SBI Cash Withdrawal Rules ಎಸ್ಬಿಐ ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ !
ಎಸ್ಬಿಐ ಎಟಿಎಂಗಳಲ್ಲಿ 10,000 ರೂ. ಎಂದು ನಮೂದಿಸುತ್ತಿದ್ದಂತೆ ನಿಮ್ಮ ರಿಜಿಸ್ಟರ್ ಮೊಬೈಲ್ಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಸರಿಯಾಗಿ ನಮೂದಿಸಿದರೆ ಮಾತ್ರ ಅಷ್ಟು ಹಣವನ್ನು ಪಡೆಯಬಹುದು.
ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ (State Bank of India-SBI), ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ, ತನ್ನ ಎಟಿಎಂ ನಗದು ತೆಗೆಯುವ ನಿಯಮಗಳನ್ನು ಪರಿಷ್ಕರಿಸಿದೆ. ಅದರ ಅನ್ವಯ ಗ್ರಾಹಕರು ತಮ್ಮ ಅಕೌಂಟ್ನಲ್ಲಿ ಕಡಿಮೆ ಬ್ಯಾಲೆನ್ಸ್ ಇದ್ದಾಗ ಎಟಿಎಂನಲ್ಲಿ ಟ್ರಾನ್ಸಾಕ್ಷನ್ ಮಾಡಲು ಹೋಗಿ, ವಿಫಲವಾದರೆ ಶುಲ್ಕ ಬೀಳುತ್ತದೆ. ಅಕೌಂಟ್ನಲ್ಲಿ ಕಡಿಮೆ ಹಣ ಇರುವ ಕಾರಣಕ್ಕೆ ಎಟಿಎಂ ಟ್ರಾನ್ಸಾಕ್ಷನ್ ವಿಫಲವಾದರೆ ಪ್ರತಿಬಾರಿಯೂ 20 ರೂ. ಮತ್ತು ಜಿಎಸ್ಟಿ ತೆರಬೇಕಾಗುತ್ತದೆ. ಇದನ್ನು ಎಸ್ಬಿಐ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಸ್ಪಷ್ಟಪಡಿಸಿದೆ. ಇದರೊಂದಿಗೆ ಹಣಕಾಸೇತರ ವ್ಯವಹಾರಗಳಿಗೆ ಕೂಡ ಶುಲ್ಕ ವಿಧಿಸುವುದಾಗಿ ತಿಳಿಸಿದೆ.
ಎಸ್ಬಿಐ ವೆಬ್ಸೈಟ್ನಲ್ಲಿ ಹೇಳಿದ್ದೇನು? ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಎಸ್ಬಿಐ ಎಟಿಎಂ ವ್ಯವಹಾರದ ಲಿಮಿಟ್ ಬಗ್ಗೆ ತಿಳಿದಿರಬೇಕು. ಯಾಕೆಂದರೆ ವಿಧಿಸಲಾದ ಮಿತಿಯನ್ನು ಮೀರಿದ ಯಾವುದೇ ವ್ಯವಹಾರಗಳಿಗೆ ಎಸ್ಬಿಐ 10 ರೂ.-20.ರೂ.ಗೂ ಹೆಚ್ಚು ಶುಲ್ಕ ವಿಧಿಸುತ್ತದೆ. ಅಲ್ಲದೆ ಗ್ರಾಹಕರು ಜಿಎಸ್ಟಿಯನ್ನೂ ತೆರಬೇಕಾಗುತ್ತದೆ. ಹಣದ ನಷ್ಟ ತಪ್ಪಿಸಬೇಕೆಂದರೆ ಎಸ್ಬಿಐ ಜಾರಿಗೊಳಿಸಿದ ಎಟಿಎಂ ವಿತ್ಡ್ರಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು ಎಂದು ವೆಬ್ಸೈಟ್ನಲ್ಲಿ ತಿಳಿಸಿದೆ. ಇನ್ನು ಎಸ್ಬಿಐ ಗ್ರಾಹಕರು, ತಮ್ಮ ಅಕೌಂಟ್ನಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡಲು ಮಿಸ್ಕಾಲ್, ಎಸ್ಎಂಎಸ್ ಸೌಲಭ್ಯಗಳಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದೂ ಎಸ್ಬಿಐ ತಿಳಿಸಿದೆ.
8 ಟ್ರಾನ್ಸಾಕ್ಷನ್ಗಳು ಉಚಿತ ಇನ್ನು ಎಸ್ಬಿಐನಲ್ಲಿ ಸೇವಿಂಗ್ಸ್ ಅಕೌಂಟ್ ಹೊಂದಿರುವ ಮೆಟ್ರೋ ಸಿಟಿಯಲ್ಲಿನ ಗ್ರಾಹಕರಿಗೆ ಒಂದು ತಿಂಗಳಲ್ಲಿ 8 ಎಟಿಎಂ ಟ್ರಾನ್ಸಾಕ್ಷನ್ಗಳನ್ನು ಉಚಿತವಾಗಿ ನೀಡುತ್ತದೆ. ಹಾಗೇ ಉಳಿದ ನಗರಗಳ ಗ್ರಾಹಕರಿಗೆ 10 ಎಟಿಎಂ ವ್ಯವಹಾರಗಳನ್ನು ಉಚಿತವಾಗಿ ನೀಡುತ್ತದೆ. ಹಾಗೇ, ಎಸ್ಬಿಐ ಹೊರತಾದ ಬ್ಯಾಂಕ್ನಲ್ಲಿ ಸೇವಿಂಗ್ಸ್ ಅಕೌಂಟ್ ಹೊಂದಿದ್ದವರು, ಎಸ್ಬಿಐ ಎಟಿಎಂನಲ್ಲಿ 5 ಟ್ರಾನ್ಸಾಕ್ಷನ್ಗಳನ್ನು ಫ್ರೀಯಾಗಿ ಮಾಡಬಹುದು.
ಎಸ್ಬಿಐ ಎಟಿಎಂಗಳಲ್ಲಿ ಒಂದು ಬಾರಿಗೆ 10,000 ರೂ.ವಿತ್ಡ್ರಾ ಮಾಡಬಹುದು. ಆದರೆ ಇದಕ್ಕೆ ಒಟಿಪಿ ಅಗತ್ಯವಾಗಿರುತ್ತದೆ. ನೀವು ಎಸ್ಬಿಐ ಎಟಿಎಂಗಳಲ್ಲಿ 10,000 ರೂ. ಎಂದು ನಮೂದಿಸುತ್ತಿದ್ದಂತೆ ನಿಮ್ಮ ರಿಜಿಸ್ಟರ್ ಮೊಬೈಲ್ಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಸರಿಯಾಗಿ ನಮೂದಿಸಿದರೆ ಮಾತ್ರ ಅಷ್ಟು ಹಣವನ್ನು ಪಡೆಯಬಹುದು. ಇದರಿಂದಾಗಿ ಹಣ ವಂಚನೆ ಪ್ರಕರಣ ತಗ್ಗಿಸಬಹುದು ಎಂದು ಎಸ್ಬಿಐ ತಿಳಿಸಿದೆ.
ರೈಲಿನಿಂದ ಬೀಳುತ್ತಿದ್ದ ವ್ಯಕ್ತಿಯನ್ನು ದೇವರ ರೂಪದಲ್ಲಿ ಬಂದು ರಕ್ಷಿಸಿದ ಸಿಬ್ಬಂದಿ!: ಇಲ್ಲಿದೆ ನೋಡಿ ವಿಡಿಯೋ