ಹಳದಿಗಟ್ಟಿದ ಹಲ್ಲನ್ನು ಬೆಳ್ಳಗೆ ಮಾಡಲು ಇಲ್ಲಿದೆ ಮನೆ ಮದ್ದು..

| Updated By: ಆಯೇಷಾ ಬಾನು

Updated on: Mar 18, 2021 | 8:43 AM

ಬೆರಿಹಣ್ಣು, ಕೆಂಪು ವೈನ್, ಕಾಫಿ ಅಥವಾ ಚಹಾ ಕುಡಿಯುವುದರಿಂದ ಹಲ್ಲು ಹಳದಿಯಾಗುತ್ತದೆ. ಸಕ್ಕರೆ ಮತ್ತು ಕಾರ್ಬೋ ಹೈಡ್ರೇಟ್‌ಗಳು ಅಧಿಕವಾಗಿರುವ ಆಹಾರ ಸೇವನೆ, ಧೂಮಪಾನದಿಂದ ಕೂಡ ಹಲ್ಲು ಹಳದಿಯಾಗಬಹುದು.

ಹಳದಿಗಟ್ಟಿದ ಹಲ್ಲನ್ನು ಬೆಳ್ಳಗೆ ಮಾಡಲು ಇಲ್ಲಿದೆ ಮನೆ ಮದ್ದು..
ಸಾಂದರ್ಭಿಕ ಚಿತ್ರ
Follow us on

ನಿತ್ಯ ಹಲ್ಲನ್ನು ಉಜ್ಜುತ್ತಿದ್ದರೂ ಕೆಲವರ ಹಲ್ಲು ಹಳದಿಗಟ್ಟಿರುತ್ತದೆ. ಹಲ್ಲು ಹಳದಿಯಾಗಿದೆ ಎನ್ನುವ ಕಾರಣಕ್ಕೆ ನಗಲೂ ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿರುತ್ತದೆ. ಇದಕ್ಕೆ ಅನೇಕರು ದಂತ ವೈದ್ಯರ ಬಳಿ ತೆರಳಿ ಬೆಳ್ಳಗೆ ಮಾಡಿಕೊಳ್ಳುವ ಕೆಲಸ ಮಾಡಿರುತ್ತಾರೆ. ಆದರೆ, ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಕೆ ಮಾಡಿಕೊಂಡು ಹಳದಿಗಟ್ಟಿದ ಹಲ್ಲನ್ನು ಬೆಳ್ಳಗೆ ಮಾಡಬಹುದು. ಅದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಲ್ಲು ಹಳದಿ ಆಗಲು ಕಾರಣಗಳು
ಬೆರಿಹಣ್ಣು, ಕೆಂಪು ವೈನ್, ಕಾಫಿ ಅಥವಾ ಚಹಾ ಕುಡಿಯುವುದರಿಂದ ಹಲ್ಲು ಹಳದಿಯಾಗುತ್ತದೆ. ಸಕ್ಕರೆ ಮತ್ತು ಕಾರ್ಬೋ ಹೈಡ್ರೇಟ್‌ಗಳು ಅಧಿಕವಾಗಿರುವ ಆಹಾರ ಸೇವನೆ, ಧೂಮಪಾನದಿಂದ ಕೂಡ ಹಲ್ಲು ಹಳದಿಯಾಗಬಹುದು.

ಪರಿಹಾರ
ಹಲವು ಬಾರಿ ಹಲ್ಲುಜ್ಜಬೇಕು..
ನಿಮ್ಮ ಹಳದಿ ಹಲ್ಲನ್ನು ಬೆಳ್ಳಗೆ ಮಾಡಲು ಇದು ನೀವು ಅಗತ್ಯವಾಗಿ ತೆಗೆದುಕೊಳ್ಳಲೇಬೇಕಿರುವ ಮೊದಲ ಕ್ರಮ. ಸಿಹಿ ಪದಾರ್ಥ ತಿಂದ ನಂತರ ಅಥವಾ ಊಟ ಮಾಡಿದ ನಂತರ ನೀವು ಹಲ್ಲನ್ನು ಉಜ್ಜಬೇಕು ಮತ್ತು ಹಲ್ಲುಜ್ಜುವ ಕ್ರಮ ಸರಿಯಾಗಿರಬೇಕು. ಕಡ್ಡಾಯವಾಗಿ ಒಂದು ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜಬೇಕು. ಹಲ್ಲನ್ನು ಕನಿಷ್ಠ ಎರಡು ನಿಮಿಷ ಉಜ್ಜಬೇಕು. ಹಲ್ಲಿನ ಪ್ರತಿ ಮೂಲೆಗೂ ಬ್ರಶ್​ ತಲುಪುವಂತೆ ನೋಡಿಕೊಳ್ಳಬೇಕು.

ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್
ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್‌ನಿಂದ ಮಾಡಿದ ಪೇಸ್ಟ್ ಅನ್ನು ಬಳಸುವುದರಿಂದ ಹಲ್ಲಿನ ಮೇಲಿರುವ ಕಲೆಗಳನ್ನು ತೊಡೆದು ಹಾಕಬಹುದು. ಪೇಸ್ಟ್ ತಯಾರಿಸಲು 1 ಚಮಚ ಅಡಿಗೆ ಸೋಡಾ, 2 ಚಮಚ ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಬೆರೆಸಿ. ಈ ಪೇಸ್ಟ್‌ನಿಂದ ಹಲ್ಲುಜ್ಜಿದ ನಂತರ ನಿಮ್ಮ ಬಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸುವುದರಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕಬಹುದು. ಇದು ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆ. 1 ರಿಂದ 2 ಟೀ ಚಮಚ ತೆಂಗಿನ ಎಣ್ಣೆಯನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು 10 ರಿಂದ 30 ನಿಮಿಷಗಳ ಕಾಲ ಮುಕ್ಕಳಿಸಿ. ತೈಲದಲ್ಲಿ ಬ್ಯಾಕ್ಟೀರಿಯಾ ಇರುವುದರಿಂದ ಅದನ್ನು ನುಂಗಬೇಡಿ. 10 ನಿಮಿಷಗಳ ನಂತರ ಬಾಯಿಯನ್ನು ಸ್ವಚ್ಛವಾಗಿ ತೊಳೆಯಿರಿ. ನಂತರ ಬ್ರಷ್ ಮಾಡಿ.

ಆ್ಯಪಲ್ ಸೈಡರ್ ವಿನೆಗರ್
ಮಾರುಕಟ್ಟೆಯಲ್ಲಿ ಸಿಗುವ ಆ್ಯಪಲ್ ಸೈಡರ್ ವಿನೆಗರ್ ಬಳಸುವುದರಿಂದಲೂ ಹಲ್ಲುಗಳನ್ನು ಬಿಳುಪುಗೊಳಿಸಬಹುದು. 2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಬಾಯಿಯನ್ನು ವಾಶ್ ಮಾಡಿ. 30 ಸೆಕೆಂಡುಗಳ ಕಾಲ ದ್ರಾವಣವನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸಿ.

ಹಣ್ಣಿನ ಸಿಪ್ಪೆ
ನಿಮ್ಮ ಹಲ್ಲುಗಳ ಮೇಲೆ ನಿಂಬೆ, ಕಿತ್ತಳೆ ಅಥವಾ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿದರೆ ಅದು ಬಿಳಿಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಸಿಟ್ರಸ್ ಹಣ್ಣಿನ ಸಿಪ್ಪೆಗಳಲ್ಲಿ ಕಂಡುಬರುವ ಡಿ-ಲಿಮೋನೆನ್ ಮತ್ತು / ಅಥವಾ ಸಿಟ್ರಿಕ್ ಆಮ್ಲ ಸಂಯುಕ್ತವು ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆಯಂತೆ.

ಹಣ್ಣುಗಳ ಸೇವನೆ
ಹೆಚ್ಚಿನ ನೀರಿನ ಅಂಶ ಇರುವ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಹಲ್ಲುಗಳನ್ನು ಆರೋಗ್ಯವಾಗಿಡಬಹುದು. ಹಣ್ಣಿನಲ್ಲಿರುವ ನೀರಿನ ಅಂಶ ಹಳದಿ ಹಲ್ಲುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಾಶಮಾಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್​ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..