ಬಹಮನಿ ಕೋಟೆಯಲ್ಲಿ ಜಾಗ ಒತ್ತುವರಿ, ಅಕ್ರಮ ಮನೆಗಳ ತೆರವಿಗೆ ಹೈಕೋರ್ಟ್ ಆದೇಶ

|

Updated on: Feb 02, 2020 | 11:13 AM

ಕಲಬುರಗಿ: ಬಹಮನಿ ಕೋಟೆಯಲ್ಲಿರುವ ಮನೆಗಳ ತೆರವಿಗೆ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ. ರಾಜ್ಯ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮನೆಗಳ ತೆರವಿಗೆ ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಕೂಡಲೇ ಮನೆಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಮನೆ ತೆರವು ಮಾಡದಿದ್ದರೆ ಮನೆಗಳನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಕಲಬುರಗಿಯ ಐತಿಹಾಸಿಕ ಬಹಮನಿ ಕೋಟೆಯಲ್ಲಿ ಸುಮಾರು 282 ಮನೆಗಳಿವೆ. ಇವರೆಲ್ಲ ನೂರಾರು ವರ್ಷಗಳಿಂದ ಇಲ್ಲೇ ಇದ್ದು ತಮ್ಮ ಗೂಡು ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಜನ ಕಂಗಾಲಾಗಿದ್ದಾರೆ. ಮನೆಗಳನ್ನು ತೆರವುಗೊಳಿಸೋದಿಲ್ಲಾ ಎಂದು ಕೋಟೆಯಲ್ಲಿನ […]

ಬಹಮನಿ ಕೋಟೆಯಲ್ಲಿ ಜಾಗ ಒತ್ತುವರಿ, ಅಕ್ರಮ ಮನೆಗಳ ತೆರವಿಗೆ ಹೈಕೋರ್ಟ್ ಆದೇಶ
Follow us on

ಕಲಬುರಗಿ: ಬಹಮನಿ ಕೋಟೆಯಲ್ಲಿರುವ ಮನೆಗಳ ತೆರವಿಗೆ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ. ರಾಜ್ಯ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮನೆಗಳ ತೆರವಿಗೆ ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಕೂಡಲೇ ಮನೆಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಮನೆ ತೆರವು ಮಾಡದಿದ್ದರೆ ಮನೆಗಳನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಕಲಬುರಗಿಯ ಐತಿಹಾಸಿಕ ಬಹಮನಿ ಕೋಟೆಯಲ್ಲಿ ಸುಮಾರು 282 ಮನೆಗಳಿವೆ. ಇವರೆಲ್ಲ ನೂರಾರು ವರ್ಷಗಳಿಂದ ಇಲ್ಲೇ ಇದ್ದು ತಮ್ಮ ಗೂಡು ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಜನ ಕಂಗಾಲಾಗಿದ್ದಾರೆ. ಮನೆಗಳನ್ನು ತೆರವುಗೊಳಿಸೋದಿಲ್ಲಾ ಎಂದು ಕೋಟೆಯಲ್ಲಿನ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.

ಈ ಹಿಂದೆ ಕೋಟೆಯಲ್ಲಿರುವ ಅಕ್ರಮ ನಿವಾಸಿಗಳ ತೆರವಿಗೆ ಕೆಲ ಸಾರ್ವಜನಿಕರು ಹೈಕೋರ್ಟ್ ಮೆಟ್ಟಿಲೇರಿದ್ರು. ರಾಜ್ಯ ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿದ್ದರು. ಐತಿಹಾಸಿಕ ಸ್ಮಾರಕವಾಗಿದ್ದರಿಂದ ಅಕ್ರಮವಾಗಿ ವಾಸವಾಗಿದ್ದವರ ತೆರವುಗೊಳಿಸುವಂತೆ ಕೋರ್ಟ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

Published On - 11:08 am, Sun, 2 February 20