Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ.. ಹೆಣ್ಣು ಮಕ್ಕಳ ಭವಿಷ್ಯಕ್ಕೆ ವರದಾನ

Sukanya Samriddhi Yojana ಖಾತೆಗೆ ಸತತ 14 ವರ್ಷ ಹಣ ತುಂಬಬೇಕಿದ್ದು, 18 ವರ್ಷ ತುಂಬಿದ ನಂತರ ಅವಶ್ಯಕತೆಗನುಗುಣವಾಗಿ ಹಣ ಪಡೆಯುವ ಅವಕಾಶವಿದೆ. 21 ವರ್ಷ ತುಂಬಿದ ನಂತರ ಖಾತೆಯನ್ನು ಮುಚ್ಚಬಹುದಾಗಿದೆ.

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ.. ಹೆಣ್ಣು ಮಕ್ಕಳ ಭವಿಷ್ಯಕ್ಕೆ ವರದಾನ
ಸುಕನ್ಯಾ ಸಮೃದ್ಧಿ ಯೋಜನೆ (ಸಾಂದರ್ಭಿಕ ಚಿತ್ರ)
Follow us
Skanda
| Updated By: ರಾಜೇಶ್ ದುಗ್ಗುಮನೆ

Updated on: Feb 06, 2021 | 8:33 PM

ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿವೆ. ಹೆಣ್ಣು ಮಕ್ಕಳು ಕುಟುಂಬಕ್ಕೆ ಹೊರೆಯೆನ್ನುವ ತಪ್ಪು ಆಲೋಚನೆಗೆ ಅಂತ್ಯ ಹಾಡಲು ಅನೇಕ ಪ್ರಯತ್ನಗಳು ಸರ್ಕಾರದ ವತಿಯಿಂದ ಆಗಿವೆ. ಆ ಪೈಕಿ ಭಾರತ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯೂ (Sukanya Samriddhi Yojana) ಒಂದು. ಕಳೆದ ಕೆಲ ವರ್ಷಗಳಿಂದೀಚೆಗೆ ಜನಪ್ರಿಯವಾಗಿರುವ ಈ ಯೋಜನೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ.

ಆದರೆ, ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವಾಲಯ ಈ ಯೋಜನೆಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ತಂದಿದೆ. ಸದ್ಯ ಶೇ.7.6ರಷ್ಟು ವಾರ್ಷಿಕ ಬಡ್ಡಿ ದರವನ್ನು ಒದಗಿಸುತ್ತಿರುವ ಈ ಯೋಜನೆ, ತೆರಿಗೆ ರಿಯಾಯಿತಿಯನ್ನೂ ಹೊಂದಿದೆ. ಕೇವಲ ಅಂಚೆ ಕಚೇರಿಯಲ್ಲಷ್ಟೇ ಅಲ್ಲದೇ ಖಾಸಗಿ ಬ್ಯಾಂಕ್​ಗಳಲ್ಲೂ ಈ ಯೋಜನೆ ಲಭ್ಯವಿದ್ದು, ನಿಮ್ಮ ಮಗಳಿಗೆ 14 ವರ್ಷ ತುಂಬುವ ತನಕ ಹಣ ಹೂಡಿಕೆ ಮಾಡಿದರೆ 21 ವರ್ಷ ಮುಗಿಯುವ ವೇಳೆಗೆ ಹಣ ನಿಮ್ಮ ಕೈ ಸೇರಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬೇಕು. ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಯಾವುದಾದರೂ ಗುರುತಿನ ಚೀಟಿ, (PAN, ರೇಷನ್​ ಕಾರ್ಡ್​, ಡ್ರೈವಿಂಗ್​ ಲೈಸೆನ್ಸ್​, ಪಾಸ್​ಪೋರ್ಟ್​), ವಿಳಾಸದ ಗುರುತನ್ನು ಸಲ್ಲಿಸುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆದ ಬಳಿಕ ನಿಮಗೊಂದು ಪಾಸ್​ಬುಕ್​ ದೊರೆಯಲಿದ್ದು, ಕನಿಷ್ಠ ₹250ರಿಂದ ಗರಿಷ್ಠ ₹1.50 ಲಕ್ಷವನ್ನು ವಾರ್ಷಿಕ ಈ ಯೋಜನೆಯಲ್ಲಿ ಕಟ್ಟಬಹುದಾಗಿದೆ.

ಈ ಮೊದಲು ಹೆಣ್ಣು ಮಗುವಿಗೆ 10 ವರ್ಷವಾಗುತ್ತಿದ್ದಂತೆಯೇ ಖಾತೆ ನಿರ್ವಹಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಆ ನಿಯಮವನ್ನು ಈಗ ಬದಲಿಸಲಾಗಿದ್ದು 18 ವರ್ಷ ತುಂಬಿದ ನಂತರವಷ್ಟೇ ಖಾತೆ ನಿರ್ವಹಣೆ ಮಾಡಬಹುದಾಗಿದೆ. ಜೊತೆಗೆ ಲಾಕ್​ಡೌನ್​ ಕಾರಣದಿಂದ ಕಳೆದ ಬಾರಿ 10 ವರ್ಷದೊಳಗೆ ಖಾತೆ ತೆರೆಯಲಾಗದಿದ್ದವರಿಗೆ ಇನ್ನೊಂದು ಅವಕಾಶವನ್ನೂ ನೀಡಲಾಗಿದೆ.

ಈ ಖಾತೆಗೆ ಸತತ 14 ವರ್ಷ ಹಣ ತುಂಬಬೇಕಿದ್ದು, 18 ವರ್ಷ ತುಂಬಿದ ನಂತರ ಅವಶ್ಯಕತೆಗನುಗುಣವಾಗಿ ಹಣ ಪಡೆಯುವ ಅವಕಾಶವಿದೆ. 21 ವರ್ಷ ತುಂಬಿದ ನಂತರ ಖಾತೆಯನ್ನು ಮುಚ್ಚಬಹುದಾಗಿದೆ. ಒಟ್ಟಾರೆಯಾಗಿ ನೋಡಿದರೆ ಹೆಣ್ಣು ಹೆತ್ತವರಿಗೆ ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು, ಬಡ್ಡಿದರವೂ ಚೆನ್ನಾಗಿರುವ ಕಾರಣ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.

SBI Cash Withdrawal Rules ಎಸ್​ಬಿಐ ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ !

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’