House Shifting ವೇಳೆ ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ.. ಬೆಳ್ಳಿ ಸಾಮಾನು ಕದ್ದೊಯ್ದ ಖದೀಮರು

| Updated By: ಸಾಧು ಶ್ರೀನಾಥ್​

Updated on: Dec 17, 2020 | 2:55 PM

ಹೊಸ ಮನೆಗೆ ಕೆಲ ಸಾಮಾನುಗಳನ್ನು ಸಾಗಿಸಿ ಅಪರ ಜಿಲ್ಲಾಧಿಕಾರಿಯಾದ ವೀರಮಲ್ಲಪ್ಪ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದರು. ಹೊಸ ಮನೆಗೆ ತೆರಳದೇ ನಿನ್ನೆ ಹಳೇ ಮನೆಯಲ್ಲಿ ವಾಸವಿದ್ದನ್ನು ಕಂಡ ಖದೀಮರು ದರೋಡೆ ಮಾಡಿದ್ದಾರೆ.

House Shifting ವೇಳೆ ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ.. ಬೆಳ್ಳಿ ಸಾಮಾನು ಕದ್ದೊಯ್ದ ಖದೀಮರು
ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ
Follow us on

ದಾವಣಗೆರೆ: ನಗರದ ಎಸ್ ಎಸ್ ಲೇಔಟ್ 6 ನೇ ಕ್ರಾಸ್ ಇಂಡೋರ್ ಸ್ಟೇಡಿಯಂ ಬಳಿ ಇರುವ ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ ನಡೆದಿದ್ದು, ಸ್ಥಳಕ್ಕೆ ವಿದ್ಯಾನಗರ ಪಿಎಸ್ಐ ರೂಪಾ ತೆಂಬದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಸ ಮನೆಗೆ ಕೆಲ ಸಾಮಾನುಗಳನ್ನು ಸಾಗಿಸಿ ಅಪರ ಜಿಲ್ಲಾಧಿಕಾರಿಯಾದ ವೀರಮಲ್ಲಪ್ಪ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದರು. ಹೊಸ ಮನೆಗೆ ತೆರಳದೇ.. ನಿನ್ನೆ ಹಳೇ ಮನೆಯಲ್ಲಿ ವಾಸವಿದ್ದನ್ನು ಕಂಡ ಖದೀಮರು ಪೂಜೆಗೆ ಬಳಸಿದ್ದ ಬೆಳ್ಳಿ ದೀಪ, ಇನ್ನಿತರೆ ಬೆಳ್ಳಿ ಸಾಮಾನು ಸೇರಿದಂತೆ ಒಟ್ಟು ಒಂದುವರೆ ಕೆಜಿ ಬೆಳ್ಳಿಯನ್ನು ಮನೆಯ ಹಿಂಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ.

ಮನೆ ಬಾಗಿಲು ಒಡೆದ ಖತರ್ನಾಕ್ ಕಳ್ಳರು

ನಕಲಿ ಗನ್ ತೋರಿಸಿ ಭಾರಿ ದರೋಡೆ.. ಖತರ್ನಾಕ್​ ಜೋಡಿ ಕೊನೆಗೂ ಅಂದರ್​