ಹೊಂಗಸಂದ್ರ ಹಾಟ್​ಸ್ಪಾಟ್​: ಆಶಾ ಕಾರ್ಯಕರ್ತೆಯರ ಜೊತೆ ಸ್ಥಳೀಯರ ಕಿರಿಕ್

ಹೊಂಗಸಂದ್ರ ಹಾಟ್​ಸ್ಪಾಟ್​: ಆಶಾ ಕಾರ್ಯಕರ್ತೆಯರ ಜೊತೆ ಸ್ಥಳೀಯರ ಕಿರಿಕ್

ಬೆಂಗಳೂರು: ಹೊಂಗಸಂದ್ರ ವಾರ್ಡ್​ನಲ್ಲಿ 15 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಂಗಸಂದ್ರ ವಾರ್ಡ್ ಹಾಗೂ ಸುತ್ತಮುತ್ತ ಏರಿಯಾಗಳಲ್ಲಿ ಹೆಚ್ಚಿನ ಎಚ್ಚರ ವಹಿಸಲಾಗುತ್ತಿದೆ. ಆದರೆ ಮನೆಯೊಳಗೆ ಹೋಗುವಂತೆ ಹೇಳಿದ್ದಕ್ಕೆ ಸ್ಥಳೀಯರು ಆಶಾ ಕಾರ್ಯಕರ್ತೆಯರ ಜತೆ ಗಲಾಟೆ ಮಾಡಿರುವ ಘಟನೆ ನಡೆದಿದೆ.

ನಗರದ ಹೊಂಗಸಂದ್ರ ವಾರ್ಡ್‌ನಲ್ಲಿ ಆಶಾ ಕಾರ್ಯಕರ್ತೆಯರು ಮನೆ ಒಳಗಡೆ ಹೋಗಲು ಹೇಳಿದ್ದಕ್ಕೆ ಸ್ಥಳೀಯರು ವಾಗ್ವಾದಕ್ಕಿಳಿದಿದ್ದಾರೆ. ಏನಪ್ಪ ನಿನಗೆ ಕಾಮನ್​ಸೆನ್ಸ್ ಇಲ್ವಾ?, ಕನಿಷ್ಠ ಜ್ಞಾನವೂ ಇಲ್ವಾ? ಮನೆ ಒಳಗೆ ಹೋಗಿ ಎಂದಿದ್ದಕ್ಕೆ ನಮಗೆ ಬೆಳಗ್ಗೆ ಉಪಾಹಾರ ಇಲ್ಲ, ಹಾಲು ಇಲ್ಲ, ತರಕಾರಿಯೂ ಇಲ್ಲ, ದಿನಸಿ ಇಲ್ಲ ಏನ್ ಮಾಡೋದು ಅಂತಾ ಗಲಾಟೆ ಮಾಡಿದ್ರೆ. ಮತ್ತೊಬ್ಬ ವ್ಯಕ್ತಿ ನಮ್ಮ ಆರೋಗ್ಯ ತಪಾಸಣೆ ಮಾಡಲೇ ಇಲ್ಲ ಅಂತಾ ಕಿರಿಕ್ ಮಾಡಿದ್ದಾರೆ.

ಹೊರಗಡೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಈಗ ನೀವು ಹೊರಗಡೆ ಹೋದರೆ ನಿಮಗೆ ಏನು ಸಿಗುತ್ತದೆ. ಸ್ವಲ್ಪವೂ ತಿಳಿದುಕೊಳ್ಳದೆ ಮಾತಾಡುತ್ತೀಯಾ ಎಂc ಸ್ಥಳೀಯರಿಗೆ ಆಶಾ ಕಾರ್ಯಕರ್ತೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. https://www.facebook.com/Tv9Kannada/videos/1172037203143066/

Published On - 12:12 pm, Fri, 24 April 20

Click on your DTH Provider to Add TV9 Kannada