ಡ್ಯೂಟಿ ವೇಳೆ ಕ್ಯಾಂಡಿ ಕ್ರಶ್: ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿತನ

|

Updated on: Jun 26, 2020 | 8:22 AM

ಹುಬ್ಬಳ್ಳಿ: ನಮ್ಮಲ್ಲಿ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಮಾತಿದೆ. ಅಂತೆಯೇ, ಜಿಲ್ಲೆಯ ಕಿಮ್ಸ್​ ಆಸ್ಪತ್ರೆಯಲ್ಲಿ ರೋಗಿಗಳು ನೋವಿನಿಂದ ಪರದಾಡುತ್ತಿದ್ರೂ ಸಿಬ್ಬಂದಿ ಮಾತ್ರ ಹಾಯಾಗಿ ಕುಳಿತು ಕ್ಯಾಂಡಿ ಕ್ರಶ್​ ಆಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಕಿಮ್ಸ್​ ಆಸ್ಪತ್ರೆಯ ಸಿಬ್ಬಂದಿ ರೋಗಿಗಳ ವಿಚಾರದಲ್ಲಿ ಪದೇ ಪದೇ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಕೇಳಿ ಬರುತ್ತಲೇ ಇದೆ. ಇದೀಗ ಚಿಕಿತ್ಸೆಗೆ ಬರುವ ರೋಗಿಗಳಿಗೆ ನೋಂದಣಿ ಚೀಟಿ ನೀಡೋದನ್ನ ಬಿಟ್ಟು ಎಮರ್ಜೆನ್ಸಿ ವಾರ್ಡ್​ನ ನೋಂದಣಿ ಕೊಠಡಿಯ ಸಿಬ್ಬಂದಿ ತಮ್ಮ ಕಂಪ್ಯೂಟರ್​ನಲ್ಲಿ ಗೇಮ್​ […]

ಡ್ಯೂಟಿ ವೇಳೆ ಕ್ಯಾಂಡಿ ಕ್ರಶ್: ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿತನ
Follow us on

ಹುಬ್ಬಳ್ಳಿ: ನಮ್ಮಲ್ಲಿ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಮಾತಿದೆ. ಅಂತೆಯೇ, ಜಿಲ್ಲೆಯ ಕಿಮ್ಸ್​ ಆಸ್ಪತ್ರೆಯಲ್ಲಿ ರೋಗಿಗಳು ನೋವಿನಿಂದ ಪರದಾಡುತ್ತಿದ್ರೂ ಸಿಬ್ಬಂದಿ ಮಾತ್ರ ಹಾಯಾಗಿ ಕುಳಿತು ಕ್ಯಾಂಡಿ ಕ್ರಶ್​ ಆಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಕಿಮ್ಸ್​ ಆಸ್ಪತ್ರೆಯ ಸಿಬ್ಬಂದಿ ರೋಗಿಗಳ ವಿಚಾರದಲ್ಲಿ ಪದೇ ಪದೇ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಕೇಳಿ ಬರುತ್ತಲೇ ಇದೆ. ಇದೀಗ ಚಿಕಿತ್ಸೆಗೆ ಬರುವ ರೋಗಿಗಳಿಗೆ ನೋಂದಣಿ ಚೀಟಿ ನೀಡೋದನ್ನ ಬಿಟ್ಟು ಎಮರ್ಜೆನ್ಸಿ ವಾರ್ಡ್​ನ ನೋಂದಣಿ ಕೊಠಡಿಯ ಸಿಬ್ಬಂದಿ ತಮ್ಮ ಕಂಪ್ಯೂಟರ್​ನಲ್ಲಿ ಗೇಮ್​ ಆಡುತ್ತಾ ಕೂತಿರುವ ವಿಡಿಯೋ ಬೆಳಕಿಗೆ ಬಂದಿದೆ. ಹೀಗಾಗಿ ರೋಗಿಗಳು ಮತ್ತು ಅವರ ಸಂಬಂಧಿಕರು ಗಂಟೆಗಟ್ಟಲೇ ಕಾಯುವಂಥ ಸ್ಥಿತಿ ಎದುರಾಗಿದೆ. ಚೀಟಿ ಇಲ್ಲದೆ ಚಿಕಿತ್ಸೆ ನೀಡುವುದಿಲ್ಲ ಎಂಬುದು ಆಸ್ಪತ್ರೆಯ ನಿಯಮ. ಹಾಗಾಗಿ ಚೀಟಿ ಪಡೆಯಲು ಸಿಬ್ಬಂದಿ ​ ಗೇಮ್​ ಮುಗಿಸೋವರೆಗೂ ಕಾಯಲೇಬೇಕೆಂದು ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Published On - 8:20 am, Fri, 26 June 20