ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ: ಹೊಸ ಶಾಸಕರಿಗೆ ಸಿಎಂ ಯಡಿಯೂರಪ್ಪ ಭರವಸೆ
ಬೆಂಗಳೂರು: ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ನೂತನ ಶಾಸಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಜನವರಿ ಮೊದಲ ವಾರದಲ್ಲಿ ನಾನು ದೆಹಲಿಗೆ ಹೋಗುತ್ತೇನೆ. ದೆಹಲಿಯಿಂದ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಸಂಕ್ರಾಂತಿಗೆ ಪದಗ್ರಹಣ ದಿನಾಂಕ ನಿಗದಿ ಮಾಡಿಕೊಳ್ಳೋಣ. ಈ ಹಿಂದೆ ಮಾತು ಕೊಟ್ಟಂತೆ ಭರವಸೆ ಕೊಟ್ಟವರನ್ನು ಸಚಿವರನ್ನಾಗಿ ಮಾಡ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಕೊಠಡಿಯಲ್ಲಿ ಚರ್ಚೆ ವೇಳೆ ಯಡಿಯೂರಪ್ಪ ತಿಳಿಸಿದ್ದಾರೆ. ನೂತನ ಶಾಸಕರಿಗೆ ಪ್ರಮಾಣವಚನದ ಬಳಿಕ ಬ್ರೀಫ್ ಕೇಸ್ ಕೊಡುವ ಸಂಪ್ರದಾಯಕ್ಕೆ ತಿಲಾಂಜಲಿ […]
ಬೆಂಗಳೂರು: ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ನೂತನ ಶಾಸಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಜನವರಿ ಮೊದಲ ವಾರದಲ್ಲಿ ನಾನು ದೆಹಲಿಗೆ ಹೋಗುತ್ತೇನೆ. ದೆಹಲಿಯಿಂದ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಸಂಕ್ರಾಂತಿಗೆ ಪದಗ್ರಹಣ ದಿನಾಂಕ ನಿಗದಿ ಮಾಡಿಕೊಳ್ಳೋಣ. ಈ ಹಿಂದೆ ಮಾತು ಕೊಟ್ಟಂತೆ ಭರವಸೆ ಕೊಟ್ಟವರನ್ನು ಸಚಿವರನ್ನಾಗಿ ಮಾಡ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಕೊಠಡಿಯಲ್ಲಿ ಚರ್ಚೆ ವೇಳೆ ಯಡಿಯೂರಪ್ಪ ತಿಳಿಸಿದ್ದಾರೆ.
ನೂತನ ಶಾಸಕರಿಗೆ ಪ್ರಮಾಣವಚನದ ಬಳಿಕ ಬ್ರೀಫ್ ಕೇಸ್ ಕೊಡುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲಾಗಿದ್ದು, ಬ್ರೀಫ್ ಕೇಸ್ ಬದಲು ಪ್ಲಾಸ್ಟಿಕ್ ಕವರ್ ಗಳಲ್ಲಿ ಸಂವಿಧಾನ ಪ್ರತಿ, ವಿಧಾನಸಭೆ ರೂಲ್ ಬುಕ್, ನೋಟ್ ಪ್ಯಾಡ್ ಗಳನ್ನು ಇಟ್ಟುಕೊಡಲು ವ್ಯವಸ್ಥೆ ಮಾಡಿಕೊಡಲಾಗಿದೆ.
ಬಿಜೆಪಿ ಸರ್ಕಾರ ಬಹುಮತ ಪಡೆದ ಖುಷಿಯಲ್ಲಿ ಅದ್ದೂರಿ ಕಾರ್ಯಕ್ರಮ. ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಕಾರ್ಯಕ್ರಮ ನೆರವೇರಿತು. ಶಾಸಕರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿದ್ದರು.
ಉಪ ಚುನಾವಣೆಯಲ್ಲಿ ಗೆದ್ದ 15 ಶಾಸಕರಲ್ಲಿ 13 ಶಾಸಕರಿಂದ ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು. 12 ಬಿಜೆಪಿ ಹಾಗೂ ಓರ್ವ ಪಕ್ಷೇತರ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ ನಡೆಯಿತು. ಕಾಂಗ್ರೆಸ್ನ ಇಬ್ಬರು ಶಾಸಕರು ಮತ್ತೊಂದು ದಿನ ಪ್ರಮಾಣ ವಚನ ಪಡೆಯುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮೊದಲಿಗೆ ಮಹೇಶ್ ಕುಮಟಳ್ಳಿ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಶ್ರೀಮಂತ ಬಾಳಾ ಸಾಹೇಬ್ ಪಾಟೀಲ್, ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್, ಅರುಣ್ ಕುಮಾರ್ ಪೂಜಾರ್, ಆನಂದ್ ಸಿಂಗ್, ಡಾ.ಕೆ.ಸುಧಾಕರ್, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಕೆ. ಗೋಪಾಲಯ್ಯ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮತ್ತು ನಾರಾಯಣ ಗೌಡ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧದಲ್ಲಿ ಪ್ರಮಾಣವಚನ ವೇಳೆ ಸಿಎಂ BSY ಅವರನ್ನ ಮಾತನಾಡಿಸಲು ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮುಂದಾದರು. ಆದರೆ ಸಿಎಂ, ಶರತ್ ಬಚ್ಚೇಗೌಡರತ್ತ ತಿರುಗಿಯೂ ನೋಡಲಿಲ್ಲ. ಬಳಿಕ ಶರತ್, ಆರ್. ಅಶೋಕ್‌ರನ್ನ ನೋಡಿ ನಕ್ಕು ಸುಮ್ಮನಾದರು.
Published On - 11:52 am, Sun, 22 December 19