ನಾನು ರಾಜೀನಾಮೆ ಕೊಟ್ಟರೆ ಬಾಲಚಂದ್ರ ಜಾರಕಿಹೊಳಿಯನ್ನ ಮಂತ್ರಿ ಮಾಡಿ.. ರಾಜೀನಾಮೆಗೆ ಮುನ್ನ ರಮೇಶ್ ಜಾರಕಿಹೊಳಿ ಹಾಕಿದ್ರಾ ಷರತ್ತು..
ಸಿಡಿ ಕೇಸ್ನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಹಿನ್ನೆಲೆಯಲ್ಲಿ ರಾಜೀನಾಮೆಗೂ ಮುನ್ನ ರಮೇಶ್ ಜಾರಕಿಹೊಳಿ ಷರತ್ತು ಹಾಕಿದ್ದಾರೆ. ಸಿಎಂ BSY, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತು ಕಥೆ ನಡೆಸಿದ್ದಾರೆ. ನಾನು ರಾಜೀನಾಮೆ ಕೊಟ್ಟರೆ ಬಾಲಚಂದ್ರ ಜಾರಕಿಹೊಳಿಯನ್ನ ಮಂತ್ರಿ ಮಾಡಿ ಎಂದು ಷರತ್ತು ಹಾಕಿದ್ದಾರೆ.
ಬೆಂಗಳೂರು: ರಾಸಲೀಲೆಯ ಸಿಡಿಯಿಂದಾಗಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನದಿಂದ ಜಾರಿಬಿದ್ದಿದ್ದಾರೆ. ಆದ್ರೆ ರಾಜೀನಾಮೆಗೆ ಮುನ್ನ ಸಾಹುಕಾರ್ ಒಂದು ಷರತ್ತು ಹಾಕಿದ್ದಾರಂತೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳಿ ಒಂದು ಬೇಡಿಕೆ ಇಟ್ಟಿದ್ದಾರೆ. ದೂರವಾಣಿ ಮೂಲಕ ಮಾತಾಡಿರುವ ರಮೇಶ್ ಜಾರಕಿಹೊಳಿ ನಾನು ರಾಜೀನಾಮೆ ಕೊಟ್ಟರೆ ನಮ್ಮ ಕುಟುಂಬಕ್ಕೆ ಬಹಳ ಅನ್ಯಾಯವಾಗುತ್ತೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಇದೆ. ಹೀಗಾಗಿ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಕಂಡೀಷನ್ ಹಾಕಿದ್ದಾರಂತೆ.
ಸಿಡಿ ಕೇಸ್ನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಹಿನ್ನೆಲೆಯಲ್ಲಿ ರಾಜೀನಾಮೆಗೂ ಮುನ್ನ ರಮೇಶ್ ಜಾರಕಿಹೊಳಿ ಷರತ್ತು ಹಾಕಿದ್ದಾರೆ. ಸಿಎಂ BSY, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತು ಕಥೆ ನಡೆಸಿದ್ದಾರೆ. ನಾನು ರಾಜೀನಾಮೆ ಕೊಟ್ಟರೆ ಬಾಲಚಂದ್ರ ಜಾರಕಿಹೊಳಿಯನ್ನ ಮಂತ್ರಿ ಮಾಡಿ ಎಂದು ಷರತ್ತು ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಾಲಚಂದ್ರ ಜಾರಕಿಹೊಳಿಯವರನ್ನು ಮಂತ್ರಿ ಮಾಡಬೇಕು. ನಮ್ಮ ಕುಟುಂಬಕ್ಕೆ ಬಹಳ ಅನ್ಯಾಯವಾಗುತ್ತೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಇದೆ. ಹೀಗಾಗಿ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅದಕ್ಕೆ ಸಿಎಂ ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್ ಆಯ್ತು ನೋಡೋಣ ಎಂದು ಭರವಸೆ ಕೊಟ್ಟಿದ್ದಾರಂತೆ.
ಇದನ್ನೂ ಓದಿ: ಈ ಘಟನೆಯಿಂದ ರಮೇಶ್ ಜಾರಕಿಹೊಳಿಗೆ ಹೊಡೆತ ಬಿದ್ದಿದೆ, ಸುಧಾರಿಸಿಕೊಳ್ಳಲು ಸಮಯ ಬೇಕು: ಸಹೋದರ ಸತೀಶ್ ಜಾರಕಿಹೊಳಿ