ಬೆಂಗಳೂರಿನಲ್ಲಿ ಕೊರೊನಾ ಕಾಟದ ಮಧ್ಯೆ ಗುಡುಗು ಸಹಿತ ಭಾರೀ ಮಳೆ

ಬೆಂಗಳೂರು: ನಗರದ ವಿವಿಧೆಡೆ ಬೆಳ್ಳಂಬೆಳಗ್ಗೆ ವರುಣನ ಆರ್ಭಟ ಶುರುವಾದೆ. ಕಾರ್ಪೊರೇಷನ್, ಮಲ್ಲೇಶ್ವರಂ, ಮೆಜೆಸ್ಟಿಕ್, K.R.ಮಾರ್ಕೆಟ್, ಟಿ.ದಾಸರಹಳ್ಳಿ, ನೆಲಮಂಗಲ, ಬಾಗಲಗುಂಟೆ, ಹೆಸರಘಟ್ಟ, ಯಲಹಂಕ, ಮೈಸೂರು ರಸ್ತೆ, ಶಾಂತಿನಗರ, ಚಾಮರಾಜಪೇಟೆ, ಬಸವನಗುಡಿ, ಬೆಂಗಳೂರಿನ ಕಂಠೀರವ ಸ್ಟುಡಿಯೋ, ಚಿಕ್ಕಬಾಣಾವರ, ತುಮಕೂರು ರಸ್ತೆ, ವಿಜಯನಗರ, ಜಯನಗರ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಸುಮಾರು ಅರ್ಧ ಗಂಟೆಗಳ ಕಾಲ ಮಳೆಯ ರುದ್ರನರ್ತನವಾಗಿದ್ದು, ಕೆಲವೆಡೆ ಮಳೆ ಮುಂದುವರೆದಿದೆ. ಇನ್ನು ಮೂರು ದಿನ ಇದೇ ರೀತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ […]

ಬೆಂಗಳೂರಿನಲ್ಲಿ ಕೊರೊನಾ ಕಾಟದ ಮಧ್ಯೆ ಗುಡುಗು ಸಹಿತ ಭಾರೀ ಮಳೆ
ಸಾಧು ಶ್ರೀನಾಥ್​

Updated on: Apr 24, 2020 | 8:15 AM

ಬೆಂಗಳೂರು: ನಗರದ ವಿವಿಧೆಡೆ ಬೆಳ್ಳಂಬೆಳಗ್ಗೆ ವರುಣನ ಆರ್ಭಟ ಶುರುವಾದೆ. ಕಾರ್ಪೊರೇಷನ್, ಮಲ್ಲೇಶ್ವರಂ, ಮೆಜೆಸ್ಟಿಕ್, K.R.ಮಾರ್ಕೆಟ್, ಟಿ.ದಾಸರಹಳ್ಳಿ, ನೆಲಮಂಗಲ, ಬಾಗಲಗುಂಟೆ, ಹೆಸರಘಟ್ಟ, ಯಲಹಂಕ, ಮೈಸೂರು ರಸ್ತೆ, ಶಾಂತಿನಗರ, ಚಾಮರಾಜಪೇಟೆ, ಬಸವನಗುಡಿ, ಬೆಂಗಳೂರಿನ ಕಂಠೀರವ ಸ್ಟುಡಿಯೋ, ಚಿಕ್ಕಬಾಣಾವರ, ತುಮಕೂರು ರಸ್ತೆ, ವಿಜಯನಗರ, ಜಯನಗರ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ.

ಸುಮಾರು ಅರ್ಧ ಗಂಟೆಗಳ ಕಾಲ ಮಳೆಯ ರುದ್ರನರ್ತನವಾಗಿದ್ದು, ಕೆಲವೆಡೆ ಮಳೆ ಮುಂದುವರೆದಿದೆ. ಇನ್ನು ಮೂರು ದಿನ ಇದೇ ರೀತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊರೊನಾ ಸೋಂಕಿನ ನಡುವೆ ಮಳೆಯ ಕಾಟ ಶುರುವಾಗಿದೆ.

Published On - 7:47 am, Fri, 24 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us