ಅವ್ರು ಏನು ಮಾತಾಡ್ತಾರೋ ಅವ್ರಿಗೂ ಅರ್ಥವಾಗಲ್ಲ, ನಮ್ಗೂ ಅರ್ಥವಾಗಲ್ಲ -H.ವಿಶ್ವನಾಥ್ ಬಗ್ಗೆ SR.ವಿಶ್ವನಾಥ್
ಹೆಚ್.ವಿಶ್ವನಾಥ್ ಯಾವಾಗ ಏನು ಮಾತಾಡುತ್ತಾರೆ ಗೊತ್ತಿಲ್ಲ. ವಿಶ್ವನಾಥ್ ಏನು ಮಾತಾಡುತ್ತಾರೆ ಅವರಿಗೂ ಅರ್ಥ ಆಗಲ್ಲ. ಹಾಗೆಯೇ ಅವರು ಮಾತಾಡೋದು ನಮಗೂ ಅರ್ಥ ಆಗಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರು: ಹೆಚ್.ವಿಶ್ವನಾಥ್ ಯಾವಾಗ ಏನು ಮಾತಾಡುತ್ತಾರೆ ಗೊತ್ತಿಲ್ಲ. ವಿಶ್ವನಾಥ್ ಏನು ಮಾತಾಡುತ್ತಾರೆ ಅವರಿಗೂ ಅರ್ಥ ಆಗಲ್ಲ. ಹಾಗೆಯೇ ಅವರು ಮಾತಾಡೋದು ನಮಗೂ ಅರ್ಥ ಆಗಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಅವರು ನಮ್ಮ ಸರ್ಕಾರ ರಚನೆಗೆ ಸಹಕಾರ ನೀಡಿದ್ದಾರೆ. ಚುನಾವಣೆ ಸ್ಪರ್ಧೆ ಬೇಡ ಎಂದು ವಿಶ್ವನಾಥ್‌ಗೆ ಹೇಳಿದ್ದರು. ಆದರೂ ಹೆಚ್.ವಿಶ್ವನಾಥ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸೋತರೂ ಅವರಿಗೆ ಪರಿಷತ್ ಸದಸ್ಯ ಸ್ಥಾನ ನೀಡಲಾಗಿದೆ. ಕೋರ್ಟ್‌ನಲ್ಲಿ ವ್ಯತ್ಯಾಸ ಆಗಿದೆ, ಯಾರೂ ವ್ಯತ್ಯಾಸ ಮಾಡಿಲ್ಲ. ಮಂತ್ರಿ ಮಾಡುವ ಪಟ್ಟಿ ಕಳಿಸಿಲ್ಲ-ಎಂದು ಎಸ್.ಆರ್.ವಿಶ್ವನಾಥ್ ಹೇಳಿದರು.
ಹೆಚ್.ವಿಶ್ವನಾಥ್‌ಗೆ ಯಾವ ಮೂಲದಿಂದ ಗೊತ್ತಾಗಿದೆ. ಸಿಎಂ ಯಾವುದೇ ಪಟ್ಟಿ ದೆಹಲಿಗೆ ಕಳಿಸಿಲ್ಲ, ಚರ್ಚಿಸಿರಬಹುದು. ಎಂಎಲ್ಸಿ ಹೆಚ್.ವಿಶ್ವನಾಥ್ ತಲೆನೋವು ಅಂತಾ ಅಲ್ಲ. ಅವರಿಗೆ ಅನಿಸಿದ್ದನ್ನು ಅವರು ನೇರವಾಗಿ ಮಾತಾಡುತ್ತಾರೆ. ಯಾವ ಪಕ್ಷದಲ್ಲಿ ಇದ್ದರೂ ವಿಶ್ವನಾಥ್ ಅದೇ ಮಾಡಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
ನಾವು ವಿಶ್ವನಾಥ್ ಅವರಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಪಕ್ಷದ ವೇದಿಕೆಯಲ್ಲಿ ಮಾತನಾಡಲು ಸೂಚನೆ ನೀಡಿದ್ದೆವು. ಯೋಗೇಶ್ವರ್‌ಗೆ ಸಚಿವ ಸ್ಥಾನ ಸಿಎಂ ತೀರ್ಮಾನಿಸುತ್ತಾರೆ ಎಂದು ಎಸ್.ಆರ್.ವಿಶ್ವನಾಥ್ ಹೇಳಿದರು. ಹುಣಸೂರಿನಲ್ಲಿ ನನ್ನ ಸೋಲಿಗೆ ಯೋಗೇಶ್ವರ್, N.R.ಸಂತೋಷ್ ಕಾರಣ -ಹೆಚ್.ವಿಶ್ವನಾಥ್
ಎಚ್.ವಿಶ್ವನಾಥ್ ಸೀಜ್ ಆಗಿರೋ ಎಂಜಿನ್ ಇದ್ದಂತೆ: ಸಾ.ರಾ.ಮಹೇಶ್ ಟೀಕೆ
Published On - 3:41 pm, Tue, 1 December 20



