ರಾಮನಗರ ಬಸ್ ನಿಲ್ದಾಣ ಈಗ ಕಳ್ಳರ ಅಡ್ಡೆ, ಪ್ರಯಾಣಿಕರಿಗೆ ತಮ್ಮ ಪರ್ಸ್ನದ್ದೇ ಚಿಂತೆ
ರಾಮನಗರ: ಅದು ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಸರ್ಕಾರಿ ಬಸ್ ನಿಲ್ದಾಣ. ಆದ್ರೆ ಇತ್ತೀಚಿಗೆ ಆ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿನಿತ್ಯ ಪ್ರಯಾಣಿಕರು ನನ್ನ ಪರ್ಸ್ ಕಳೆದುಹೋಯ್ತು, ನನ್ನ ಮೊಬೈಲ್ ಕಳೆದು ಹೋಯ್ತು ಅಂತಾ ಹೇಳುವವರೇ ಹೆಚ್ಚು. ಇದು ರೇಷ್ಮೆ ನಗರಿ ರಾಮನಗರದ ಸಾರಿಗೆ ಬಸ್ ನಿಲ್ದಾಣ. ಇಲ್ಲಿಗೆ ಬರೋಕೆ ಪ್ರಯಾಣಿಕರು ಭಯ ಪಡ್ತಾರೆ. ಪದೇ ಪದೇ ತಾವು ತಂದ ವಸ್ತು ಇದೀಯಾ ಇಲ್ವಾ ಅಂತ ಮುಟ್ಟಿ ಮುಟ್ಟಿ ನೋಡಿ ಕೊಳ್ತಾರೆ. […]

ರಾಮನಗರ: ಅದು ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಸರ್ಕಾರಿ ಬಸ್ ನಿಲ್ದಾಣ. ಆದ್ರೆ ಇತ್ತೀಚಿಗೆ ಆ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿನಿತ್ಯ ಪ್ರಯಾಣಿಕರು ನನ್ನ ಪರ್ಸ್ ಕಳೆದುಹೋಯ್ತು, ನನ್ನ ಮೊಬೈಲ್ ಕಳೆದು ಹೋಯ್ತು ಅಂತಾ ಹೇಳುವವರೇ ಹೆಚ್ಚು.
ಇದು ರೇಷ್ಮೆ ನಗರಿ ರಾಮನಗರದ ಸಾರಿಗೆ ಬಸ್ ನಿಲ್ದಾಣ. ಇಲ್ಲಿಗೆ ಬರೋಕೆ ಪ್ರಯಾಣಿಕರು ಭಯ ಪಡ್ತಾರೆ. ಪದೇ ಪದೇ ತಾವು ತಂದ ವಸ್ತು ಇದೀಯಾ ಇಲ್ವಾ ಅಂತ ಮುಟ್ಟಿ ಮುಟ್ಟಿ ನೋಡಿ ಕೊಳ್ತಾರೆ. ಜೇಬಿನಲ್ಲಿರೋ ದುಡ್ಡು, ಮೊಬೈಲ್, ಮೈಮೇಲಿರುವ ಚಿನ್ನಾಭರಣ ಯಾವಾಗ ಮಂಗಮಾಯವಾಗುತ್ತೋ ಅಂತ ಹೆದುರುತ್ತಾ ಪ್ರಯಾಣಿಕರು ಬಸ್ ಹತ್ತುತ್ತಾರೆ.
ಕಳ್ಳರ ಅಡ್ಡೆಯಾಯ್ತು ಸರ್ಕಾರಿ ಬಸ್ ನಿಲ್ದಾಣ! ರಾಮನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಈಗ ಪ್ರಯಾಣಿಕರ ಪಾಲಿಗೆ ಅಸುರಕ್ಷಿತ ತಾಣವಾಗಿ ಪರಿಣಮಿಸಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ 440 ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೊಬೈಲ್ ಕಳವು ಸೇರಿದಂತೆ ಜೇಬಿಗೆ ಕತ್ತರಿ ಹಾಕಿರುವ ಪ್ರಕರಣಗಳು ಶೇ.90ರಷ್ಟು ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ನಡೆದಿವೆ. ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಇಲ್ಲದೇ ಇರುವುದು ಕಳ್ಳರ ಪಾಲಿಗೆ ವರವಾಗಿದೆ.
ಅಂದಹಾಗೆ, ಹಣ ಹಾಗೂ ಮೊಬೈಲ್ ಕಳುವಿಗೆ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ಸುರಕ್ಷತೆಗಾಗಿ ಎಲ್ಲಾ ಕಡೆಯಲ್ಲೂ ಸಿಸಿಟಿವಿ ಅಳವಡಿಸಿ ಅಪರಾಧ ಚಟುವಟಿಕೆ ಪತ್ತೆ ಮಾಡಲು ಸಿಸಿಟಿವಿ ಸಾಕಷ್ಟು ಉಪಯೋಗವಾಗಲಿದೆ. ಆದ್ರೆ, ಸಿಸಿಟಿವಿ ಅಳವಡಿಕೆ ಮಾಡಲು ಪೊಲೀಸ್ ಇಲಾಖೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ಆದ್ರೆ ಈ ಎರಡು ಇಲಾಖೆಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಒಟ್ಟಾರೆಯಾಗಿ ಸಿಸಿಟಿವಿ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ರಾಮನಗರ ಬಸ್ ನಿಲ್ದಾವನ್ನ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಪೊಲೀಸರು ಕಳ್ಳರನ್ನ ಬಂಧಿಸಿ, ಪ್ರಯಾಣಿಕರ ಭಯವನ್ನ ದೂರ ಮಾಡಬೇಕಿದೆ. ಅಲ್ಲದೇ ನಗರಸಭೆ ಹಾಗೂ ಸಾರಿಗೆ ಬಸ್ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸಬೇಕಿದೆ.

Published On - 8:43 am, Mon, 23 December 19




