ಅಮ್ಮ ಏಳಮ್ಮ, ಮಾತಾಡಮ್ಮ.. ಮೃತ ತಾಯಿಯನ್ನು ಎಬ್ಬಿಸಲು ಮರಿ ಕೋತಿ ಯತ್ನ

ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಮೃತಪಟ್ಟಿದ್ದು, ಅದರ ಮುಂದೆ ಕೂತು ಮರಿ ಮಂಗ ರೋದಿಸುತ್ತಿರುವ ಹೃದಯ ವಿದ್ರಾವಕ ಘಟನೆ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಸಾವನ್ನಪ್ಪಿದೆ. ಅಮ್ಮನನ್ನು ಕಳೆದು ಕೊಂಡು ಮರಿ ಕೋತಿ ರೋದಿಸುತ್ತಿರುವ ದೃಶ್ಯ ಕರುಳು ಸಹ ಕಿತ್ತು ಬರುವ ಹಾಗಿದೆ. ತಾಯಿ ಪ್ರೀತಿಯೇ ಅಂತಹದ್ದು. ಅದು ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ. ತಾಯಿಯ ಆಶ್ರಯದಲ್ಲಿದ್ದ ಮರಿ ಕೋತಿ ಈಗ ಅನಾಥವಾಗಿದೆ. ಅಮ್ಮ ಏಳು, […]

ಅಮ್ಮ ಏಳಮ್ಮ, ಮಾತಾಡಮ್ಮ.. ಮೃತ ತಾಯಿಯನ್ನು ಎಬ್ಬಿಸಲು ಮರಿ ಕೋತಿ ಯತ್ನ
ಆಯೇಷಾ ಬಾನು

Updated on: Oct 12, 2020 | 10:07 AM

ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಮೃತಪಟ್ಟಿದ್ದು, ಅದರ ಮುಂದೆ ಕೂತು ಮರಿ ಮಂಗ ರೋದಿಸುತ್ತಿರುವ ಹೃದಯ ವಿದ್ರಾವಕ ಘಟನೆ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ವಿದ್ಯುತ್ ಸ್ಪರ್ಶಿಸಿ ತಾಯಿ ಕೋತಿ ಸಾವನ್ನಪ್ಪಿದೆ. ಅಮ್ಮನನ್ನು ಕಳೆದು ಕೊಂಡು ಮರಿ ಕೋತಿ ರೋದಿಸುತ್ತಿರುವ ದೃಶ್ಯ ಕರುಳು ಸಹ ಕಿತ್ತು ಬರುವ ಹಾಗಿದೆ.

ತಾಯಿ ಪ್ರೀತಿಯೇ ಅಂತಹದ್ದು. ಅದು ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ. ತಾಯಿಯ ಆಶ್ರಯದಲ್ಲಿದ್ದ ಮರಿ ಕೋತಿ ಈಗ ಅನಾಥವಾಗಿದೆ. ಅಮ್ಮ ಏಳು, ಏನಾಯ್ತು ಅಂತ ಕಣ್ಣೀರು ಹಾಕಿದೆ. ಸ್ಥಳೀಯ ಕೆಲ ಯುವಕರು ಮೃತ ತಾಯಿ ಕೋತಿಗೆ ಪೂಜೆ ಮಾಡಿದ್ರು. ಈ ವೇಳೆ ತಾಯಿಯನ್ನು ತಬ್ಬಿ ಹಿಡಿದು ಅದರ ಮರಿ ತನ್ನನ್ನು ಅಮ್ಮನಿಂದ ದೂರ ಮಾಡಬೇಡಿ ಅಂತಾ ರೋಧಿಸಿತು.

ಇನ್ನು ಮಣ್ಣು ಮಾಡುವ ವೇಳೆ ಮರಿ ಕೋತಿ ತಾಯಿಯ ಮೃತ ದೇಹದ ಮೇಲೆ ಹೋಗಿ ಕೂತು ಯಾಕೆ ಮಾತಾಡ್ತಿಲ್ಲ ಅಮ್ಮ, ಏಳು ಎಂದು ಅದನ್ನು ಎಬ್ಬಿಸಲು ಪ್ರಯತ್ನಿಸಿತು. ಮರಿಯ ಗೋಳಾಟ ನೋಡಿ ಕೊಣ್ಣೂರು ಗ್ರಾಮದ ಜನ ಮೂಕವಿಸ್ಮಿತರಾದ್ರು. ಮರಿ ಕೋತಿಯ ಪ್ರೀತಿಗೆ ಕಣ್ಣೀರು ಸುರಿಸಿದ್ರು. ಸದ್ಯ ಸ್ಥಳೀಯರಿಂದ ತಾಯಿ ಕೋತಿ ಅಂತ್ಯ ಸಂಸ್ಕಾರ ನೆರವೇರಿದೆ. ಯುವಕರು ಮರಿ ಕೋತಿಗೆ ಹಾಲು ಕುಡಿಸಿ ಸಮಾಧಾನ ಮಾಡಿದ್ದಾರೆ. ತಾಯಿ ಹಾಗೂ ಮರಿ ಕೋತಿಗಳ ಗೋಳಾಟದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Published On - 9:11 am, Mon, 12 October 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us