ಮುಂಗಳಮುಖಿಯರ ಜೊತೆ ಗ್ರಾ. ಪಂ. ಉಪಾಧ್ಯಕ್ಷ ಅಸಭ್ಯ ಕುಣಿತ, ಫುಲ್ ವೈರಲ್

ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲ್ಲೂಕಿನ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೈಲಪ್ಪ ಅವರು ಮುಂಗಳಮುಖಿಯರು ಆಚರಿಸಿದ ಕಾರ್ಯಕ್ರಮವೊಂದ್ರಲ್ಲಿ ಹಣ ಎಸೆದು ಅಸಭ್ಯ ರೀತಿಯಲ್ಲಿ ಕುಣಿದು ಕುಪ್ಪಳಿಸಿದ ಘಟನೆ ನಡೆದಿದ್ದು, ಅದರ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ‘ಮಾತಾ’ ಎಂಬ ದೇವರ ಹೆಸರಿನಲ್ಲಿ ಸುಧಾನಗರದಲ್ಲಿ ಹಬ್ಬದ ಕಾರ್ಯಕ್ರಮ ಏರ್ಪಡಿಸಿದ್ರು. ಈ ಸಂದರ್ಭದಲ್ಲಿ ತಾಲ್ಲೂಕಿನ ಕುಲವನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಬೈಲಪ್ಪ ಪಾಲ್ಗೊಂಡಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಮಂಗಳಮುಖಿಯರೊಂದಿಗೆ ತಾನೂ ಫುಲ್ ಸ್ಟೆಪ್ ಹಾಕಿ ಮಂಗಳಮುಖಿಯರ ಮೇಲೆ ಹಣ ಎಸೆದು ಫುಲ್ […]

ಮುಂಗಳಮುಖಿಯರ ಜೊತೆ ಗ್ರಾ. ಪಂ. ಉಪಾಧ್ಯಕ್ಷ ಅಸಭ್ಯ ಕುಣಿತ, ಫುಲ್ ವೈರಲ್
Follow us
ಸಾಧು ಶ್ರೀನಾಥ್​
|

Updated on:Dec 23, 2019 | 1:18 PM

ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲ್ಲೂಕಿನ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೈಲಪ್ಪ ಅವರು ಮುಂಗಳಮುಖಿಯರು ಆಚರಿಸಿದ ಕಾರ್ಯಕ್ರಮವೊಂದ್ರಲ್ಲಿ ಹಣ ಎಸೆದು ಅಸಭ್ಯ ರೀತಿಯಲ್ಲಿ ಕುಣಿದು ಕುಪ್ಪಳಿಸಿದ ಘಟನೆ ನಡೆದಿದ್ದು, ಅದರ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ‘ಮಾತಾ’ ಎಂಬ ದೇವರ ಹೆಸರಿನಲ್ಲಿ ಸುಧಾನಗರದಲ್ಲಿ ಹಬ್ಬದ ಕಾರ್ಯಕ್ರಮ ಏರ್ಪಡಿಸಿದ್ರು. ಈ ಸಂದರ್ಭದಲ್ಲಿ ತಾಲ್ಲೂಕಿನ ಕುಲವನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಬೈಲಪ್ಪ ಪಾಲ್ಗೊಂಡಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಮಂಗಳಮುಖಿಯರೊಂದಿಗೆ ತಾನೂ ಫುಲ್ ಸ್ಟೆಪ್ ಹಾಕಿ ಮಂಗಳಮುಖಿಯರ ಮೇಲೆ ಹಣ ಎಸೆದು ಫುಲ್ ಎಂಜಾಯ್ ಮಾಡಿದ್ದಾರೆ. ಈ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿ ಜನಸಾಮಾನ್ಯರು ಗ್ರಾ.ಪಂ. ಉಪಾಧ್ಯಕ್ಷನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 7:51 pm, Sun, 22 December 19