ಆರೋಗ್ಯ ಚೆನ್ನಾಗಿರಬೇಕಂದ್ರೆ ಸ್ಮಾರ್ಟ್ಫೋನ್ ಬಳಕೆ ಬಿಟ್ಟುಬಿಡಿ; ಆದರೆ ಹೇಗೆ ಬಿಡೋದು?
ಇಷ್ಟು ಸೂತ್ರಗಳನ್ನು ಅಳವಡಿಡಿಕೊಂಡರೆ ಸಾಕು ಏನೋ ಯಾವಾಗಲೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರ್ತೀಯಾ? ಮೊಬೈಲ್ ಇಟ್ಟು ಒಂದು ನಿಮಿಷವಾದರೂ ಇರೋಕೆ ಆಗಲ್ವಾ ಎಂಬ ಅಮ್ಮನ ಬೈಗುಳದಿಂದ ಪಾರಾಗಬಹುದು!
ಇದು ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಗಳ ಯುಗ. ಇಂದು ಮಾರುಕಟ್ಟೆಗೆ ಬಂದ ಗ್ಯಾಡ್ಜೆಟ್ ನಾಳೆ ಇರಲ್ಲ. ಹೊಸ ಫೀಚರ್ಗಳ ಇನ್ನಷ್ಟು ಆಧುನಿಕ ಗ್ಯಾಡ್ಜೆಟ್ ನಿಮಗೆ ಸ್ವಾಗತ ಕೋರುತ್ತೆ. ಇಷ್ಟು ಫಾಸ್ಟ್ ಯುಗದಲ್ಲಿ ಸ್ಮಾರ್ಟ್ಫೋನ್ಗಳೆಂಬ ಸಂಗಾತಿಗಳನ್ನು ನಮ್ಮ ತೆಕ್ಕೆಯಲ್ಲಿ ಮುದ್ದಾಡುತ್ತಲೇ ಇರುತ್ತೇವೆ ನಾವು. ನಮ್ಮೆಲ್ಲರಿಗೂ ಆಪ್ತ ಗೆಳೆಯ ಗೆಳತಿಯ ಸ್ಥಾನವನ್ನು ಸ್ಮಾರ್ಟ್ಫೋನ್ಗಳು ಅತಿಕ್ರಮಿಸಿವೆ. ನಮ್ಮ ಎಲ್ಲ ಗುಟ್ಟುಗಳನ್ನು ಅರಿತಿವೆ. ಹಾಗೆಯೇ ಇದೇ ಸ್ಮಾರ್ಟ್ಫೋನ್ಗಳು ನಮ್ಮ ಪಾಲಿನ ಶತ್ರುವೂ ಆಗಿವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರದ ಸತ್ಯ. ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ..
ಏನೋ ಯಾವಾಗಲೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರ್ತೀಯಾ? ಮೊಬೈಲ್ ಇಟ್ಟು ಒಂದು ನಿಮಿಷವಾದರೂ ಇರೋಕೆ ಆಗಲ್ವಾ ಎಂದು ಎಲ್ಲರ ಅಮ್ಮಂದಿರೂ ಬೈಯುತ್ತಾರೆ. ಅವರ ಬೈಗುಳದ ಹಿಂದೆ ಇರುವ ಆರೋಗ್ಯ ಕಾಳಜಿ ನಮಗೆ ನೆನಪಾಗುವುದಿಲ್ಲ. ಮುಂದೊಂದು ದಿನ ಕಣ್ಣಿನ ಸಮಸ್ಯೆ ಅಥವಾ ಇನ್ನೊಂದು ಯಾವುದೋ ಸಮಸ್ಯೆ ತಲೆದೋರಿದಾಗಲೇ ನೆನಪಾಗುತ್ತದೆ.
