಂದ ಕಾಡು ಮಲ್ಲಿಗೆ….
ಹೌದು, ಭೂ ಲೋಕದ ಸ್ವರ್ಗ ಹೇಳಿ ಕೇಳಿ ನಿಸರ್ಗ ಸಿರಿಯ ತವರು. ಪಶ್ಚಿಮಘಟ್ಟದ ತಪ್ಪಲಿನ ಪುಟ್ಟ ಜಿಲ್ಲೆಯ ಪ್ರಕೃತಿ ಪ್ರಿಯರ ಹಾಟ್ ಸ್ಪಾಟ್. ಚಳಿಗಾಲಕ್ಕೆ ಅತಿಥಿಗಳಾದ ಶ್ವೇತ ವರ್ಣದ ಹೂಗಳ ಸೊಬಗು ಕಣ್ಮನ ಸೆಳೆಯುತ್ತಿವೆ. ಬೆಟ್ಟ ಗುಡ್ಡಗಳಲ್ಲಿ ಅರಳಿ ನಿಂತಿರೋ ಕಾಡು ಮಲ್ಲಿಗೆ ಹೂಗಳು ಕಂಪು ಬೀರ್ತಿವೆ. ಥೇಟ್ ಮಲ್ಲಿಗೆಯಂತೆ ಅರಳಿನಿಂತಿರೋ ಈ ಹೂಗಳು ತಮ್ಮ ನೈಜ ಸೌಂದರ್ಯದಿಂದ ಎಲ್ಲರನ್ನು ಸೆಳೀತಿವೆ.
ಮಡಿಕೇರಿ ಕುಶಾಲನಗರ, ಮಡಿಕೇರಿ, ವಿರಾಜಪೇಟೆ ಸಿದ್ದಾಪುರ ರಸ್ತೆಗಳಲ್ಲಿ ಎತೇಚ್ಚವಾಗಿ ಅರಳಿರುವ ಹೂಗಳನ್ನು ನೋಡೋದೆ ಅಂದ. ಶ್ವೇತ ಸುಂದರಿಯರನ್ನು ಕಂಡ ಪುಷ್ಪಪ್ರಿಯರು ತಮ್ಮ ಮೊಬೈಲ್ಗಳಲ್ಲಿ ಸೌಂದರ್ಯರಾಣಿಯರನ್ನು ಸೆರೆಹಿಡಿಯುತ್ತಿದ್ದಾರೆ. ಕಾಡುಮಲ್ಲಿಗೆ ಎಂದು ಕರೆಯುವ ಈ ಹೂಗಳನ್ನು ಕ್ರಿಸ್ ಮಸ್ ಫ್ಲವರ್ ಅಂತಲೂ ಕರೆಯೋದು ವಿಶೇಷ.
ಒಟ್ನಲ್ಲಿ ವರ್ಷಕ್ಕೊಮ್ಮೆ ಚಳಿಗಾಲಕ್ಕೆ ಹಾಜರಾಗೋ ಈ ಪುಷ್ಪ ರಾಣಿಯರು ಮಂಜಿನ ನಗರಿ ಅಂದವನ್ನ ಇಮ್ಮಡಿಗೊಳಿಸುತ್ತವೆ. ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುವಂತಾ ಸೌಂದರ್ಯದೊಂದಿಗೆ ನಳನಳಿಸುತ್ತಿರೋ ಹೂಗಳು ಚೆಲುವೆಲ್ಲಾ ತನ್ನದೇ ಅನ್ನುತ್ತಾ ಮಡಿಕೇರಿಗೆ ಬರೋ ಪ್ರವಾಸಿಗರಿಗೆ ಮುದನೀಡ್ತಿವೆ.
Published On - 1:57 pm, Sun, 22 December 19