ಬೆಳಗಾವಿ ಜೈಲಿಂದ ರಿಲೀಸ್ ಆಗ್ತಿದ್ದಂತೆ ಕಿಡ್ನ್ಯಾಪ್: ಮಂಗಳೂರಲ್ಲಿ ರೌಡಿಶೀಟರ್ ಮರ್ಡರ್!
ಮಂಗಳೂರು: ಎರಡು ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ರೌಡಿಶೀಟರ್ ಹಾಗೂ ಕುಖ್ಯಾತ ದರೋಡೆಕೋರ ತಸ್ಲಿಮ್ನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿ ಇನ್ನೋವಾ ಕಾರಿನಲ್ಲಿ ರೌಡಿಶೀಟರ್ ತಸ್ಲಿಮ್ ಶವ ಪತ್ತೆಯಾಗಿದ್ದು, ಈ ಕೊಲೆ ಪ್ರಕರಣ ಮಂಗಳೂರನ್ನು ಬೆಚ್ಚಿಬೀಳಿಸಿದೆ. ಕೇರಳ ಮೂಲದ ಮುತ್ತಾಸಿಮ್ ಅಲಿಯಾಸ್ ತಸ್ಲಿಮ್ ಭೂಗತ ಪಾತಕಿಗಳ ಜತೆ ನೇರ ಸಂಪರ್ಕ ಹೊಂದಿದ್ದ. ಹಾಗಾಗಿ ತಸ್ಲಿಮ್ನನ್ನು ಇತ್ತೀಚೆಗೆ ಮಂಗಳೂರು ಪೊಲೀಸರು ಬಂಧಿಸಿದ್ದರು. ಬೆಳಗಾವಿ ಜೈಲಿನಲ್ಲಿದ್ದ ತಸ್ಲಿಮ್, 2 […]
ಮಂಗಳೂರು: ಎರಡು ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ರೌಡಿಶೀಟರ್ ಹಾಗೂ ಕುಖ್ಯಾತ ದರೋಡೆಕೋರ ತಸ್ಲಿಮ್ನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿ ಇನ್ನೋವಾ ಕಾರಿನಲ್ಲಿ ರೌಡಿಶೀಟರ್ ತಸ್ಲಿಮ್ ಶವ ಪತ್ತೆಯಾಗಿದ್ದು, ಈ ಕೊಲೆ ಪ್ರಕರಣ ಮಂಗಳೂರನ್ನು ಬೆಚ್ಚಿಬೀಳಿಸಿದೆ.
ಕೇರಳ ಮೂಲದ ಮುತ್ತಾಸಿಮ್ ಅಲಿಯಾಸ್ ತಸ್ಲಿಮ್ ಭೂಗತ ಪಾತಕಿಗಳ ಜತೆ ನೇರ ಸಂಪರ್ಕ ಹೊಂದಿದ್ದ. ಹಾಗಾಗಿ ತಸ್ಲಿಮ್ನನ್ನು ಇತ್ತೀಚೆಗೆ ಮಂಗಳೂರು ಪೊಲೀಸರು ಬಂಧಿಸಿದ್ದರು. ಬೆಳಗಾವಿ ಜೈಲಿನಲ್ಲಿದ್ದ ತಸ್ಲಿಮ್, 2 ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಜೈಲಿನಿಂದ ಹೊರಬಂದ ತಕ್ಷಣ ಬೆಳಗಾವಿಯಿಂದ ತಸ್ಲಿಮ್ನನ್ನ ಅಪಹರಿಸಿದ್ದರು. ತಸ್ಲಿಮ್ನನ್ನು ಅಪಹರಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.