ಸ್ಮಾರ್ಟ್ಫೋನ್ಗಳು ಅಡಿಕ್ಷನ್ ಎಂಬುದು ನಮ್ಮ ಮೇಲೆ ನೇರವಾಗಿ ಆಕ್ರಮಣ ಮಾಡುವ ಶತ್ರು. ಸ್ಮಾರ್ಟ್ಫೋನ್ ಅಡಿಕ್ಷನ್ನಿಂದ ಹೊರಬರುವುದು ಹೇಗೆ ಎಂದು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ,
ಸ್ಮಾರ್ಟ್ಫೋನ್ ಅಡಿಕ್ಷನ್ನಿಂದ ಹೊರಬರಲು ಮೊದಲು ನೀವು ಗಟ್ಟಿ ನಿರ್ಧಾರ ಮಾಡಬೇಕು. ಕೆಲವು ಸಮಯದಲ್ಲಾದರೂ ಮೊಬೈಲ್ ಅಥವಾ ಸ್ಮಾರ್ಟ್ಫೋನ್ ಮುಟ್ಟುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಬೇಕು. ಉದಾಹರಣೆಗೆ ಊಟ ಮಾಡುವಾಗ ಸುಖಾಸುಮ್ಮನೆ ಸ್ಮಾರ್ಟ್ಫೋನ್ ಬಳಕೆ ಮಾಡಬಾರದು.
ಕುಟುಂಬದ ಜತೆ ಕಳೆಯುವ ಆಪ್ತ ಕ್ಷಣಗಳಲ್ಲಿ ಯಾವುದೇ ಕಾರಣಕ್ಕೂ ಸ್ಮಾರ್ಟ್ಫೋನ್ ಬಳಕೆ ಮಾಡಬಾರದು.
ನೀವು ಯಾವುದೇ ಉಪಯೋಗವಿಲ್ಲದಿದ್ದರು ಅತ್ಯಂತ ಹೆಚ್ಚು ಬಳಸುವ ಆ್ಯಪ್ ಯಾವುದು ಪತ್ತೆಹಚ್ಚಿ. ಅದನ್ನು ಮೊದಲು ಅನ್ಇನ್ಸ್ಟಾಲ್ ಮಾಡಿ. ಇದರಿಂದ ನಿಮ್ಮ ಸಮಯ ಉಳಿಯುತ್ತದೆ. ಇದು ಸುಳ್ಳು ಎನಿಸಿದರೆ ಒಮ್ಮೆ ಪ್ರಯೋಗಕ್ಕಾದರೂ ಮಾಡಿನೋಡಿ. ನಂತರ ನಿಮಗೇ ಅನಿಸುತ್ತದೆ ಅರೇ! ನನ್ನ ಇಷ್ಟೊಂದು ಸಮಯವನ್ನು ಈ ಆ್ಯಪ್ಗಳು ಗುಳುಂ ಮಾಡುತ್ತಿದ್ದವೇ?! ಎಂದು.
ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ. ಅವಶ್ಯವಿದ್ದರಷ್ಟೇ ಸಾಮಾಜಿಕ ತಾಣಗಳನ್ನು ಬಳಸಿ. ಬೇಸರವಾಗುತ್ತಿದೆ ಅಥವಾ ಬೋರ್ ಬರುತ್ತಿದೆ ಎಂದು ಸೋಷಿಯಲ್ ಮೀಡಿಯಾ ಬಳಕೆ ಬೇಡ.
ರಾತ್ರಿ ಮಲಗುವ ಒಂದು ಗಂಟೆಗೂ ಮುನ್ನ ಸ್ಮಾರ್ಟ್ಫೋನ್ ಬಳಕೆ ನಿಲ್ಲಿಸಿ. ಇದನ್ನು ಒಮ್ಮೆ ಅಭ್ಯಾಸ ಮಾಡಿಕೊಂಡರೆ ಸಾಕು.
ಇಷ್ಟು ಸೂತ್ರಗಳನ್ನು ಅಳವಡಿಡಿಕೊಂಡರೆ ಸಾಕು ಏನೋ ಯಾವಾಗಲೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರ್ತೀಯಾ? ಮೊಬೈಲ್ ಇಟ್ಟು ಒಂದು ನಿಮಿಷವಾದರೂ ಇರೋಕೆ ಆಗಲ್ವಾ ಎಂಬ ಅಮ್ಮನ ಬೈಗುಳದಿಂದ ಪಾರಾಗಬಹುದು!
ಇದನ್ನೂ ಓದಿ: ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?
ನಿಮಗೆ ಗೊತ್ತಾ ಮಧುಮೇಹದ ಅಪಾಯ ಈ ರಕ್ತದ ಗುಂಪಿನವರಿಗೇ ಜಾಸ್ತಿಯಂತೆ? ನಿಮ್ಮ ಬ್ಲಡ್ ಗ್ರೂಪ್ ಯಾವುದು ನೋಡಿಕೊಳ್ಳಿ !