ಇದು ಮಧುಮೇಹಿಗಳಿಗೆ ಮಾತ್ರ; ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಸುಲಭ ಪರಿಹಾರ

| Updated By: ಆಯೇಷಾ ಬಾನು

Updated on: Mar 21, 2021 | 6:44 AM

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಸೇವನೆ ಮಾಡುವ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಹಾಗಾದರೆ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಇದು ಮಧುಮೇಹಿಗಳಿಗೆ ಮಾತ್ರ; ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಸುಲಭ ಪರಿಹಾರ
ಸಾಂದರ್ಭಿಕ ಚಿತ್ರ
Follow us on

ಈ ದಿನಗಳಲ್ಲಿ ಮಧುಮೇಹ ಸಮಸ್ಯೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇಂಟರ್​​ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ಪ್ರಕಾರ, 2030ರ ವೇಳೆಗೆ ವಿಶ್ವದಲ್ಲಿ 57.8 ಕೋಟಿ ಜನರು ಮಧುಮೇಹಕ್ಕೆ ತುತ್ತಾಗಲಿದ್ದಾರಂತೆ. 2045ರ ವೇಳೆಗೆ ಈ ಸಂಖ್ಯೆ 70 ಕೋಟಿಗೆ ಏರಿಕೆ ಆಗಲಿದೆ. ಮಧುಮೇಹ ಇರುವ ವ್ಯಕ್ತಿಗೆ ಇನ್ಸುಲಿನ್ ಒಳ್ಳೆಯದಲ್ಲ. ಇದು ರಕ್ತದಲ್ಲಿನ ಗ್ಲೂಕೋಸ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಆಯಾಸ ಮತ್ತು ಹೃದ್ರೋಗದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಸೇವನೆ ಮಾಡುವ ಆಹಾರ ಪ್ರಮುಖ ಪಾತ್ರವಹಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ನಿಯಂತ್ರಿಸುವುದು?
ಪ್ರತಿದಿನ ವ್ಯಾಯಾಮ ಮಾಡಿ ..
ದಿನವೂ ವ್ಯಾಯಾಮ ಮಾಡು. ಹಾಗೆ ಮಾಡುವುದರಿಂದ ತೂಕವನ್ನು ನಿಯಂತ್ರಣಗೊಳ್ಳುತ್ತದೆ. ವ್ಯಾಯಾಮ ಮಾಡುವುದರಿಂದ ಸಕ್ಕರೆ ಅಂಶ ಕಡಿಮೆ ಆಗುತ್ತದೆ. ಈ ಕಾರಣಕ್ಕೆ ಮಧುಮೇಹ ಇದ್ದರೆ ವೈದ್ಯರು ವಾಕಿಂಗ್​ ಮಾಡುವಂತೆ ಸೂಚಿಸುತ್ತಾರೆ.

ಕಾರ್ಬೋಹೈಡ್ರೇಟ್ ಸೇವನೆ ..
ಮಧುಮೇಹ ಬರದಂತೆ ನೋಡಿಕೊಳ್ಳಲು ಕಾರ್ಬೋಹೈಡ್ರೇಟ್ ನಿರ್ವಹಣೆ ಬಹಳ ಮುಖ್ಯ. ಕಾರ್ಬ್‌ ಇರುವ ಆಹಾರ ತಿನ್ನುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಕಡಿಮೆ ಕಾರ್ಬ್ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.

ಸಾಕಷ್ಟು ನೀರು ಕುಡಿಯಿರಿ..
ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾದ ಮಟ್ಟದಲ್ಲಿಡಲು ಸಹಾಯ ಮಾಡುತ್ತದೆ. ನೀರು ಹೆಚ್ಚು ಕುಡಿದರೆ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಆಗುತ್ತದೆ ಮತ್ತು ಮೂತ್ರಪಿಂಡದಿಂದ ಸಕ್ಕರೆ ಅಂಶ ಹೊರಹೋಗುತ್ತದೆ.

ಒತ್ತಡ ಕಡಿಮೆ ಮಾಡಿಕೊಳ್ಳಿ..
ನೀವು ಸಾಕಷ್ಟು ಒತ್ತಡದಲ್ಲಿದ್ದರೆ ಅದರಿಂದ ಮಧುಮೇಹ ಹೆಚ್ಚಬಹುದು. ಹಾರ್ಮೋನುಗಳಾದ ಗ್ಲುಕಗನ್ ಮತ್ತು ಕಾರ್ಟಿಸೋಲ್ ಒತ್ತಡದ ಸಮಯದಲ್ಲಿ ಹೆಚ್ಚಾಗುತ್ತದೆ. ಈ ಹಾರ್ಮೋನುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ.

ಸರಿಯಾದ ನಿದ್ರೆ ..
ಉತ್ತಮ ಆರೋಗ್ಯಕ್ಕಾಗಿ ಸರಿಯಾದ ನಿದ್ರೆ ಬಹಳ ಮುಖ್ಯ. ವಿಶ್ರಾಂತಿ ಕೊರತೆಯು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತಿದೆ. ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಆಹಾರದ ಬಗ್ಗೆ ಇರಲಿ ಗಮನ
ಕಡಿಮೆ ಮತ್ತು ಮಧ್ಯಮ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರಗಳು – ಬಾರ್ಲಿ, ಮೊಸರು, ಓಟ್ಸ್, ಬೀನ್ಸ್​ ಸೇವಿಸಿ. ತೂಕ ನಿರ್ವಹಣೆ ತುಂಬಾನೇ ಮುಖ್ಯ. ನಿಮ್ಮ ದೇಹದ ತೂಕ ನಿಯಂತ್ರಣದಲ್ಲಿದ್ದರೆ ಮಧುಮೇಹ ಬರುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಹಳದಿಗಟ್ಟಿದ ಹಲ್ಲನ್ನು ಬೆಳ್ಳಗೆ ಮಾಡಲು ಇಲ್ಲಿದೆ ಮನೆ ಮದ್ದು..