ಪ್ರಲ್ಹಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಪುಟಾಣಿ ರೈಲು ಹಳಿ ತಪ್ಪಿದ್ದು!

ಬೆಂಗಳೂರಿನ ನಮ್ಮ ಮೆಟ್ರೊ ಟ್ರೇನಂತೆ ಕಾಣುವ ಲೊಕೊಮೊಟಿವ್ ನಲ್ಲಿ ಪ್ರಯಾಣ ಅವರು ಎಂಜಾಯ್ ಮಾಡುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ. ಅವರು ಖುಷಿಯಿಂದ ಕೆಮೆರಾಗಳತ್ತ ಕೈ ಬೀಸುವುದು, ಕೂತ ಸ್ಥಳದಿಂದ ಎದ್ದು ಬಾಗಿಲ ಬಳಿ ನಿಂತು ಕೈಗಳನನ್ನು ವೇವ್ ಮಾಡುವುದನ್ನು ಸಹ ನೀವು ನೋಡಬಹುದು.

TV9kannada Web Team

| Edited By: Arun Belly

Apr 30, 2022 | 5:37 PM

Hubballi:  ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಶಾಸಕ ಜಗದೀಶ ಶೆಟ್ಟರ್ (Jagadish Shettar) ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಿದೆ ಅಂತ ಅನಿಸುತ್ತಿದೆ ಮಾರಾಯ್ರೇ. ಅಪರೂಪಕ್ಕೊಮ್ಮೆ ಅವರು ಕೆಮೆರಾ ಕಣ್ಣಿಗೆ ಬೀಳುತ್ತಾರೆ. ಶನಿವಾರ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ (Hubballi-Dharwad Smart City) ಕಾಮಗಾರಿಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಉದ್ಘಾಟಿಸಿದಾಗ ಶೆಟ್ಟರ್ ಅವರೊಂದಿಗಿದ್ದರು. ಆಮೇಲೆ ನಗರದ ಗ್ಲಾಸ್ ಹೌಸ್ನಲ್ಲಿ ಪುಟಾಣಿ ರೈಲನ್ನು ಮಾಜಿ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಿದರು. ಅದನ್ನು ಉದ್ಘಾಟಿಸಿದ ಬಳಿಕ ಗಣ್ಯರಿಬ್ಬರು ಅಧಿಕಾರಿಗಳೊಂದಿಗೆ ಪುಟಾಣಿ ರೈಲಿನಲ್ಲಿ ಸವಾರಿ ಕೂಡ ಮಾಡಿದರು.

ಆದರೆ ಸದರಿ ರೈಲನ್ನು ಅವಸರದಲ್ಲಿ ಲೋಕಾರ್ಪಣೆ ಆಣಿ ಮಾಡಲಾಯಿತೇನೋ ಅಂತ ಭಾಸವಾಗುತ್ತಿದೆ ಮಾರಾಯ್ರೇ. ರೈಲಿನ ಸರಾಗ ಓಡಾಟ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ ಬಗ್ಗೆ ಸಂಶಯ ಉಂಟಾಗಿದೆ. ಆಗಲೇ ಹೇಳಿದ ಹಾಗೆ ರೈಲಿನ ಲೋಕಾರ್ಪಣೆ ಬಳಿಕ ಜೋಶಿ ಮತ್ತು ಶೆಟ್ಟರ್ ಅದರಲ್ಲಿ ಸವಾರಿ ಹೊರಡುತ್ತಾರೆ.

ಬೆಂಗಳೂರಿನ ನಮ್ಮ ಮೆಟ್ರೊ ಟ್ರೇನಂತೆ ಕಾಣುವ ಲೊಕೊಮೊಟಿವ್ ನಲ್ಲಿ ಪ್ರಯಾಣ ಅವರು ಎಂಜಾಯ್ ಮಾಡುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ. ಅವರು ಖುಷಿಯಿಂದ ಕೆಮೆರಾಗಳತ್ತ ಕೈ ಬೀಸುವುದು, ಕೂತ ಸ್ಥಳದಿಂದ ಎದ್ದು ಬಾಗಿಲ ಬಳಿ ನಿಂತು ಕೈಗಳನನ್ನು ವೇವ್ ಮಾಡುವುದನ್ನು ಸಹ ನೀವು ನೋಡಬಹುದು.

ಆದರೆ ಸ್ವಲ್ಪ ದೂರ ಕ್ರಮಿಸಿದ ಬಳಿಕ ಈ ಪುಟ್ಟ ರೈಲು ಹಳಿ ತಪ್ಪುತ್ತದೆ! ಯಾರಿಗೂ ಅಪಾಯವಾಗಿಲ್ಲ ಅನ್ನೋದು ಬೇರೆ ವಿಷಯ. ಆದರೆ ಮಕ್ಕಳು ಪ್ರಯಾಣಿಸುವಾಗ ಇಂಥ ಯಡವಟ್ಟುಗಳಾದರೆ ಹೇಗೆ? ಜೋಶಿ ಮತ್ತು ಶೆಟ್ಟರ್ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿರಬಹುದು.

ಇದನ್ನೂ ಓದಿ:   Pralhad Joshi: ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತೆ ಬದಲಾವಣೆ?-ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?

Follow us on

Click on your DTH Provider to Add TV9 Kannada