ಅಧಿಕಾರಿಗಳ ದರ್ಪ ಕೊರೊನಾಗೇ ಪ್ರೀತಿ! ಕ್ವಾರಂಟೈನ್‌ ಜನರ ಕಷ್ಟ ಕೊರೊನಾಗಿಂತ ಹೀನಾಯ

| Updated By: ಆಯೇಷಾ ಬಾನು

Updated on: Jun 15, 2020 | 10:49 AM

ಚಿಕ್ಕಮಗಳೂರು: ಊಟ, ನಿದ್ರೆ, ಶೌಚ ಇವು ಮನುಷ್ಯನ ದಿನ ನಿತ್ಯದ ಅಗತ್ಯಗಳು. ಇವುಗಳಲ್ಲಿ ಯಾವುದಕ್ಕೆ ಕೂಡಾ ತೊಂದ್ರೆಯಾದ್ರೂ ಸಂಕಷ್ಟಗಳು ಶುರುವಾಗೋದು ಪಕ್ಕಾ. ಅದ್ರಲ್ಲೂ ಊಟ ಇಲ್ಲದಿದ್ರೂ ತಡೆದುಕೊಳ್ಳಬಹುದು, ಆದ್ರೆ ಶೌಚಕ್ಕೆ ಹೋಗದೇ, ಮೂತ್ರ ವಿಸರ್ಜನೆ ಮಾಡದೇ ಬದ್ಕೋಕಾಗುತ್ತಾ? ತುಂಬಾ ಕಷ್ಟ. ಆದ್ರೆ ಇಂತಹದೊಂದು ದು:ಸ್ಥಿತಿ ಈಗ ಕ್ವಾರಂಟೈನ್ ಕೇಂದ್ರದಲ್ಲಿರೋ ಜನರಿಗೆ ಬಂದೊದಗಿದೆ. ನಂದಿಬಟ್ಟಲು ಕ್ವಾರಂಟೈನ್‌ ಕೇಂದ್ರದಲ್ಲಿ ನರಕಯಾತನೆ ಹೌದು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದಿಬಟ್ಟಲು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಲ್ಲಿರೋ ಜನರು ಗೋಳು […]

ಅಧಿಕಾರಿಗಳ ದರ್ಪ ಕೊರೊನಾಗೇ ಪ್ರೀತಿ! ಕ್ವಾರಂಟೈನ್‌ ಜನರ ಕಷ್ಟ ಕೊರೊನಾಗಿಂತ ಹೀನಾಯ
Follow us on

ಚಿಕ್ಕಮಗಳೂರು: ಊಟ, ನಿದ್ರೆ, ಶೌಚ ಇವು ಮನುಷ್ಯನ ದಿನ ನಿತ್ಯದ ಅಗತ್ಯಗಳು. ಇವುಗಳಲ್ಲಿ ಯಾವುದಕ್ಕೆ ಕೂಡಾ ತೊಂದ್ರೆಯಾದ್ರೂ ಸಂಕಷ್ಟಗಳು ಶುರುವಾಗೋದು ಪಕ್ಕಾ. ಅದ್ರಲ್ಲೂ ಊಟ ಇಲ್ಲದಿದ್ರೂ ತಡೆದುಕೊಳ್ಳಬಹುದು, ಆದ್ರೆ ಶೌಚಕ್ಕೆ ಹೋಗದೇ, ಮೂತ್ರ ವಿಸರ್ಜನೆ ಮಾಡದೇ ಬದ್ಕೋಕಾಗುತ್ತಾ? ತುಂಬಾ ಕಷ್ಟ. ಆದ್ರೆ ಇಂತಹದೊಂದು ದು:ಸ್ಥಿತಿ ಈಗ ಕ್ವಾರಂಟೈನ್ ಕೇಂದ್ರದಲ್ಲಿರೋ ಜನರಿಗೆ ಬಂದೊದಗಿದೆ.

ನಂದಿಬಟ್ಟಲು ಕ್ವಾರಂಟೈನ್‌ ಕೇಂದ್ರದಲ್ಲಿ ನರಕಯಾತನೆ
ಹೌದು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದಿಬಟ್ಟಲು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಲ್ಲಿರೋ ಜನರು ಗೋಳು ಇಂಥದ್ದೇ. ಕಡೂರು ತಾಲೂಕಿನ ಕೆ ದಾಸರಹಳ್ಳಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಕೆಲವರನ್ನ ಇಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದ್ರೆ ಹೀಗೆ ಕ್ವಾರಂಟೈನ್‌ಗೊಳಪಟ್ಟಿರೋರು ಪಡುತ್ತಿರೋ ಕಷ್ಟ ಮಾತ್ರ ಕೊರಾನಾಕ್ಕಿಂತ ಕಡಿಮೆಯೇನಿಲ್ಲ. ಅದೂ ಚಿಕ್ಕ ಚಿಕ್ಕ ಮಕ್ಕಳನ್ನ ಜತೆಯಲ್ಲೇ ಇರಿಸಿಕೊಂಡು ಕ್ವಾರಂಟೈನ್‌ನಲ್ಲಿರೋ ಇವರದು ಅಕ್ಷರಶಃ ನರಕಯಾತನೆ.

