ಅದು ಪ್ರತಿಷ್ಠಿತ ವಿದ್ಯಾಸಂಸ್ಥೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿರುವ ನಮ್ಮ ದೇಶದ ಹೆಮ್ಮೆಯ ಪ್ರತೀಕ. ಆದರೆ ಆ ಸಂಸ್ಥೆಯ ನೆಮ್ಮದಿ ಹಾರಿಹೋಗಿತ್ತು. ಒಂದೇ ದಿನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಒಂದೇ ದಿನ ಇಬ್ಬರು ವಿದ್ಯಾರ್ಥಿಗಳ ಸಾವು
ಹೌದು ಐಐಎಸ್ಸಿ ಕ್ಯಾಂಪಸ್ನಲ್ಲಿ ಇಬ್ಬರು ವಿದ್ಯಾರ್ಥಿಗಳು ಒಂದೇ ದಿನ ಮೃತಪಟ್ಟಿದ್ದಾರೆ. ನ್ಯಾನೋ ವಿಜ್ಞಾನ ಹಾಗೂ ಇಂಜಿನಿಯರಿಂಗ್ನಲ್ಲಿ ಪಿಹೆಚ್ಡಿ ಮಾಡ್ತ್ತಿದ್ದ ರಣಧೀರ ಕುಮಾರ್ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಎಂ.ಟೆಕ್ ವಿದ್ಯಾರ್ಥಿ ರಾಹುಲ್ ಪ್ರತಾಪ್ ಮೈದಾನದಲ್ಲಿ ಫುಟ್ಬಾಲ್ ಆಡುವಾಗ ಎಚ್ಚರ ತಪ್ಪಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ ಆತ್ಮಹತ್ಯೆಗೆ ಶರಣಾದ ರಣಧೀರ್ ಮಾರ್ಚ್ 2 ರಂದು ಮಂಗಳವಾರ ಸಂಜೆವರೆಗೂ ರೂಂ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ಉಳಿದ ವಿದ್ಯಾರ್ಥಿಗಳು ರಕ್ಷಣಾ ಸಿಬ್ಬಂದಿಗೆ ವಿಷಯ ತಿಳಿಸಿದ್ರು. ಸಿಬ್ಬಂದಿ ಬಾಗಿಲನ್ನು ತೆಗೆದಾಗ ರಣಧೀರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇತ್ತ ರಾಹುಲ್ ಪ್ರತಾಪ್ ಸಹ ಎಂದಿನಂತೆ ಫುಟ್ಬಾಲ್ ಆಡ್ತಿದ್ದವನು ಏಕಾಏಕಿ ಪ್ರಜ್ಞೆ ತಪ್ಪಿದ್ದು, ಸ್ನೇಹಿತರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರಾದ್ರೂ ಪ್ರತಾಪ್ ಬದುಕುಳಿದಿಲ್ಲ.
ಘಟನೆಯ ಬಗ್ಗೆ ಐಐಎಸ್ಸಿ ಉನ್ನತಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರು, ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಐಐಎಸ್ಸಿ ವಿದ್ಯಾರ್ಥಿಗಳು ಸಮಸ್ಯೆ ಇದ್ದರೆ ಐಐಎಸ್ಸಿ ಸೌಕರ್ಯ ಬಳಸಿಕೊಂಡು ಸಹಾಯ ಪಡೆಯಬೇಕೆಂದು ಸೂಚಿಸಿದ್ದಾರೆ. ಒಟ್ನಲ್ಲಿ ಇನ್ನೇನು ಪದವಿ ಹೊಸ್ತಿಲಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳ ಅಂತ್ಯ ಇಡೀ ಕ್ಯಾಂಪಸ್ ಪಾಲಿಗೆ ನೋವಿನ ಸಂಗತಿಯಾಗಿದೆ.
ಇದನ್ನೂ ಓದಿ: ಎಕ್ಸಾಂ ಗೊಂದಲ? ವಿ.ವಿ.ಪುರಂ ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ವಿದ್ಯಾರ್ಥಿ ಸಾವು
Published On - 7:13 am, Thu, 4 March 21