BBK8 Elimination: ಬಿಗ್ ಬಾಸ್ ಮನೆಯ 9 ಜನರಲ್ಲಿ 4 ಮಂದಿ ಸೇಫ್; ಐವರಲ್ಲಿ ಒಬ್ಬರು ಔಟ್!
ನಿಧಿ ಸಿನಿಮಾ ಮೂಲಕ ಮೊದಲಿನಿಂದಲೂ ಪ್ರೇಕ್ಷಕರಿಗೆ ಚಿರಪರಿಚತರಾಗಿದ್ದಾರೆ. ಅವರಿಗೆ ಅಭಿಮಾನಿ ಬಳಗ ದೊಡ್ಡದಿದೆ. ಹೀಗಾಗಿ ಅವರು ಸೇಫ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರದ ಎಲಿಮಿನೇಷನ್ ನಡೆಯುತ್ತಿದೆ. ಶನಿವಾರ (ಮಾರ್ಚ್ 20) ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮ ನಡೆದಿದೆ. ಈ ವೇಳೆ ನಾಲ್ಕು ಸ್ಪರ್ಧಿಗಳು ಸೇಫ್ ಆಗಿದ್ದಾರೆ. ಇಂದು (ಮಾ.21) ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಅಭ್ಯರ್ಥಿ ಯಾರು ಎನ್ನುವುದು ಗೊತ್ತಾಗಲಿದೆ. ಈ ಬಾರಿ ನಾಮಿನೇಷನ್ ಲಿಸ್ಟ್ನಲ್ಲಿ ಶಮಂತ್ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ ಇದ್ದರು. 9 ಸ್ಪರ್ಧಿಗಳ ಪೈಕಿ ಒಬ್ಬರು ಬಿಗ್ ಬಾಸ್ ಮನೆಯಿಂದ ಭಾನುವಾರ ಹೊರ ಹೋಗಲಿದ್ದಾರೆ. ಅದು ಯಾರು ಎನ್ನುವ ಕೂತುಹಲ ಪ್ರೇಕ್ಷಕರದ್ದು.
ಅರವಿಂದ್ ಕೆ.ಪಿ., ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ನಿಧಿ ಸುಬ್ಬಯ್ಯ ಸೇಫ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಬ್ರೋ ಗೌಡ, ಗೀತಾ ಭಾರತಿ ಭಟ್, ರಘು ಗೌಡ, ವಿಶ್ವನಾಥ್ , ದಿವ್ಯಾ ಉರುಡುಗ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ.
ಈ ಬಾರಿಯ ಎಲಿಮಿನೇಷನ್ಗೆ ನಾಮಿನೇಟ್ ಮಾಡುವಾಗ ಶಮಂತ್ ಹಾಗೂ ನಿಧಿಗೆ ಅತಿ ಹೆಚ್ಚು ಮತಗಳು ಬಿದ್ದಿದ್ದವು. ಇವರು ಮನೆಯಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ ಎನ್ನುವ ಮಾತಿದೆ. ಆದರೆ, ನಿಧಿ ಸಿನಿಮಾ ಮೂಲಕ ಮೊದಲಿನಿಂದಲೂ ಪ್ರೇಕ್ಷಕರಿಗೆ ಚಿರಪರಿಚತರಾಗಿದ್ದಾರೆ. ಅವರಿಗೆ ಅಭಿಮಾನಿ ಬಳಗ ದೊಡ್ಡದಿದೆ. ಹೀಗಾಗಿ ಅವರು ಸೇಫ್ ಆಗಿದ್ದಾರೆ.
ಎರಡು ವಾರ ಎಲಿಮಿನೇಷನ್ನಿಂದ ದೂರವೇ ಇದ್ದ ಬ್ರೋ ಗೌಡ ಮೊದಲನೇ ಬಾರಿ ಎಲಿಮಿನೇಷನ್ ಎದುರಿಸುತ್ತಿದ್ದಾರೆ. ಈ ಬಾರಿ ಅವರು ಮನೆಯಿಂದ ಹೊರ ಹೋಗುವುದಾಗಿ ಮನೆಯ ಎಲ್ಲಾ ಸದಸ್ಯರು ಭವಿಷ್ಯ ನುಡಿದಿದ್ದಾರೆ.
ಇನ್ನು ಪ್ರಶಾಂತ್ ಸಂಬರಗಿ, ಅರವಿಂದ್ ಕೆ.ಪಿ., ದಿವ್ಯಾ ಸುರೇಶ್ ಗೇಮ್ಗಳಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ ಅವರು ಸೇಫ್ ಆಗಿದ್ದಾರೆ. ದಿವ್ಯಾ ಉರುಡುಗ, ರಘು ಗೌಡ ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೀಗಾಗಿ ಇವರು ಮನೆಯಿಂದ ಹೊರ ಹೋಗೋದು ಅನುಮಾನ ಎನ್ನಲಾಗುತ್ತಿದೆ.
ಗೀತಾ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಎಮೋಷನಲ್ ನಾಟಕ ಮಾಡುತ್ತಾರೆ ಎನ್ನುವ ಮಾತಿದೆ. ಹೀಗಾಗಿ, ಇವರ ಬಗ್ಗೆ ಪ್ರೇಕ್ಷಕರು ಮುನಿಸಿಕೊಂಡರೂ ಮುನಿಸಿಕೊಳ್ಳಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿದೆ. ಇನ್ನು, ವಿಶ್ವ ಅವರು ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸ್ಪರ್ಧಿ. ಇವರನ್ನು ಪ್ರೇಕ್ಷಕರು ಕೈ ಹೀಡಿತಾರಾ ಎಂಬುದನ್ನು ಕಾದು ನೋಡಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಗೀತಾ ಅಥವಾ ವಿಶ್ವ ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಎಲ್ಲಾ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.
ಇದನ್ನೂ ಓದಿ: ಕಳಪೆ ಪ್ರದರ್ಶನದ ಮಧ್ಯೆಯೂ ಬಿಗ್ ಬಾಸ್ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಮಾಡಿದ್ದಾರೆ ಶಮಂತ್!