ಗೌರಿಬಿದನೂರಿನಲ್ಲಿ ವರುಣನ ಆರ್ಭಟ: ನಗರ ಜಲಾವೃತ, ಕುಸಿದ ಜಂತಿಗೆ ಮನೆಗಳು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ತಡರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳು ಕುಸಿದಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಧಾರಾಕಾರ ಮಳೆಯಿಂದ ಪಟ್ಟಣದ ನಾಲ್ಕು ಜಂತಿಗೆ ಮನೆಗಳು ಕುಸಿದು ಬಿದ್ದಿವೆ. ಜೊತೆಗೆ, ನಗರದ ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಮುನೇಶ್ವರ ಬಡಾವಣೆ, ಉಪ್ಪಾರಕಾಲೋನಿ, ಗುಂಡಾಪುರ ಕಾಲೋನಿ, ಮಾಧವನಗರ, ಆನಂದಪುರ ಸೇರಿದಂತೆ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ಜೊತೆಗೆ, ನಗರದ ರೈಲ್ವೆ ಅಂಡರ್ ಪಾಸ್​ಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಹಲವು ರಸ್ತೆಗಳ ಸಂಪರ್ಕ ಕಡಿತವಾಗಿದೆ. ಮಧುಗಿರಿ ರಸ್ತೆ, ಪೊಲೀಸ್ ಠಾಣೆ […]

ಗೌರಿಬಿದನೂರಿನಲ್ಲಿ ವರುಣನ ಆರ್ಭಟ: ನಗರ ಜಲಾವೃತ, ಕುಸಿದ ಜಂತಿಗೆ ಮನೆಗಳು
Edited By:

Updated on: Aug 01, 2020 | 11:26 AM

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ತಡರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳು ಕುಸಿದಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಧಾರಾಕಾರ ಮಳೆಯಿಂದ ಪಟ್ಟಣದ ನಾಲ್ಕು ಜಂತಿಗೆ ಮನೆಗಳು ಕುಸಿದು ಬಿದ್ದಿವೆ. ಜೊತೆಗೆ, ನಗರದ ಹಲವೆಡೆ ಮನೆಗಳು ಜಲಾವೃತಗೊಂಡಿವೆ.
ಮುನೇಶ್ವರ ಬಡಾವಣೆ, ಉಪ್ಪಾರಕಾಲೋನಿ, ಗುಂಡಾಪುರ ಕಾಲೋನಿ, ಮಾಧವನಗರ, ಆನಂದಪುರ ಸೇರಿದಂತೆ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ಜೊತೆಗೆ, ನಗರದ ರೈಲ್ವೆ ಅಂಡರ್ ಪಾಸ್​ಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಹಲವು ರಸ್ತೆಗಳ ಸಂಪರ್ಕ ಕಡಿತವಾಗಿದೆ. ಮಧುಗಿರಿ ರಸ್ತೆ, ಪೊಲೀಸ್ ಠಾಣೆ ಮತ್ತು ಪೊಲೀಸ್ ಕ್ವಾಟ್ರಸ್ ಸಂಪರ್ಕ ರಸ್ತೆ, ಕರೆಕಲ್ಲಹಳ್ಳಿ ಸಂಪರ್ಕ ರಸ್ತೆಯೂ ಬಂದ್ ಆಗಿದೆ.

ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡ ಹಿನ್ನೆಲೆಯಲ್ಲಿ ನಗರಸಭೆ ಇಂದಿರಾ ಕ್ಯಾಂಟೀನ್​ನಲ್ಲಿ ಗಂಜಿ ಕೇಂದ್ರ ತೆರೆದಿದೆ. ಅವಶ್ಯಕತೆ ಇರುವವರು ಗಂಜಿ ಕೇಂದ್ರಕ್ಕೆ ಆಗಮಿಸಿ ಊಟ ಮಾಡುವಂತೆ ಮನವಿ ಮಾಡಿದೆ.