ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿವಾಹಿತ ಮಹಿಳೆ ಹಾಗೂ ಯುವಕನನ್ನ ಕೊಚ್ಚಿ ಕೊಚ್ಚಿ ಕೊಂದ್ರು..

ವಿಜಯಪುರ: ವಿವಾಹಿತ ಮಹಿಳೆಯೊಂದಿಗೆ ಯುವಕ ಅನೈತಿಕ ಚಟುವಟಿಕೆ ನಡೆಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಜೋಡಿ ಕೊಲೆಯಾಗಿದೆ. ಮಹಿಳೆಯ ಮಗ ಹಾಗೂ ಮಹಿಳೆಯ ತಂದೆ ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಡಬಲ್ ಮರ್ಡರ್ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ತೋಟದ ಮನೆಯ ಬಳಿ‌ ನಡೆದಿದೆ. ಅಮರನಾಥ ಸೊಲ್ಲಾಪುರ(25), ಸುನೀತಾ ತಳವಾರ(35) ಕೊಲೆಯಾದವರು. ನಿನ್ನೆ ಮಧ್ಯ ರಾತ್ರಿ ಅಮರನಾಥ್ ಸುನೀತಾ ಬಳಿ ಬಂದಿದ್ದ. ನಂತರ ಇವರಿಬ್ಬರು ಅಲಿಯಾಬಾದ್ ಗ್ರಾಮದ ತೋಟದ ಮನೆಯಲ್ಲಿ ರಾಸಲೀಲೆ ಶುರು ಮಾಡಿದ್ದರು. ಇದೇ […]

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿವಾಹಿತ ಮಹಿಳೆ ಹಾಗೂ ಯುವಕನನ್ನ ಕೊಚ್ಚಿ ಕೊಚ್ಚಿ ಕೊಂದ್ರು..
Updated By:

Updated on: Jul 23, 2020 | 12:23 PM

ವಿಜಯಪುರ: ವಿವಾಹಿತ ಮಹಿಳೆಯೊಂದಿಗೆ ಯುವಕ ಅನೈತಿಕ ಚಟುವಟಿಕೆ ನಡೆಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಜೋಡಿ ಕೊಲೆಯಾಗಿದೆ. ಮಹಿಳೆಯ ಮಗ ಹಾಗೂ ಮಹಿಳೆಯ ತಂದೆ ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಡಬಲ್ ಮರ್ಡರ್ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ತೋಟದ ಮನೆಯ ಬಳಿ‌ ನಡೆದಿದೆ. ಅಮರನಾಥ ಸೊಲ್ಲಾಪುರ(25), ಸುನೀತಾ ತಳವಾರ(35) ಕೊಲೆಯಾದವರು.

ನಿನ್ನೆ ಮಧ್ಯ ರಾತ್ರಿ ಅಮರನಾಥ್ ಸುನೀತಾ ಬಳಿ ಬಂದಿದ್ದ. ನಂತರ ಇವರಿಬ್ಬರು ಅಲಿಯಾಬಾದ್ ಗ್ರಾಮದ ತೋಟದ ಮನೆಯಲ್ಲಿ ರಾಸಲೀಲೆ ಶುರು ಮಾಡಿದ್ದರು. ಇದೇ ವೇಳೆಗೆ ಸುನೀತಾಳ ತಂದೆ ಹಾಗೂ ಆಕೆಯ ಅಪ್ರಾಪ್ತ ವಯಸ್ಸಿನ ಮಗ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರ ರಾಸಲೀಲೆ ನೋಡಲಾಗದೆ ಕೋಪಗೊಂಡು ಕೊಡಲಿಯಿಂದ ಕೊಚ್ಚಿ ಇಬ್ಬರ ಕೊಲೆ ಮಾಡಿದ್ದಾರೆ.

ಸದ್ಯ ಕೊಲೆಯಾದ ಸುನೀತಾಳ ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ರಾಮಗೊಂಡ ಪೊಲೀಸರ ವಶದಲ್ಲಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮಹಾಂತೇಶ ದಾಮಣ್ಣವರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Published On - 8:11 am, Wed, 22 July 20