ವಾಚ್ ಟವರ್ ದುಸ್ಥಿತಿ: ದುರಸ್ಥಿಗೆ ಖಾಕಿ ನಿರ್ಲಕ್ಷ್ಯ, 8 ಕೋಟಿ ವೇಸ್ಟ್ ವೇಸ್ಟ್
ಧಾರವಾಡ: ಹುಬ್ಬಳ್ಳಿ ಕರ್ನಾಟಕದ ವಾಣಿಜ್ಯ ನಗರಿ. ಆದ್ರೆ ಛೋಟಾ ಮುಂಬಯಿ ಅನ್ನೋ ಕುಖ್ಯಾತಿಯೂ ಹುಬ್ಬಳ್ಳಿ ಬಿಟ್ಟು ಹೋಗ್ತಿಲ್ಲ. ಯಾಕಂದ್ರೆ ಹುಬ್ಬಳ್ಳಿಯಲ್ಲಿ ಕ್ರಿಮಿನಲ್ಗಳು ಹಾಗೂ ಪುಂಡರ ಹಾವಳಿ ಹೆಚ್ಚಾಗಿದೆ. ಹೀಗಾಗಿಯೇ ಪರಿಸ್ಥಿತಿ ನಿಯಂತ್ರಿಸಲು, ಕಾನೂನು ಮೀರುವವರನ್ನು ಕಟ್ಟಿಹಾಕಲು ಪೊಲೀಸ್ ಇಲಾಖೆ ನಗರದ ವಿವಿಧೆಡೆ ವಾಚ್ ಟವರ್ಸ್ ನಿರ್ಮಿಸಿತ್ತು. ಆದ್ರೆ ಮೊದ ಮೊದಲು ಅತ್ಯುತ್ಸಾಹದಿಂದ ಕಾರ್ಯಾಚರಿಸಿದ್ದ ವಾಚ್ ಟವರ್ಗಳು ಈಗ ಸೈಲೆಂಟಾಗಿವೆ. ವಾಚ್ ಟವರ್ ದುರಸ್ಥಿಗೆ ಮುಂದಾಗದ ಪೊಲೀಸರು! 2015 ರಲ್ಲಿ ಕ್ರಿಮಿನಲ್ಸ್ ಮತ್ತು ಸಂಚಾರಿ ನಿಯಮ ಉಲ್ಲಂಘಿಸೋರ ಮೇಲೆ […]
ಧಾರವಾಡ: ಹುಬ್ಬಳ್ಳಿ ಕರ್ನಾಟಕದ ವಾಣಿಜ್ಯ ನಗರಿ. ಆದ್ರೆ ಛೋಟಾ ಮುಂಬಯಿ ಅನ್ನೋ ಕುಖ್ಯಾತಿಯೂ ಹುಬ್ಬಳ್ಳಿ ಬಿಟ್ಟು ಹೋಗ್ತಿಲ್ಲ. ಯಾಕಂದ್ರೆ ಹುಬ್ಬಳ್ಳಿಯಲ್ಲಿ ಕ್ರಿಮಿನಲ್ಗಳು ಹಾಗೂ ಪುಂಡರ ಹಾವಳಿ ಹೆಚ್ಚಾಗಿದೆ. ಹೀಗಾಗಿಯೇ ಪರಿಸ್ಥಿತಿ ನಿಯಂತ್ರಿಸಲು, ಕಾನೂನು ಮೀರುವವರನ್ನು ಕಟ್ಟಿಹಾಕಲು ಪೊಲೀಸ್ ಇಲಾಖೆ ನಗರದ ವಿವಿಧೆಡೆ ವಾಚ್ ಟವರ್ಸ್ ನಿರ್ಮಿಸಿತ್ತು. ಆದ್ರೆ ಮೊದ ಮೊದಲು ಅತ್ಯುತ್ಸಾಹದಿಂದ ಕಾರ್ಯಾಚರಿಸಿದ್ದ ವಾಚ್ ಟವರ್ಗಳು ಈಗ ಸೈಲೆಂಟಾಗಿವೆ.
ವಾಚ್ ಟವರ್ ದುರಸ್ಥಿಗೆ ಮುಂದಾಗದ ಪೊಲೀಸರು! 2015 ರಲ್ಲಿ ಕ್ರಿಮಿನಲ್ಸ್ ಮತ್ತು ಸಂಚಾರಿ ನಿಯಮ ಉಲ್ಲಂಘಿಸೋರ ಮೇಲೆ ಕಣ್ಣಿಡಲು ಹುಬ್ಬಳ್ಳಿ-ಧಾರವಾಡ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ, 22 ಪೊಲೀಸ್ ವಾಚ್ ಟವರ್ಸ್ ನಿರ್ಮಿಸಲಾಗಿತ್ತು. ಅವಳಿ ನಗರದಲ್ಲಿ 22 ಕಡೆಗಳಲ್ಲಿ ಕಣ್ಗಾವಲು ಗೋಪುರಗಳು ತಲೆಯೆತ್ತಿದ್ದವು. ಇದಕ್ಕೆ ಬರಬ್ಬೋರಿ 8 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿತ್ತು.
ಆರಂಭದಲ್ಲಿ ವಾಚ್ ಟವರಗಳಿಂದ ಪೊಲೀಸ್ ಇಲಾಖೆಗೆ ಅನುಕೂಲವಾಗಿತ್ತು. ಆದ್ರೆ ವಾಚ್ ಟವರ್ಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಕ್ಯಾಮರಾಗಳು ದುರಸ್ಥಿಗೆ ಬಂದಿವೆ. ಹೀಗಾಗಿ ಪುಂಡರ ಹಾವಳಿ ಹಾಗೂ ಸಂಚಾರ ನಿಯಮವನ್ನು ಬ್ರೇಕ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ್ರೆ. ಕೂಡಲೇ ವಾಚ್ ಟವರ್ಗಳನ್ನ ದುರಸ್ಥಿ ಮಾಡೋದಾಗಿ ಭರವಸೆ ನೀಡುತ್ತಿದ್ದಾರೆ. ಆದಷ್ಟು ಬೇಗ ವಾಚ್ ಟವರ್ಗಳು ಪುನಾರಂಭವಾಗುವ ನೀರಿಕ್ಷೆಯಿದೆ. ನಿಯಮ ಉಲ್ಲಂಘಿಸುವವರು, ಕ್ರಿಮಿನಲ್ಸ್ ಮೇಲೆ ಕಣ್ಣಿಡಲು ಬೇರೆ ವಿಧದ ಕ್ಯಾಮರಾ ಬಳಸಲಾಗುತ್ತಿದೆ. ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ತಿಳಿಸಿದ್ದಾರೆ.
ಒಟ್ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ನೀಡಿದ್ದ ಅನುದಾನ ವ್ಯರ್ಥವಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿವೆ. ಹೀಗಾಗಿ ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ, ಹುಬ್ಬಳ್ಳಿಯ ವಾಚ್ ಟವರ್ಗಳ ದುರಸ್ಥಿತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Published On - 7:20 am, Mon, 23 December 19