ಕಾಲು ಮುರಿದಿರೋದಕ್ಕೆ ಸೋಂಕಿತ ವೃದ್ಧೆಯನ್ನು ಮನೆಯಲ್ಲೇ ಬಿಟ್ಟು ಹೋದ್ರು ಸಿಬ್ಬಂದಿ..
ಕಲಬುರಗಿ: ಹೆಮ್ಮಾರಿ ಕೊರೊನಾ ಕರಾಳತೆ ಮಿತಿ ಮೀರುತ್ತಿದ್ದರು. ಬೇಜವಾಬ್ದಾರಿತನ ಮಾತ್ರ ಕಡಿಮೆಯಾಗಿಲ್ಲ. ವೃದ್ಧೆಗೆ ಕೊರೊನಾ ಸೋಂಕು ದೃಢವಾಗಿದ್ದರೂ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯವಹಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತ ವೃದ್ಧೆಯ ಮನೆಯವರೆಗೂ ಬಂದು ವಾಪಸಾಗಿದ್ದಾರೆ. ಕಳೆದ ರಾತ್ರಿ ಕಲಬುರಗಿ ನಗರದಲ್ಲಿ ಸೋಂಕಿತ ವೃದ್ಧೆಯನ್ನು ಕರೆದುಕೊಂಡು ಹೋಗಲು ಬಂದ ಆ್ಯಂಬುಲೆನ್ಸ್ ವಾಪಸ್ ಮರಳಿದೆ. ಕಾರಣ ಸೋಂಕಿತ ವೃದ್ಧೆ 3ನೇ ಮಹಡಿಯಲ್ಲಿ ವಾಸವಾಗಿದ್ದರು. ವೃದ್ಧೆಯ ಕಾಲು ಮುರಿದಿದ್ದರಿಂದ ನಡೆಯಲು ಆಗ್ತಿರಲಿಲ್ಲ. ವೃದ್ಧೆ ಜತೆ ಮನೆಯಲ್ಲಿ ಇಬ್ಬರು ಮಹಿಳೆಯರು ಮಾತ್ರ ಇದ್ದರು. […]
ಕಲಬುರಗಿ: ಹೆಮ್ಮಾರಿ ಕೊರೊನಾ ಕರಾಳತೆ ಮಿತಿ ಮೀರುತ್ತಿದ್ದರು. ಬೇಜವಾಬ್ದಾರಿತನ ಮಾತ್ರ ಕಡಿಮೆಯಾಗಿಲ್ಲ. ವೃದ್ಧೆಗೆ ಕೊರೊನಾ ಸೋಂಕು ದೃಢವಾಗಿದ್ದರೂ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯವಹಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತ ವೃದ್ಧೆಯ ಮನೆಯವರೆಗೂ ಬಂದು ವಾಪಸಾಗಿದ್ದಾರೆ.
ಕಳೆದ ರಾತ್ರಿ ಕಲಬುರಗಿ ನಗರದಲ್ಲಿ ಸೋಂಕಿತ ವೃದ್ಧೆಯನ್ನು ಕರೆದುಕೊಂಡು ಹೋಗಲು ಬಂದ ಆ್ಯಂಬುಲೆನ್ಸ್ ವಾಪಸ್ ಮರಳಿದೆ. ಕಾರಣ ಸೋಂಕಿತ ವೃದ್ಧೆ 3ನೇ ಮಹಡಿಯಲ್ಲಿ ವಾಸವಾಗಿದ್ದರು. ವೃದ್ಧೆಯ ಕಾಲು ಮುರಿದಿದ್ದರಿಂದ ನಡೆಯಲು ಆಗ್ತಿರಲಿಲ್ಲ. ವೃದ್ಧೆ ಜತೆ ಮನೆಯಲ್ಲಿ ಇಬ್ಬರು ಮಹಿಳೆಯರು ಮಾತ್ರ ಇದ್ದರು. ಅವರಿಗೆ ವೃದ್ಧೆಯನ್ನು ಎತ್ತಿಕೊಂಡು ಬರುವುದಕ್ಕೆ ಆಗಿಲ್ಲ. ಹೀಗಾಗಿ ವೃದ್ಧೆಯನ್ನು ಆ್ಯಂಬುಲೆನ್ಸ್‌ವರೆಗೆ ಹೊತ್ತು ತಂದಿಲ್ಲ.
ಆದರೆ ಆ್ಯಂಬುಲೆನ್ಸ್ ಸಿಬ್ಬಂದಿ ಮಾತ್ರ ಸಹಾಯಕ್ಕೆ ಬಂದಿಲ್ಲ. ನೀವು ವೃದ್ಧೆಯನ್ನು ಹೊತ್ತು ತಂದರೆ ಕರೆದೊಯ್ಯುತ್ತೇವೆ. ಇಲ್ಲದಿದ್ದರೆ ಕರೆದುಕೊಂಡು ಹೋಗಲ್ಲವೆಂದು ನಿರ್ಲಕ್ಷ್ಯವಹಿಸಿದ್ದಾರೆ. ಕೊನೆಗೆ ಆ ಇಬ್ಬರು ಮಹಿಳೆಯರಿಗೆ 70 ವರ್ಷದ ಸೋಂಕಿತ ವೃದ್ಧೆಯನ್ನು ಹೊತ್ತು ತರಲಾಗಿಲ್ಲ. ಹೀಗಾಗಿ ಮನೆಯಲ್ಲೇ ವೃದ್ಧೆಯನ್ನು ಬಿಟ್ಟು ಸಿಬ್ಬಂದಿ ವಾಪಸ್ ಹೋಗಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 7:59 am, Wed, 8 July 20