ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರದ ಪುಂಡರಿಬ್ಬರಿಗೆ ಸೋಂಕು, ರಾತ್ರೋರಾತ್ರಿ ಶಿಫ್ಟ್!

ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರದ ಪುಂಡರಿಬ್ಬರಿಗೆ ಸೋಂಕು, ರಾತ್ರೋರಾತ್ರಿ ಶಿಫ್ಟ್!

ರಾಮನಗರ: ಬೆಂಗಳೂರಿನ ಪಾದರಾಯನಪುರದಲ್ಲಿ ಪುಂಡಾಟ ಮೆರೆದು ರಾಮನಗರ ಜೈಲು ಸೇರಿರೋ ಆರೋಪಿಗಳಿಂದ ಆತಂಕಕಾರಿ ವಿಷ್ಯ ಹೊರಬಿದ್ದಿದೆ. ಜೈಲಿನಲ್ಲಿರೋ ಆರೋಪಿಗಳಿಬ್ಬರಿಗೆ ಮಹಾಮಾರಿ ವಕ್ಕರಿಸಿರೋದು ಬೆಳಕಿಗೆ ಬಂದಿದೆ. ರಾಮನಗರ ಜೈಲು ಬಳಿ ದೊಡ್ಡ ರಾದ್ಧಾಂತವೇ ನಡೆದೋಗಿದೆ. ಸರ್ಕಾರದ ವಿರುದ್ಧ ಜೈಲು ಸಿಬ್ಬಂದಿಯೇ ತಿರುಗಿ ಬಿದ್ದಿದ್ದಾರೆ.

ರಾಮನಗರ ಜೈಲಿನಲ್ಲಿದ್ದ ಆರೋಪಿಗಳಿಬ್ಬರಿಗೆ ಕೊರೊನಾ! ಪಾದರಾಯನಪುರದಲ್ಲಿ ಗಲಾಟೆ ಮಾಡಿದವ್ರನ್ನ ಒಂದೇ ದಿನದಲ್ಲಿ ಅರೆಸ್ಟ್ ಮಾಡಲಾಯ್ತು. ಮೊನ್ನೆ ಮೊದಲ ಹಂತದಲ್ಲಿ 49 ಮಂದಿಯನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ರೆ, 2ನೇ ಹಂತದಲ್ಲಿ 72 ಮಂದಿಯನ್ನ ಸ್ಥಳಾಂತರಿಸಲಾಯ್ತು. ಆದ್ರೆ ಮೊದ್ಲ ಹಂತದಲ್ಲಿ ಶಿಫ್ಟ್ ಮಾಡಲಾಗಿದ್ದ 49 ಮಂದಿಯ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ಬಂದಿರೋದು ದೃಢವಾಗಿದೆ.

ಜೈಲಿಗೆ ಶಿಫ್ಟ್ ಮಾಡೋ ಮೊದ್ಲೆ ಆರೋಪಿಗಳ ರಕ್ತದ ಮಾದರಿಯನ್ನ ಲ್ಯಾಬ್​ಗೆ ಕಳುಹಿಸಲಾಗಿತ್ತು. ಸದ್ಯ ವರದಿ ಬಂದಿದ್ದು ಆರೋಪಿಗಳಿಬ್ಬರಿಗೆ ಸೋಂಕು ಇರೋದು ಪತ್ತೆಯಾಗಿದೆ. ಹೀಗಾಗಿ ಮಧ್ಯರಾತ್ರಿ 2 ಗಂಟೆಗೆ ಸೋಂಕಿತರಿಬ್ಬರನ್ನ ಌಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಖಾಕಿ ಟೈಟ್ ಸೆಕ್ಯೂರಿಟಿಯಲ್ಲಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ತುರ್ತು ಸಭೆ ನಡೆಸಿದ ರಾಮನಗರದ ಡಿಸಿ! ಆರೋಪಿಗಳಿಗೆ ಸೋಂಕು ಪತ್ತೆಯಾಗಿದ್ದೇ ತಡ ರಾಮನಗರದ ಡಿಸಿ ಫುಲ್ ಅಲರ್ಟ್​ ಆಗಿದ್ದಾರೆ. ಎಸ್​ಪಿ ಅನೂಪ್ ಶೆಟ್ಟಿ, ಡಿಹೆಚ್​ಒ ಜೊತೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ರು.

ರಾಮನಗರ ಜೈಲು ಸಿಬ್ಬಂದಿಗೂ ಕ್ವಾರಂಟೈನ್? ಜೈಲಿನಲ್ಲಿದ್ದ ಆರೋಪಿಗಳಿಗೆ ಹೆಮ್ಮಾರಿ ವಕ್ಕರಿಸಿದ್ದಕ್ಕೆ ಜೈಲು ಸಿಬ್ಬಂದಿಗೂ ಕ್ವಾರಂಟೈನ್ ವಿಧಿಸೋ ಸಾಧ್ಯತೆಯಿದೆ. ಇದನ್ನ ಖಂಡಿಸಿ ನಿನ್ನೆ ರಾತ್ರಿ ರಾಮನಗರ ಜೈಲು ಸಿಬ್ಬಂದಿ ಪ್ರತಿಭಟನೆ ನಡೆಸಿದ್ರು. ಕಿಡಿಗೇಡಿಗಳನ್ನ ಕರೆ ತರೋ ಮುನ್ನ ನಮ್ಮನ್ನ ಒಂದು ಮಾತು ಕೇಳಲಿಲ್ಲ. ಎಲ್ರನ್ನೂ ಕರೆತಂದು ನಮ್ಮ ಜೀವ ತೆಗೀತಿದ್ದೀರಿ ಅಂತಾ ಕಿಡಿಕಾರಿದ್ರು. ಹೀಗಾಗಿ ಜೈಲಿನ‌ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

Published On - 6:41 am, Fri, 24 April 20

Click on your DTH Provider to Add TV9 Kannada