ಗಬ್ಬು ನಾರುತ್ತಿರುವ ಶೌಚಾಲಯಗಳು
ಶೌಚಾಲಯಗಳು ಗಬ್ಬು ನಾರುತ್ತಿದ್ದು, ಅತ್ತ ಮೂಗೂ ಒಡ್ಡದಂತಹ ಪರಿಸ್ಥಿತಿಯಿದೆ. ಸರಿಯಾದ ನೀರಿಲ್ಲದೇ ಶೌಚಕ್ಕೆ ಹೋಗಲು ಕ್ವಾರಂಟೈನಿಗಳು ಪರದಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದ್ರೆ, ಅವರು ಮಾತ್ರ ಕ್ಯಾರೆ ಅನ್ತಿಲ್ಲ ಅನ್ನೋ ನೋವು ಕ್ವಾರಂಟೈನ್‌ಲ್ಲಿರೋರದು.

ಊಟ ಕೊಡದಿದ್ರೂ ಪರವಾಗಿಲ್ಲ, ಆದ್ರೆ ಈ ಥರ ನಮ್ಮನ್ನ ಜೈಲಿಗೆ ಹಾಕಿದಂತೆ ಯಾವುದೇ ಕನಿಷ್ಠ ಮೂಲ ಸೌಲಭ್ಯ ಕೊಡದೆ ಕೂಡಿ ಹಾಕಿರೋದು ಸರಿನಾ ಅನ್ನೋದು ಕ್ವಾರಂಟೈನ್‌ನಲ್ಲಿರೋ ಮಹಿಳೆಯರ ನೋವು. ಈ ಬಗ್ಗೆ ಕ್ವಾರಂಟೈನ್‌ನಲ್ಲಿರೋ ಕೆಲವರು ಕೇಂದ್ರದ ಕರ್ಮಕಾಂಡವನ್ನ ಎಳೆ ಎಳೆಯಾಗಿ ವಿಡಿಯೋ ಮಾಡಿ ಮಾಧ್ಯಮಗಳಿಗೆ ಕಳುಹಿಸಿದ್ದಾರೆ.

ಕ್ವಾರಂಟೈನ್‌ನ ಮೂಲೋದ್ದೇಶವೇ ವಿಫಲವಾಗುತ್ತದಲ್ಲವೇ?
ಮಾಧ್ಯಮಗಳೂ ಕೂಡ ಕಾಮನಕೆರೆ ಮೊರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ ಬಗ್ಗೆ ವರದಿ ಮಾಡಿವೆ. ಆದ್ರೂ ಅಧಿಕಾರಿಗಳು ಮಾತ್ರ ಡೋಂಟ್‌ ಕೇರ್‌. ಎಚ್ಚೆತ್ತುಕೊಳ್ಳೋ ಬದಲು, ವಿಡಿಯೋ ಮಾಡಿ ಮಾಧ್ಯಮಗಳಿಗೆ ಕೊಡಬಾರದು. ಒಂದುವೇಳೆ ಮತ್ತೇ ವಿಡಿಯೋ ಮಾಡಿ ಕೊಟ್ಟರೇ ಸರಿಯಿರಲ್ಲ ಅಂತಾ ಅಲ್ಲಿರೋರಿಗೆ ಧಮ್ಕಿ ಹಾಕ್ತಿದ್ದಾರಂತೆ.

ಕನಿಷ್ಠ ಸೌಲಭ್ಯ ಕೊಡಲಿಕ್ಕಾಗದ ಸರ್ಕಾರ ಮತ್ತು ಅಧಿಕಾರಿಗಳಿಗೆ ಏನು ಹೇಳಬೇಕು. ಶೌಚಾಲಯಕ್ಕೂ ಹೋಗದಂತಹ ದುಃಸ್ಥಿತಿ ತಂದಿರೋ ಜಿಲ್ಲಾಡಳಿತದ ವೈಫಲ್ಯ ನಿಜಕ್ಕೂ ನಾಚಿಕೆಗೇಡಿತನ ಅಲ್ಲವೇ ಅನ್ನೋದು ಕ್ವಾರಂಟೈನ್‌ಲ್ಲಿರೋರ ಆಕ್ರೋಶ ? ಅಧಿಕಾರಿಗಳು ಅಲ್ಲಿರೋರು ಮೇಲೆ ದರ್ಪ ತೋರೋದು ಬಿಟ್ಟು, ಸಮಸ್ಯೆಗಳನ್ನ ಪರಿಹರಿಸಿದ್ರೆ, ಮಾನಸಿಕವಾಗಿ ಕುಗ್ಗಿರುವ ಜನರು ಸಕಾರಾತ್ಮಕವಾಗಿ ಕೊರೊನಾ ಜತೆಗಿನ ಯುದ್ಧವನ್ನ ಎದರಿಸಬಹುದು. ಇಲ್ಲದಿದ್ರೆ ಕ್ವಾರಂಟೈನ್‌ನ ಮೂಲೋದ್ದೇಶವೇ ವಿಫಲವಾಗುತ್ತದಲ್ಲವೇ?

Published On - 10:43 am, Sun, 14 June 20