India vs Australia Adelaide Test ಗುಡಿಸಿ ಗುಂಡಾತರವಾಯ್ತು ಭಾರತದ ಬ್ಯಾಟಿಂಗ್​.. ತಂಡಕ್ಕೆ ಮತ್ತೊಂದು ಆಘಾತ!

| Updated By: ಸಾಧು ಶ್ರೀನಾಥ್​

Updated on: Dec 19, 2020 | 11:29 AM

ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್​ನ ಬ್ಯಾಟಿಂಗ್​ ಮುಂದುವರಿಸಿರುವ ಭಾರತ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ತಾಜಾ ವರದಿಗಳ ಪ್ರಕಾರ ಭಾರತ ತಂಡವು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರಿಗೆ ಆಲ್​ಔಟ್​ ಆಗಿದೆ. ಸ್ಕೋರ್​: 36ಕ್ಕೆ ಆಲೌಟ್​.

India vs Australia Adelaide Test ಗುಡಿಸಿ ಗುಂಡಾತರವಾಯ್ತು ಭಾರತದ ಬ್ಯಾಟಿಂಗ್​.. ತಂಡಕ್ಕೆ ಮತ್ತೊಂದು ಆಘಾತ!
ಭಾರತ ತಂಡವು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರಿಗೆ ಆಲ್​ಔಟ್​
Follow us on

ಅಡಿಲೇಡ್:​ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್​ನ ಎರಡನೇ ಇನ್ನಿಂಗ್ಸ್ ಬಳಿಕ ಭಾರತ ತುಂಬಾ ಸಂಕಷ್ಟಕ್ಕೆ ಸಿಲುಕಿದೆ. ಮೂರನೇ ದಿನ ತನ್ನ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರಿಗೆ ಆಲ್​ಔಟ್​ ಆಗಿದೆ.

ಕಳಪೆ ಬ್ಯಾಟಿಂಗ್​ನಿಂದಾಗಿ ಭಾರತ ತಂಡವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸ್ಕೋರ್​: 36ಕ್ಕೆ ಆಲೌಟ್​. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್ ಲೀಡ್​ ಸೇರಿ 90 ರನ್ನುಗಳ ಮುನ್ನಡೆ ಸಾಧಿಸಿದೆ. ಅಂದರೆ ಆಸ್ಟ್ರೇಲಿಯಾಕ್ಕೆ 90 ರನ್​ಗಳ ಗುರಿ ನೀಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳದ್ದೇ ಇದುವರೆಗಿನ ಅತ್ಯಲ್ಪ ಸ್ಕೋರ್!

ಭಾರತ 1974 ರಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 47 ಗಳಿಸಿದ್ದು ಟೆಸ್ಟ್​ ಇನ್ನಿಂಗ್ಸ್​ ಒಂದರಲ್ಲಿ ಗಳಿಸಿದ ಕನಿಷ್ಠ ಮೊತ್ತವಾಗಿತ್ತು. ಅದೇ ರೀತಿ ಆಸ್ಟ್ರೇಲಿಯಾ ಕೂಡ ಒಂದು ಟೆಸ್ಟ್​ ಇನ್ನಿಂಗ್ಸ್​​ನಲ್ಲಿ ಗಳಿಸಿದ ಕನಿಷ್ಠ ಮೊತ್ತ 47 ರನ್​ಗಳು.

ಭಾರತ ತಂಡಕ್ಕೆ ಮತ್ತೊಂದು ಆಘಾತ!
ಐತಿಹಾಸಿಕ ಅಲ್ಪ ಸ್ಕೋರಿಗೆ ಆಲ್​ ಔಟ್​ ಆಗಿದ್ದರೂ ಭಾರತ ತಂಡ ಉತ್ತಮ ಬೌಲಿಂಗ್​ ಮೂಲಕ ತಿರುಗೇಟು ನೀಡಬಹುದು ಎಂದು ಭಾವಿಸಲಾಗಿತ್ತು. ಆದ್ರೆ ಕೊನೆಯ ಬ್ಯಾಟ್ಸ್​ಮನ್​ ಆಗಿ ಔಟಾದ ಮೊಹಮದ್ ಶಮಿ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಅದೂ ಶಮಿ ಮುಂಗೈಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದಾರೆ. ಬೌಲಿಂಗ್​ ಮಾಡಲೂ ಸಹ ಕಷ್ಟಕರವಾಗಬಹುದು ಎಂದು ತಿಳಿದುಬಂದಿದೆ. ಹಾಗೇನಾದರೂ ಆದ್ರೆ ಬೌಲಿಂಗ್​ನಲ್ಲಿ ಅತ್ಯುತ್ತಮ ಫಾರಂನಲ್ಲಿರುವ ಶಮಿ ಇಲ್ಲದೆಯೇ ಭಾರತ ತಂಡವು ಬೌಲಿಂಗ್ ದಾಳಿಗೆ ಇಳಿದರೆ ಇಕ್ಕಟ್ಟಿಗೆ ಸಿಲುಕಬೇಕಾದೀತು.

Published On - 11:17 am, Sat, 19 December 20