ವರುಣನ ಆರ್ಭಟಕ್ಕೆ ಗೋಡೆ ಗಡಗಡ: ನಡುಗಿದ ಐತಿಹಾಸಿಕ ಸವದತ್ತಿ ಕೋಟೆ

ಬೆಳಗಾವಿ: ಜಿಲ್ಲೆಯಾದ್ಯಂತ ಭಾರಿ ಮಳೆ ಸಂಭವಿಸಿದೆ. ವರುಣನ ಆರ್ಭಟಕ್ಕೆ ಐತಿಹಾಸಿಕ ಸವದತ್ತಿ ಕೋಟೆಯ ಒಂದು ಭಾಗ ಕುಸಿದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪುರಾತನ ನಗರಗಳಲ್ಲಿ ಒಂದು. ಆದರೆ ಮಳೆಯ ಪ್ರಭಾವದಿಂದಾಗಿ ತಮ್ಮ ಧಾರ್ಮಿಕತೆ, ಇತಿಹಾಸ ಸಾರುತ್ತಿದ್ದ ಪುರಾತನ ಕಲೆಗಳಿಗೆ ಹಾನಿಯಾಗುತ್ತಿದೆ. 18ನೇ ಶತಮಾನದಲ್ಲಿ ಜಯಪ್ಪ ದೇಸಾಯಿಯಿಂದ ನಿರ್ಮಿಸಲ್ಪಟ್ಟ ಸವದತ್ತಿ ಪಟ್ಟಣದಲ್ಲಿರುವ ಕೋಟೆಯ ಒಂದು ಭಾಗದ ಗೋಡೆ ಕುಸಿದಿದೆ. ಈ ಘಟನೆಯಿಂದಾಗಿ ಕೋಟೆ ಅಕ್ಕಪಕ್ಕದ ಜನರಲ್ಲಿ ಆತಂಕ ಉಂಟಾಗಿದೆ. ಗೋಡೆ ಕುಸಿಯುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ‌ಯಾಗಿದೆ. ಸದ್ಯ […]

ವರುಣನ ಆರ್ಭಟಕ್ಕೆ ಗೋಡೆ ಗಡಗಡ: ನಡುಗಿದ ಐತಿಹಾಸಿಕ ಸವದತ್ತಿ ಕೋಟೆ
Edited By:

Updated on: Oct 12, 2020 | 1:22 PM

ಬೆಳಗಾವಿ: ಜಿಲ್ಲೆಯಾದ್ಯಂತ ಭಾರಿ ಮಳೆ ಸಂಭವಿಸಿದೆ. ವರುಣನ ಆರ್ಭಟಕ್ಕೆ ಐತಿಹಾಸಿಕ ಸವದತ್ತಿ ಕೋಟೆಯ ಒಂದು ಭಾಗ ಕುಸಿದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪುರಾತನ ನಗರಗಳಲ್ಲಿ ಒಂದು. ಆದರೆ ಮಳೆಯ ಪ್ರಭಾವದಿಂದಾಗಿ ತಮ್ಮ ಧಾರ್ಮಿಕತೆ, ಇತಿಹಾಸ ಸಾರುತ್ತಿದ್ದ ಪುರಾತನ ಕಲೆಗಳಿಗೆ ಹಾನಿಯಾಗುತ್ತಿದೆ.

18ನೇ ಶತಮಾನದಲ್ಲಿ ಜಯಪ್ಪ ದೇಸಾಯಿಯಿಂದ ನಿರ್ಮಿಸಲ್ಪಟ್ಟ ಸವದತ್ತಿ ಪಟ್ಟಣದಲ್ಲಿರುವ ಕೋಟೆಯ ಒಂದು ಭಾಗದ ಗೋಡೆ ಕುಸಿದಿದೆ. ಈ ಘಟನೆಯಿಂದಾಗಿ ಕೋಟೆ ಅಕ್ಕಪಕ್ಕದ ಜನರಲ್ಲಿ ಆತಂಕ ಉಂಟಾಗಿದೆ.

ಗೋಡೆ ಕುಸಿಯುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ‌ಯಾಗಿದೆ. ಸದ್ಯ ಘಟನೆ ಸಂದರ್ಭ ಪ್ರವಾಸಿಗರಾಗಲಿ ನೆರೆಯವರಾಗಲಿ ಹೆಚ್ಚಾಗಿ ಇರದ ಕಾರಣ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.

ಇದನ್ನೂ ಓದಿ: ಧುಮ್ಮಿಕ್ಕಿ ಹರಿಯುತ್ತಿದೆ ವರವಿ ಕೊಳ್ಳ.. ಅಪಾಯವಿದ್ರೂ ಪ್ರವಾಸಿಗರು ಫುಲ್ ಎಂಜಾಯ್

ಮಳೆ ಅವಾಂತರಕ್ಕೆ ವ್ಯಕ್ತಿ ಬಲಿ.. ಧರೆಗುರುಳಿದವು ಮನೆ, ಮರಗಳು