ಮೇಲುಕೋಟೆಯಲ್ಲಿ ಮಿತಿಮೀರಿದೆ ಮಂಗಗಳ ಕಾಟ..
ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟ ಹತ್ತುವುದೆ ಭಕ್ತರಿಗೆ ಕಷ್ಟ. ಅಂತಹುದರಲ್ಲಿ ಮಂಗಗಳ ಕಾಟ ಬೇರೆ ಶುರುವಾಗಿದೆ. ಭಕ್ತರು ಕೈಯಲ್ಲಿ ಹಿಡಿದು ಬರುವ ಪದಾರ್ಥಗಳ ಮೇಲೆ ಕಣ್ಣಿಟ್ಟಿರುವ ಮಂಗಗಳು ಕ್ಷಣಾರ್ಧದಲ್ಲಿ ವಸ್ತುಗಳನ್ನು ಕೈಯಿಂದು ಕಿತ್ತುಕೊಂಡು ದೂರ ಹೋಗಿ ಬಿಡುತ್ತವೆ.
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಹಾಗೂ ಯೋಗನರಸಿಂಹಸ್ವಾಮಿ ಬೆಟ್ಟ ಇದೆ. ಈ ಎರಡೂ ದೇವಾಲಯಗಳಿಗೆ ಪ್ರತಿ ನಿತ್ಯ ಅಪಾರ ಪ್ರಮಾಣದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತಮ್ಮ ತಮ್ಮ ಕಷ್ಟಗಳನ್ನ ನಿವಾರಿಸು ದೇವರೆ ಎಂದು ಬೇಡಿಕೊಳ್ಳುತ್ತಾರೆ. ಹೀಗೆ ಕಷ್ಟಗಳನ್ನು ನಿವಾರಿಸು ಎಂದು ಹೇಳಿಕೊಂಡು ಬರುವ ಭಕ್ತರಿಗೆ ಇತ್ತೀಚಿನ ದಿನಗಳಲ್ಲಿ ಮಂಗಗಳ ಕಾಟ ಜೋರಾಗಿದೆ.
ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟ ಹತ್ತುವುದೇ ಭಕ್ತರಿಗೆ ಕಷ್ಟ. ಅಂತಹುದರಲ್ಲಿ ಮಂಗಗಳ ಕಾಟ ಬೇರೆ ಶುರುವಾಗಿದೆ. ಭಕ್ತರು ಕೈಯಲ್ಲಿ ಹಿಡಿದು ಬರುವ ಪದಾರ್ಥಗಳ ಮೇಲೆ ಕಣ್ಣಿಟ್ಟಿರುವ ಮಂಗಗಳು ಕ್ಷಣಾರ್ಧದಲ್ಲಿ ವಸ್ತುಗಳನ್ನು ಕೈಯಿಂದು ಕಿತ್ತುಕೊಂಡು ದೂರ ಹೋಗಿ ಬಿಡುತ್ತವೆ. ಮೇಲುಕೋಟೆಯಲ್ಲಿ ಹೆಚ್ಚಿರುವ ಮಂಗಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ಭಕ್ತರು ಮನವಿ ಮಾಡುತ್ತಿದ್ದಾರೆ.
ಇನ್ನು ಬೇರೆ ಕಡೆ ಮಂಗಗಳ ಹಾವಳಿ ಹೆಚ್ಚಾದರೆ ಮಂಗಗಳನ್ನು ಹಿಡಿದು ಮೇಲುಕೋಟೆಗೆ ತಂದು ಬಿಡುತ್ತಿದ್ದಾರೆಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರು ಬಾಳೆ ಹಣ್ಣು, ಕುಡಿಯುವ ನೀರಿನ ಬಾಟೆಲ್, ಹೂಗಳು ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದರೂ ಭಕ್ತರ ಮೇಲೆ ಎರಗಿ ಕ್ಷಣಾರ್ಧದಲ್ಲಿ ಕಿತ್ತುಕೊಳ್ಳುತ್ತಿವೆ. ಅಲ್ಲದೇ ಮಹಿಳೆಯ ಸೀರೆಯನ್ನು ಎಳೆಯುವ ಮಟ್ಟಕ್ಕೆ ಮಂಗಗಳ ಹಾವಳಿ ಮಿತಿ ಮೀರಿದೆ.