ಮಾಸ್ಕ್ ವಿತರಣೆ ಮಾಡದ ಆಡಳಿತ ಮಂಡಳಿ, ರಾಜಾಜಿನಗರ ESI ಡೀನ್ ವಿರುದ್ಧ ಆಕ್ರೋಶ

ಬೆಂಗಳೂರು: ಮಹಾಮಾರಿ ಕೊರೊನಾ ನಗರದಲ್ಲಿ ರಣಕೇಕೆ ಹಾಕುತ್ತಿದೆ. ಕೋವಿಡ್ ಬಂದು ಏಳೆಂಟು ತಿಂಗಳಾದ್ರೂ ರಾಜಾಜಿನಗರದ ESI ಆಸ್ಪತ್ರೆ ಚಿತ್ರಣ ಮಾತ್ರ ಬದಲಾಗಿಲ್ಲ. ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೇ ಸೂಕ್ತ ರಕ್ಷಣೆ ಇಲ್ಲ. ರಾಜ್ಯ ಆರೋಗ್ಯ ಇಲಾಖೆ ಸೂಕ್ತ ಮಾಸ್ಕ್ ವಿತರಣೆ ಮಾಡುತ್ತಿಲ್ಲವೆಂದು ಸಿಬ್ಬಂದಿ ಆರೋಪಿಸಿದ್ದಾರೆ. ಕೊವಿಡ್ ಡ್ಯೂಟಿ ಮಾಡುವವರಿಗೆ ಮಾತ್ರ ಎನ್-95 ಮಾಸ್ಕ್ ನೀಡುತ್ತಿದ್ದಾರೆ. ನಾನ್ ಕೊವಿಡ್ ಡ್ಯೂಟಿ ಮಾಡುವವರಿಗೆ ಮಾಸ್ಕ್ ಇಲ್ಲ. ಅದರಲ್ಲೂ ಅಧಿಕಾರಿಗಳು ವಾರಕ್ಕೊಂದು ಮಾಸ್ಕ್ ಮಾತ್ರ ನೀಡುತ್ತಿದ್ದಾರೆ. ಅವ್ಯವಸ್ಥೆಯ […]

ಮಾಸ್ಕ್ ವಿತರಣೆ ಮಾಡದ ಆಡಳಿತ ಮಂಡಳಿ, ರಾಜಾಜಿನಗರ ESI ಡೀನ್ ವಿರುದ್ಧ ಆಕ್ರೋಶ
Edited By:

Updated on: Oct 12, 2020 | 12:28 PM

ಬೆಂಗಳೂರು: ಮಹಾಮಾರಿ ಕೊರೊನಾ ನಗರದಲ್ಲಿ ರಣಕೇಕೆ ಹಾಕುತ್ತಿದೆ. ಕೋವಿಡ್ ಬಂದು ಏಳೆಂಟು ತಿಂಗಳಾದ್ರೂ ರಾಜಾಜಿನಗರದ ESI ಆಸ್ಪತ್ರೆ ಚಿತ್ರಣ ಮಾತ್ರ ಬದಲಾಗಿಲ್ಲ. ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೇ ಸೂಕ್ತ ರಕ್ಷಣೆ ಇಲ್ಲ.

ರಾಜ್ಯ ಆರೋಗ್ಯ ಇಲಾಖೆ ಸೂಕ್ತ ಮಾಸ್ಕ್ ವಿತರಣೆ ಮಾಡುತ್ತಿಲ್ಲವೆಂದು ಸಿಬ್ಬಂದಿ ಆರೋಪಿಸಿದ್ದಾರೆ. ಕೊವಿಡ್ ಡ್ಯೂಟಿ ಮಾಡುವವರಿಗೆ ಮಾತ್ರ ಎನ್-95 ಮಾಸ್ಕ್ ನೀಡುತ್ತಿದ್ದಾರೆ. ನಾನ್ ಕೊವಿಡ್ ಡ್ಯೂಟಿ ಮಾಡುವವರಿಗೆ ಮಾಸ್ಕ್ ಇಲ್ಲ. ಅದರಲ್ಲೂ ಅಧಿಕಾರಿಗಳು ವಾರಕ್ಕೊಂದು ಮಾಸ್ಕ್ ಮಾತ್ರ ನೀಡುತ್ತಿದ್ದಾರೆ. ಅವ್ಯವಸ್ಥೆಯ ಬಗ್ಗೆ ಹೇಳೋರು ಕೇಳೋರು ಇಲ್ಲದಂತಾಗಿದೆ.

ರಾಜಾಜಿನಗರ ಇಎಸ್‌ಐ ಆಸ್ಪತ್ರೆ ‌ಡೀನ್ ಜಿತೇಂದ್ರ ಕುಮಾರ್ ವಿರುದ್ಧ ಆಸ್ಪತ್ರೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ESI ಆಸ್ಪತ್ರೆಯ 93 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇತ್ತೀಚೆಗೆ ಕೊವಿಡ್‌ನಿಂದ ವೈದ್ಯರು ಕೂಡ ಬಲಿಯಾಗಿದ್ದಾರೆ. ಇಷ್ಟೆಲ್ಲಾ ಆದರೂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳುತ್ತಿಲ್ಲ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವವರದ್ದೇ ಈ ಕಥೆಯಾದ್ರೆ ಇನ್ನು ಆಸ್ಪತ್ರೆಯಲ್ಲಿರುವ ರೋಗಿಗಳ ಕಥೆ ಏನು. ಕೊರೊನಾದಿಂದ ದೂರವಿರಲು ಅತ್ಯವಶ್ಯಕವಾದ ಮಾಸ್ಕ್​ಗಳನ್ನೇ ಸರ್ಕಾರ ಪೂರೈಸದಿದ್ದರೆ ಹೇಗೆ?