ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ವರು ಪೌರ ಕಾರ್ಮಿಕರು ಕೊರೊನಾದಿಂದ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಕಳುಹಿಸಿದೆ.
ಹೌದು ಇತ್ತೀಚೆಗೆ ಕೊರೊನಾದಿಂದ ಬಿಬಿಎಂಪಿಯ ಕರ್ತವ್ಯ ನಿರತ ನಾಲ್ವರು ಪೌರ ಕಾರ್ಮಿಕರು ಸಾವನ್ನಪ್ಪಿದ್ದರು. ಆದ್ರೆ ಹೀಗೆ ಸಾವನ್ನಪ್ಪಿದ ಪೌರ ಕಾರ್ಮಿಕರಿಗೆ ಸರ್ಕಾರದಿಂದಾಗಲಿ ಅಥವಾ ಗರೀಬ್ ಕಲ್ಯಾಣ್ ವಿಮೆ ಯೋಜನೆಯಿಂದ ಏನಾದರೂ 50 ಲಕ್ಷ ರೂ. ಗಳ ಪರಿಹಾರ ನೀಡಲು ಅವಕಾಶವಿದೆಯೇ? ಗುತ್ತಿಗೆ ಕಾರ್ಮಿಕರಿಗೂ ಬಿಬಿಎಂಪಿ ಯೋಜನೆ ಅನ್ವಯಿಸುತ್ತದಯೇ? ಈ ಬಗ್ಗೆ ಮಾಹಿತಿ ನೀಡಿ ಎಂದು ಹೈಕೋರ್ಟ್ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದೆ.
ಈಗ ಚೆಂಡು ಬಿಬಿಎಂಪಿಯ ಅಂಗಳದಲ್ಲಿದ್ದು, ಈ ಸಂಬಂಧ ಕೋರ್ಟ್‌ಗೆ ಬಿಬಿಎಂಪಿಯಲ್ಲಿನ ಯೋಜನೆಗಳ ಬಗ್ಗೆ ಮತ್ತು ಪೌರ ಕಾರ್ಮಿಕರಿಗೆ ಇರುವ ಕಲ್ಯಾಣ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕಿದೆ.