Assembly Polls: ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ 52 ಸೀಟು ಗೆಲ್ಲುವುದು ಸಾಧ್ಯವಾದರೆ ಅದೇ ಸಾಧನೆ: ಡಾ ಸಿಎನ್ ಅಶ್ವಥ್ ನಾರಾಯಣ, ಸಚಿವರು

Arun Belly

Arun Belly |

Updated on: Jan 23, 2023 | 4:14 PM

ಒಂದೇ ಸೀಟಿನಲ್ಲಿ ಕೂತಿದ್ದರು ಅಂತ ಪತ್ರಕರ್ತರೊಬ್ಬರು ಕೇಳಿದಾಗ ಸಚಿವರು ಒಬ್ಬರ ಮೇಲೊಬ್ಬರು ಕುಳಿತಿದ್ರಾ ಅಂತ ಕೇಳುತ್ತಾರೆ!

ಬೆಳಗಾವಿ:  ನಮ್ಮ ರಾಜಕಾರಣಿಗಳು ಎದುರಾಳಿಗಳನ್ನು ಟೀಕಿಸುವಾಗ, ಖಂಡಿಸುವಾಗ ಕೆಲವು ಸಲ ಹಗುರವಾಗಿ ಮಾತಾಡಿಬಿಡುತ್ತಾರೆ. ಈ ಮಾತು ಎಲ್ಲ ಪಕ್ಷಗಳ ನಾಯಕರಿಗೆ ಅನ್ವಯಿಸುತ್ತದೆ. ಬೆಳಗಾವಿಯಲ್ಲಿ ಇಂದು ಮಾಧ್ಯಮದವರೊಡನೆ ಮಾತಾಡುವಾಗ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಅಂಥ ಪ್ರವೃತ್ತಿಯನ್ನು ಪ್ರದರ್ಶಿಸಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಒಂದೇ ಸೀಟಿನಲ್ಲಿ ಕೂತಿದ್ದರು ಅಂತ ಪತ್ರಕರ್ತರೊಬ್ಬರು ಕೇಳಿದಾಗ ಸಚಿವರು ಒಬ್ಬರ ಮೇಲೊಬ್ಬರು ಕುಳಿತಿದ್ರಾ ಅಂತ ಕೇಳುತ್ತಾರೆ! ನಂತರ, ತನ್ನ ಮಾತಿಗೆ ಯಾರೂ ನಗಲಿಲ್ಲ ಅಂತ ಗೊತ್ತಾದ ಕೂಡಲೇ, ಅಕ್ಕಪಕ್ಕ ಕುಳಿತಿದ್ರಾ ಅಂತ ಹೇಳಿ ಪೆಚ್ಚುನಗೆ ಬೀರುತ್ತಾರೆ. ಮುಂದುವರಿದು ಮಾತಾಡುವ ಅವರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 52 ಸೀಟು ಗೆದ್ದರೆ ದೊಡ್ಡದು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada