India Cricket Schedule 2021-23: ಭಾರತೀಯ ಸೀನಿಯರ್ ಆಟಗಾರರಿಗೆ ಬಿಡುವಿಲ್ಲದ ಶೆಡ್ಯೂಲ್ ಪ್ರಕಟಿಸಿದ ಬಿಸಿಸಿಐ

|

Updated on: Feb 06, 2021 | 8:44 PM

2020ರಲ್ಲಿ ನಡೆಯಬೇಕಿದ್ದ ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಈ ವರ್ಷಕ್ಕೆ ಮುಂದೂಡಲ್ಪಟ್ಟಿರುವುದರಿಂದ ಪ್ರಸಕ್ತ ವರ್ಷದ ಕ್ರಿಕೆಟ್ ಶೆಡ್ಯೂಲ್​ನಲ್ಲಿ ಭಾರತೀಯ ಆಟಗಾರರಿಗೆ ಬಿಡುವಿಲ್ಲದಂಥ ಸ್ಥಿತಿಯನ್ನು ನಿರ್ಮಿಸಿದೆ.

India Cricket Schedule 2021-23: ಭಾರತೀಯ ಸೀನಿಯರ್ ಆಟಗಾರರಿಗೆ ಬಿಡುವಿಲ್ಲದ ಶೆಡ್ಯೂಲ್ ಪ್ರಕಟಿಸಿದ ಬಿಸಿಸಿಐ
ಬಿಸಿಸಿಐ
Follow us on

ಕೊವಿಡ್-19 ಪಿಡುಗು ದೇಶದಲ್ಲಿ ಎಬ್ಬಿಸಿದ ಭಾರಿ ಪ್ರಮಾಣದ ಕೋಲಾಹಲದಿಂದ ಭಾರತದ 2020ರ ಕ್ರಿಕೆಟ್ ಶೆಡ್ಯೂಲ್ ಏರುಪೇರುಗೊಂಡಿತು. ಅದೃಷ್ಟವಶಾತ್ ಸಾಂಕ್ರಾಮಿಕ ಸೋಂಕಿನ ಉಪಟಳ ಈಗ ಬಹಳಷ್ಟು ಮಟ್ಟಿಗೆ ತಗ್ಗಿದ್ದು ಲಸಿಕೆಗಳೂ ಲಭ್ಯವಾಗಿವೆ. 2020ರಲ್ಲಿ ನಡೆಯಬೇಕಿದ್ದ ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಈ ವರ್ಷಕ್ಕೆ ಮುಂದೂಡಲ್ಪಟ್ಟಿರುವುದರಿಂದ ಪ್ರಸಕ್ತ ವರ್ಷದ ಕ್ರಿಕೆಟ್ ಶೆಡ್ಯೂಲ್​ನಲ್ಲಿ ಭಾರತೀಯ ಆಟಗಾರರಿಗೆ ಬಿಡುವಿಲ್ಲದಂಥ ಸ್ಥಿತಿಯನ್ನು ನಿರ್ಮಿಸಿದೆ.

ಕೊವಿಡ್-19 ಪ್ರಭಾವ ತಗ್ಗಿದ ನಂತರ ಭಾರತದಲ್ಲಿ ಶುರುವಾಗಿರುವ ಚಟುವಟಿಕೆಗಳಲ್ಲಿ ಹೆಚ್ಚುಕಡಿಮೆ ಸೀನಿಯರ್ ಮತ್ತು ಜ್ಯೂನಿಯರ್ ಆಟಗಾರರು ತೊಡಗಿಸಿಕೊಂಡಿರುವಂತೆಯೇ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸೀನಿಯರ್ ರಾಷ್ಟ್ರೀಯ ತಂಡದ ಎರಡು ವರ್ಷಗಳ ಶೆಡ್ಯೂಲನ್ನು ಪ್ರಕಟಿಸಿದೆ.
2021ರಿಂದ 2023ರವರೆಗೆ ಬಿಸಿಸಿಯ ಪ್ರಕಟಿಸಿರುವ ಶೆಡ್ಯೂಲ್ ಹಿರಿಯರ ರಾಷ್ಟ್ರೀಯ ಟೀಮಿನ ಸದಸ್ಯರನ್ನು ಎರಡು ವರ್ಷಗಳ ಕಾಲ ಸಂಪೂರ್ಣವಾಗಿ ಬ್ಯುಸಿಯಾಗಿಡಲಿದೆ.

ಭಾರತದ 2021 ರ ಕ್ರಿಕೆಟಿಂಗ್ ಶೆಡ್ಯೂಲ್ ಹೀಗಿದೆ:

ಏಪ್ರಿಲ್ ನಿಂದ ಮೇ 2021 ರವರೆಗೆ
ಇಂಡಿಯನ್ ಪ್ರಿಮೀಯರ್ ಲೀಗ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಜೂನ್​ನಲ್ಲಿ ನಡೆಯಲಿದೆ

ಜೂನ್​ನಿಂದ ಜುಲೈ 2021
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ಜೂನ್)
ಭಾರತ ಮತ್ತು ಶ್ರೀಲಂಕಾ ಸರಣಿ (3ಒಡಿಐ, 5 ಟಿ20ಐಗಳು)
ಏಷ್ಯಾ ಕಪ್

ಜುಲೈ 2021
ಭಾರತ-ಜಿಂಬಾಬ್ವೆ (3 ಏಕದಿನ)

ಜುಲೈನಿಂದ ಸೆಪ್ಟೆಂಬರ್ 2021
ಇಂಗ್ಲೆಂಡ್ ವಿರುದ್ಧ 5 ಟೆಸ್ಟ್​ಗಳು

ಅಕ್ಟೋಬರ್ 2021
ಭಾರತ-ದಕ್ಷಿಣ ಆಫ್ರಿಕಾ (3 ಒಡಿಐಗಳು 5 ಟಿ20ಐಗಳು)

ಅಕ್ಟೋಬರ್​ನಿಂದ ನವೆಂಬರ್ 2021
ಐಸಿಸಿ ಟಿ20 ವಿಶ್ವಕಪ್

ನವೆಂಬರ್​ನಿಂದ ಡಿಸೆಂಬರ್ 2021
ಭಾರತ-ನ್ಯೂಜಿಲೆಂಡ್ (2 ಟೆಸ್ಟ್, 3ಟಿ20ಐಗಳು)
ಭಾರತ-ದಕ್ಷಿಣ ಆಫ್ರಿಕಾ (3 ಟೆಸ್ಟ್, 3ಟಿ20ಐಗಳು)

2022 ನೇ ವರ್ಷಕ್ಕೆ ಭಾರತದ ಕ್ರಿಕೆಟ್ ಶೆಡ್ಯೂಲ್
ಜನೆವರಿಯಿಂದ ಮಾರ್ಚ್ 2022
ಭಾರತ-ವೆಸ್ಟ್ ಇಂಡೀಸ್ (3 ಒಡಿಐ, 3ಟಿ20ಐಗಳು )
ಭಾರತ-ಶ್ರೀಲಂಕಾ (3 ಟೆಸ್ಟ್, 3ಟಿ20ಐಗಳು)

ಏಪ್ರಿಲ್​ನಿಂದ ಮೇ 2022
ಇಂಡಿಯನ್ ಪ್ರಿಮೀಯರ್ ಲೀಗ್ 2022

ಜೂನ್ 2022
ಯಾವುದೇ ಸರಣಿ/ಟೂರ್ನಮೆಂಟ್ ಶೆಡ್ಯೂಲ್ ಆಗಿಲ್ಲ

ಜುಲೈಯಿಂದ ಆಗಸ್ಟ್ 2022
ಭಾರತ-ಇಂಗ್ಲೆಂಡ್ (3ಒಡಿಐ, 3ಟಿ20ಐಗಳು)
ಭಾರತ-ವೆಸ್ಟ್ ಇಂಡೀಸ್ (3 ಒಡಿಐ, 3 ಟಿ20ಐಗಳು)

ಸೆಪ್ಟೆಂಬರ್ 2022
ಏಷ್ಯಾ ಕಪ್ (ಸ್ಥಳ ಇನ್ನೂ ನಿರ್ಧಾರವಾಗಿಲ್ಲ)

ಅಕ್ಟೋಬರ್​ನಿಂದ ನವೆಂಬರ್ 2022
ಐಸಿಸಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ

ನವೆಂಬರ್​ನಿಂದ ಡಿಸೆಂಬರ್ 2022
ಭಾರತ-ಬಾಂಗ್ಲಾದೇಶ (2 ಟೆಸ್ಟ್, 3ಟಿ20ಐಗಳು)
ಭಾರತ-ಶ್ರೀಲಂಕಾ (5 ಒಡಿಐಗಳು)

2023 ವರ್ಷಕ್ಕೆ ಭಾರತೀಯ ಕ್ರಿಕೆಟ್ ತಂಡದ ಶೆಡ್ಯೂಲ್
ಜನೆವರಿ 2023

ಭಾರತ-ನ್ಯೂಜಿಲೆಂಡ್ (3 ಒಡಿಐ ಮತ್ತು 3 ಟಿ20ಐಗಳು)

ಫೆಬ್ರುವರಿಯಿಂದ ಮಾರ್ಚ್​ 2023
ಭಾರತ-ಆಸ್ಟ್ರೇಲಿಯಾ (4 ಟೆಸ್ಟ್ 4ಒಡಿಐ ಮತ್ತು 3 ಟಿ20ಐಗಳು)
2021ರಿಂದ 2023ರವರೆಗೆ ಭಾರತವು ಮೂರು ಐಸಿಸಿ ವಿಶ್ವಕಪ್​ಗಳನ್ನು ಆಡಲಿದೆ-ಎರಡು ಟಿ20 ಮತ್ತು ಒಂದು 50-ಓವರ್​ಗಳ ವಿಶ್ವಕಪ್

India vs England Test Series | ಐಪಿಎಲ್ ಆಡುವಾಗ ಬಹಳಷ್ಟು ಅಂಶಗಳನ್ನು ವಿದೇಶಿ ಆಟಗಾರರೊಂದಿಗೆ ನಾವು ಶೇರ್ ಮಾಡಲ್ಲ: ರಹಾನೆ

Published On - 8:27 pm, Sat, 6 February 21