ನನ್ನ ಜೀವಕ್ಕೆ ಅಪಾಯವಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ: ವಾಟಾಳ್ ನಾಗರಾಜ್​

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ವಿಜಯಪುರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದೆವು. ಮಾರ್ಗಮಧ್ಯೆ ತಡೆಯಲು ಇದೇನು ಚೀನಾ ಬಾರ್ಡರ್ ಅಲ್ಲ. ನಾನು ಸಾಕಷ್ಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಅವರ್ಯಾರೂ ಯಡಿಯೂರಪ್ಪನವರಷ್ಟು ದುರಹಂಕಾರಿಗಳಾಗಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ನನ್ನ ಜೀವಕ್ಕೆ ಅಪಾಯವಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ: ವಾಟಾಳ್ ನಾಗರಾಜ್​
ವಾಟಾಳ್​ ನಾಗರಾಜ್​
Updated By: Digi Tech Desk

Updated on: Feb 09, 2021 | 9:13 AM

ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನನ್ನು ವೈಯಕ್ತಿವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಜೀವಕ್ಕೆ ಏನಾದರೂ ಅಪಾಯವಾದರೆ ಅವರೇ ಕಾರಣ ಎಂದು ವಾಟಾಳ್​ ನಾಗರಾಜ್​ ಹೇಳಿದ್ದಾರೆ. ಪ್ರತಿಭಟನೆ ನಡೆಸಲು ವಿಜಯಪುರಕ್ಕೆ ಆಗಮಿಸುತ್ತಿರುವ ವಾಟಾಳ್​ ನಾಗರಾಜ್​ರನ್ನು ಪೊಲೀಸರು ಅರ್ಧದಲ್ಲೇ ತಡೆದ ಬಳಿಕ ನಿಡಗುಂದಿಯಲ್ಲಿ ಮಾತನಾಡಿ, ವಿಜಯಪುರಕ್ಕೆ ತೆರಳುತ್ತಿದ್ದ ನಮ್ಮನ್ನು 60 ಕಿಮೀ ದೂರದಲ್ಲಿ ತಡೆಯಲಾಗಿದೆ. ನಮ್ಮನ್ನು ಹೀಗೆ ಮಾರ್ಗಮಧ್ಯೆಯೇ ತಡೆಯುವುದು ಎಷ್ಟು ಸರಿ? 25 ವರ್ಷಗಳಿಂದ ನೀಡುತ್ತಿದ್ದ ಎಸ್ಕಾರ್ಟ್ ಹಿಂಪಡೆಯಲಾಗಿದೆ. ಇದಕ್ಕೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ವಿಜಯಪುರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದೆವು. ಮಾರ್ಗಮಧ್ಯೆ ತಡೆಯಲು ಇದೇನು ಚೀನಾ ಬಾರ್ಡರ್ ಅಲ್ಲ. ನಾನು ಸಾಕಷ್ಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಅವರ್ಯಾರೂ ಯಡಿಯೂರಪ್ಪನವರಷ್ಟು ದುರಹಂಕಾರಿಗಳಾಗಿರಲಿಲ್ಲ. ಆದರೆ ಯಡಿಯೂರಪ್ಪ ದ್ವೇಷ, ಅಸೂಯೆ ಸಾಧಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Published On - 4:57 pm, Tue, 1 December 20