ಗಂಗೆ ಒಲಿಯೋದು ಅಂದ್ರೆ ಮಕ್ಕಳಾಟವಲ್ಲ, ಆದ್ರೂ ಈ ಮಕ್ಕಳದು ದೊಡ್ಡ ಸಾಹಸ!

ಗಂಗೆ ಒಲಿಯೋದು ಅಂದ್ರೆ ಮಕ್ಕಳಾಟವಲ್ಲ, ಆದ್ರೂ ಈ ಮಕ್ಕಳದು ದೊಡ್ಡ ಸಾಹಸ!

ಮಂಗಳೂರು: ಬೇಸಿಗೆ ಬಂದ್ರೆ ಸಾಕು ಕರಾವಳಿಯಲ್ಲಿ ನೀರಿನ ಹಾಹಾಕಾರ ಶುರುವಾಗುತ್ತೆ. ಇರೋ ನದಿ, ಬಾವಿಗಳೆಲ್ಲಾ ಬತ್ತಿ ಹೋಗಿವೆ. ಕುಡಿಯೋ ನೀರಿಗೂ ಜನರು ಪರಿತಪಪಿಸ್ತಿದ್ದಾರೆ. ನೀರಿಗಾಗಿ ಮನೆ ಮಂದಿ ಪಡ್ತಿರೋ ಕಷ್ಟವನ್ನ ಕಂಡ ಸ್ಕೂಲ್ ಮಕ್ಕಳು ಯಾರೂ ಊಹೆ ಮಾಡೋಕೆ ಆಗ್ದಿರೋ ಕೆಲ್ಸ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

ಲಾಕ್​ಡೌನ್​​ನಿಂದ ರಜೆ ಕೊಟ್ಟಿದ್ದಕ್ಕೆ ಬೇರೆ ಮಕ್ಕಳೆಲ್ಲಾ ಮನೆಯಲ್ಲಿ ಟಿವಿ ನೋಡ್ಕೊಂಡು, ಆಟ ಆಡ್ಕೊಂಡು ಕಾಲ ಕಳೀತಿದ್ದಾರೆ. ಆದ್ರೆ ಮಂಗಳೂರಿನ ಈ ಮಕ್ಳ ಗ್ಯಾಂಗ್ ಮಾತ್ರ ಬಾವಿ ತೋಡೋ ಕೆಲ್ಸಕ್ಕೆ ಕೈ ಹಾಕಿತ್ತು. ಅಂದ್ಹಾಗೇ, ಮಳೆಗಾಲದಲ್ಲಾದ ಪ್ರವಾಹಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತತ್ತರಿಸಿ ಹೋಗಿತ್ತು.

ಪ್ರವಾಹ ನಿಂತ ಬಳಿಕ ಬಾವಿಗಳೆಲ್ಲಾ ಬತ್ತಿ ಹೋಗಿದ್ವು. ಅದ್ರಂತೆ ಮಿತ್ತಬಾಗಿಲಿನ ಕುಕ್ಕಾವು ಕೊಪ್ಪದ ಗುಂಡಿ ನಿವಾಸಿ ಚಿದಾನಂದ ಅನ್ನೋರ ಬಾವಿ ಕೂಡ ಬತ್ತಿತ್ತು. ಇದ್ರಿಂದ ನೀರಿಗಾಗಿ ಅಕ್ಕಪಕ್ಕದ ಮನೆಗಳಿಗೆ ಹೋಗ್ಬೇಕಿತ್ತು. ಇದನ್ನ ಕಂಡ ಚಿದಾನಂದರ ಮಗ 15 ವರ್ಷದ ಧನುಷ್ ಫ್ರೆಂಡ್ಸ್ ಜೊತೆ ಸೇರ್ಕೊಂಡು ಬಾವಿ ತೋಡಿದ್ದಾನೆ. ಕೊನೆಗೂ ಮಕ್ಕಳ ಸಾಹಸಕ್ಕೆ ಗಂಗೆ ಒಲಿದು ಬಂದಿದ್ದಾಳೆ.

ಮೊದಮೊದ್ಲು ಮನೆಯವರೆಲ್ಲಾ ಮಕ್ಕಳು ಏನೋ ಆಟ ಆಡ್ತಿದ್ದಾರೆ ಅಂತಾ ಸುಮ್ಮನಿದ್ರು. ಆದ್ರೆ ನೋಡನೋಡುತ್ತಲೇ ಮಕ್ಕಳು 12 ಅಡಿ ಆಳ, 4 ಅಡಿ ಅಗಲದ ಬಾವಿಯನ್ನ ತೋಡೇ ಬಿಟ್ರು. ಧನುಷ್​ಗೆ 6ನೇ ಕ್ಲಾಸ್​​ನ ಪ್ರಸನ್ನ, ಗುರುರಾಜ್, 5ನೇ ಕ್ಲಾಸ್​ನ ಶ್ರೇಯಸ್ ಹಾಗೂ 4ನೇ ಕ್ಲಾಸ್​ನ ಭವಿನೀಶ್ ಸಾಥ್ ನೀಡಿದ್ರು. ಈ ಮೂಲಕ ಬಡಕುಟುಂಬದ ನೀರಿನ ದಾಹ ತಣಿಸಿದ್ದಾರೆ. ಜೊತೆಗೆ ನೀರು ಸಿಕ್ಕಿದ್ದಕ್ಕೆ ಮಕ್ಳು ಕೂಡ ಫುಲ್ ಖುಷಿಪಡ್ತಿದ್ದಾರೆ.

ಒಟ್ನಲ್ಲಿ ಲಾಕ್​ಡೌನ್ ವೇಳೆ ಖಾಲಿ ಇರೋ ಬದ್ಲು ಮಕ್ಕಳು ಮಾಡಿರೋ ಸಾಹಸದ ಕೆಲ್ಸಕ್ಕೆ ಎಲ್ರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಕ್ಕಳ ಕಾರ್ಯವೈಖರಿ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದೆ.

https://www.facebook.com/Tv9Kannada/videos/851444088693592/

Published On - 11:16 am, Fri, 24 April 20

Click on your DTH Provider to Add TV9 Kannada