ಮಂದಿರ ನಿರ್ಮಾಣವರೆಗೂ ಪೇಜಾವರ ಶ್ರೀಗಳು ಬದುಕಿರಬೇಕು: ಯಡಿಯೂರಪ್ಪ
ಉಡುಪಿ: ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಶ್ರೀಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಸಿಎಂ BSY ಪೇಜಾವರಶ್ರೀ ಗುಣಮುಖರಾಗಲು ಪ್ರಾರ್ಥಿಸಬೇಕು. ನೆನ್ನೆ-ಇಂದು ಶ್ರೀಗಳ ಸುಧಾರಣೆ ಆಗಿದೆ. ಗುಣಮುಖರಾಗಿ ಬಂದು ಎಂದಿನಂತೆ ಪೂಜೆ ಮಾಡಲಿ. ತಜ್ಞ ವೈದ್ಯರು ಪ್ರಯತ್ನ ಮಾಡಿದ್ದಾರೆ. ಶ್ರೀಗಳು ಕಣ್ಣು ಬಿಡುತ್ತಿದ್ದಾರೆ. ಸೋಂಕು ಆಗಬಾರದೆಂದು ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ, ರಾಮ ಮಂದಿರ ಹೋರಾಟ ನೆನಪಿಸಿಕೊಂಡರು. […]
ಉಡುಪಿ: ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಶ್ರೀಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಸಿಎಂ BSY ಪೇಜಾವರಶ್ರೀ ಗುಣಮುಖರಾಗಲು ಪ್ರಾರ್ಥಿಸಬೇಕು. ನೆನ್ನೆ-ಇಂದು ಶ್ರೀಗಳ ಸುಧಾರಣೆ ಆಗಿದೆ. ಗುಣಮುಖರಾಗಿ ಬಂದು ಎಂದಿನಂತೆ ಪೂಜೆ ಮಾಡಲಿ. ತಜ್ಞ ವೈದ್ಯರು ಪ್ರಯತ್ನ ಮಾಡಿದ್ದಾರೆ. ಶ್ರೀಗಳು ಕಣ್ಣು ಬಿಡುತ್ತಿದ್ದಾರೆ. ಸೋಂಕು ಆಗಬಾರದೆಂದು ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಯಡಿಯೂರಪ್ಪ, ರಾಮ ಮಂದಿರ ಹೋರಾಟ ನೆನಪಿಸಿಕೊಂಡರು. ಸ್ವಾಮೀಜಿ ಜೊತೆ ಅಂದು 16 ಜನ ಇದ್ದೆವು. 16 ಜನರ ಪೈಕಿ ನಾನು ಒಬ್ಬ. ಇದು ರಾಮಮಂದಿರ ಕಟ್ಟುವ ಸುಸಂದರ್ಭ. ಮಂದಿರ ನಿರ್ಮಾಣವಾಗುವವರೆಗೆ ಅವರು ಬದುಕಿರಬೇಕು. ಸ್ವತಂತ್ರ್ಯ ಭಾರತದಲ್ಲಿ ಬೇರೆ ಯಾರೂ ಇವರಷ್ಟು ಓಡಾಟ ಮಾಡುತ್ತಿಲ್ಲ. ಓಡಾಟ ಕಡಿಮೆ ಮಾಡಲು ನೂರಾರು ಬಾರಿ ಹೇಳಿದ್ದೆ. ವಯೋಸಹಜ ಸಮಸ್ಯೆ ಕಾಡುತ್ತಿದೆ ಎಂದು ಯಡಿಯೂರಪ್ಪ ವಿಷಾದದ ದಿನಯಲ್ಲಿ ಹೇಳಿದರು.
ಸ್ವಾಮೀಜಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಈಗಿರುವ ಆರೋಗ್ಯ ಸಮಸ್ಯೆಯನ್ನು ದಾಟಿ ಬರಲಿ. ಎರಡು ದಿನಗಳಲ್ಲಿ ಶ್ರೀಗಳ ಆರೋಗ್ಯ ಸುಧಾರಣೆ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ ಎಂದು ಮಣಿಪಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Published On - 4:18 pm, Sat, 21 December 19