ಬಾಗಲಕೋಟೆ: ಪುಂಡಿಗಿಡದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ ಎನ್ನುವ ಸುದ್ದಿ ಕೇಳಿ ಹತ್ತಾರು ಊರುಗಳಿಂದ ಜನರು ತಂಡ ತಂಡವಾಗಿ ಬರುತ್ತಿರುವ ಘಟನೆ ಬಾದಾಮಿ ತಾಲೂಕಿನಲ್ಲಿ ನಡೆದಿದೆ.
ಅಸಲಿಗೆ ಆಗಿರುವುದೆನೆಂದರೆ.. ಪುಂಡಿಗಿಡ ಕತ್ತರಿಸಲು ಹೋದಾಗ ಕುಡಗೋಲು ಕಸಿದು ಬೀಸಾಕಿದ ಅನುಭವವಾಯಿತಂತೆ. ತದ ನಂತರ ತಾನೂ ಪುಂಡಿಗಿಡದಲ್ಲಿ ನೆಲೆಸಿದ್ದೇನೆ ಎಂದು ಸ್ವತಃ ದುರ್ಗಾದೇವಿ, ಜೋಗತಿ ಮಹಿಳೆಯ ಮೇಲೆ ಬಂದು ಹೇಳಿದ್ದಾಳಂತೆ ಎಂಬ ವದಂತಿ ಸುತ್ತಮುತ್ತಲಿನ ಗ್ರಾಮಗಳಿಗೆ ಹಬ್ಬಿದೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ದುರ್ಗಾದೇವಿ ದರ್ಶನಕ್ಕೆಂದು ಹತ್ತಾರು ಊರುಗಳ ನೂರಾರು ಜನರು ಪುಂಡಿಗಿಡದ ಮಹಾತ್ಮೆ ನೋಡಲು ಬರ್ತಿದ್ದಾರೆ.