ಗೋಲಿಬಾರ್: DCಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

ಗೋಲಿಬಾರ್: DCಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಜಿಲ್ಲಾಧಿಕಾರಿಗೆ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವನ್ 144 ಸೆಕ್ಷನ್ ಹಾಕಲು ಡೈರಕ್ಷನ್ ಕೊಟ್ಟಿದ್ದು ಎಂದು ಸಿಎಂ, ಗೃಹ ಸಚಿವ, ಬಿಜೆಪಿ ರಾಜ್ಯಾಧ್ಯಕ್ಷ, ಜಿಲ್ಲಾಧಿಕಾರಿಗೆ ಏಕವಚನದಲ್ಲಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಸೇರಿ ಯಾವನು ಆಸ್ಪತ್ರೆಗೆ ಹೋಗಿ ಕಷ್ಟ ಕೇಳಿದ್ದೀರಾ? ಶಿವಮೊಗ್ಗ, ಬಿಹಾರ ಸೇರಿದಂತೆ ಹಲವು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಇದ್ದಾರೆ. ಸಿಎಂ ಬಂದವರು ಆಸ್ಪತ್ತೆಗೆ ಹೋಗಿದ್ದರಾ? ಸಿಎಂ ಏನು ಮಾಹಿತಿ ಪಡೆದರು? […]

sadhu srinath

|

Dec 22, 2019 | 1:24 PM

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಜಿಲ್ಲಾಧಿಕಾರಿಗೆ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವನ್ 144 ಸೆಕ್ಷನ್ ಹಾಕಲು ಡೈರಕ್ಷನ್ ಕೊಟ್ಟಿದ್ದು ಎಂದು ಸಿಎಂ, ಗೃಹ ಸಚಿವ, ಬಿಜೆಪಿ ರಾಜ್ಯಾಧ್ಯಕ್ಷ, ಜಿಲ್ಲಾಧಿಕಾರಿಗೆ ಏಕವಚನದಲ್ಲಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಸೇರಿ ಯಾವನು ಆಸ್ಪತ್ರೆಗೆ ಹೋಗಿ ಕಷ್ಟ ಕೇಳಿದ್ದೀರಾ? ಶಿವಮೊಗ್ಗ, ಬಿಹಾರ ಸೇರಿದಂತೆ ಹಲವು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಇದ್ದಾರೆ. ಸಿಎಂ ಬಂದವರು ಆಸ್ಪತ್ತೆಗೆ ಹೋಗಿದ್ದರಾ? ಸಿಎಂ ಏನು ಮಾಹಿತಿ ಪಡೆದರು? ಅಲ್ಲಿನ ಪರಿಸ್ಥಿತಿ ನೋಡಬೇಕಿತ್ತು ಎಂದು ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಕುಮಾರಸ್ವಾಮಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕುಮಾರಸ್ವಾಮಿ ನಾನು ಇಲ್ಲಿಗೆ ಕರ್ಫ್ಯೂ ಸಡಿಲಿಕೆಯಾದ ಹಿನ್ನೆಲೆ ಬಂದಿದ್ದೇನೆ. ಯಾವುದೇ ರಾಜಕೀಯ ಉದ್ದೇಶದಿಂದ ಇಲ್ಲಿಗೆ ಬಂದಿಲ್ಲ ಎಂದು ಹೇಳಿದ್ರು. ಕರಾವಳಿ ಭಾಗದಲ್ಲಿ ಕೋಮು ಘಟನೆಗಳು ನಡೆಯುತ್ತಿತ್ತು, ಆದ್ರೆ ಈ ಗಲಾಟೆ ಕೋಮುಗಲಭೆಯಲ್ಲ. ಇದು ಪೊಲೀಸರು, ನಾಗರಿಕರ ನಡುವೆ ನಡೆದ ಗಲಭೆಯಾಗಿದೆ. ಫೈರಿಂಗ್‌ನಲ್ಲಿ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ಮಾಹಿತಿ ನೀಡಿಲ್ಲ ಎಂದು ಪೊಲೀಸರ ಫೈರಿಂಗ್ ವಿರುದ್ಧ ಹರಿಹಾಯ್ದಿದ್ದಾರೆ.

ಇದು ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಪೊಲೀಸರು ಅನಾಗರಿಕರಂತೆ ವರ್ತಿಸಿದ್ದಾರೆ. ಯಾವೊಬ್ಬ ಜನಪ್ರತಿನಿಧಿಗಾದರೂ ಹೃದಯ ವೈಶಾಲ್ಯತೆ ಇದೆಯಾ? ಹಿಂದೂ ಸಂಸ್ಕೃತಿ, ಮಾನವೀಯತೆ ಬಗ್ಗೆ ಗೊತ್ತಿದೆಯಾ? ಹಿಂದೂ ದೇಶ ಕಟ್ಟಲು ಹೋದವರಿಗೆ ಈ ವಿಚಾರ ಗೊತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕರ್ನಾಟಕ ಶಾಂತಿಪ್ರಿಯ ರಾಜ್ಯ ಎಂದು ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತನ್ನು ಉಲ್ಲೇಖಿಸಿದರು. ಆಚರಣೆಯಲ್ಲೂ ನಾವು ಅದೇ ರೀತಿ ಇದ್ದೇವೆ. ಈ ಬಗ್ಗೆ ರಾಜ್ಯದ ನಾನಾ ಮೂಲೆಗಳಲ್ಲಿ ಪ್ರತಿಭಟ‌ನೆ ನಡೆಯುತ್ತಿದೆ ಎಂದರು.

ಶಾಲೆಯಿಂದ ಮಕ್ಕಳನ್ನ ಕರೆದುಕೊಂಡು ಬರುತ್ತಿದ್ದವನ ಮೇಲೆ ಫೈರಿಂಗ್‌: ಮಂಗಳೂರು ಪೊಲೀಸರ ಫೈರಿಂಗ್‌ನಲ್ಲಿ ಜಲೀಲ್ ಮೃತಪಟ್ಟಿದ್ದಾನೆ. ಜಲೀಲ್ ಮಕ್ಕಳನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಿದ್ದ. ಮನೆಯ ಗೇಟ್ ಹಾಕುವ ವೇಳೆ ಜಲೀಲ್‌ಗೆ ಗುಂಡು ತಾಗಿದೆ. ಈ ಸಾವಿಗೆ ಯಾರು ಹೊಣೆ ಎಂದು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನಿಸಿದರು. ರಾಜ್ಯದಲ್ಲಿ ಬೆಂಕಿ ಹಚ್ಚಿ ಗೃಹ ಸಚಿವರು ದೆಹಲಿಗೆ ಹೋಗಿದ್ದರು ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ಹೆಚ್​ಡಿ.ಕೆ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಪರಿಹಾರದ ವಿಚಾರ ಯಡಿಯೂರಪ್ಪರಿಂದ ಡಿಸಿಗೆ ಸೂಚನೆ ಹಿನ್ನೆಲೆ ಈ ಪುರುಷಾರ್ಥಕ್ಕಾ ಯಡಿಯೂರಪ್ಪ ಸಿಎಂ ಆಗಿದ್ದು? ಯಡಿಯೂರಪ್ಪ ನಿಮಗೆ ಮನುಷ್ಯತ್ವ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada